ಕನ್ನಡಪ್ರಭ ವಾರ್ತೆ ಶಿವಮೊಗ್ಗ ಹೊಸ ತಲೆಮಾರಿನ ಯುವಕರು ನಾಟಕ ಪ್ರದರ್ಶನಗಳನ್ನು ಆಸ್ವಾದಿಸಿ, ಆ ಪ್ರದರ್ಶನಗಳ ಬಗ್ಗೆ ವಿಶ್ಲೇಷಿಸಿ, ಅದರ ಒಳನೋಟಗಳನ್ನು ಅಕ್ಷರ ರೂಪದಲ್ಲಿ, ವೀಡಿಯೋ ರೂಪದಲ್ಲಿ ವಿಮರ್ಶಿಸುವ ದಿಸೆಯಲ್ಲಿ ಸೃಜನಶೀಲ ಬರಹಗಾರರನ್ನು ಗುರುತಿಸಿ ಅವರಿಗೆ ನಾಟಕದ ಬಗ್ಗೆ ತಿಳಿಸಿಕೊಡಲು ರಂಗಾಯಣವು ‘ನಾಟಕ ಅವಲೋಕನ ಕಾರ್ಯಾಗಾರ’ ಹಮ್ಮಿಕೊಂಡಿದೆ ಎಂದು ರಂಗಾಯಣದ ನಿರ್ದೇಶಕ ಪ್ರಸನ್ನ ಡಿ. ಸಾಗರ ತಿಳಿಸಿದರು.
ವಿಚಾರ ಮಂಡನೆ ಮತ್ತು ಸಂವಾದ:
ಅ.24ರಂದು ಬೆಳಗ್ಗೆ 11 ರಿಂದ ‘ನಾಟಕದ ಪ್ರವೇಶ ಮತ್ತು ಸಂವಿಧಾನ’ ವಿಚಾರ ಕುರಿತ ಸಂಪನ್ಮೂಲ ವ್ಯಕ್ತಿಗಳಾಗಿ ರಂಗನಿರ್ದೇಶಕ, ನಾಟಕಗಾರರಾದ ನಟರಾಜ್ ಹೊನ್ನವಳ್ಳಿ ಪಾಲ್ಗೊಳ್ಳುವರು. 12.30 ರಿಂದ 1ರವರೆಗೆ ಶಿಬಿರಾರ್ಥಿಗಳೊಂದಿಗೆ ಸಂವಾದ. ಮಧ್ಯಾಹ್ನ 2 ರಿಂದ 3.30 ರವರೆಗೆ ‘ರಂಗ ಪಠ್ಯಗಳ ವಿಶ್ಲೇಷಣೆ ಹಾಗೂ ವಿಸ್ತರಣೆ’ ಕುರಿತು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಾಹಕ ಕಾಲೇಜಿನ ಪ್ರೊ.ಟಿ. ಅವಿನಾಶ್ ಸಂಪನ್ಮೂಲ ವ್ಯಕ್ತಿಗಳಾಗಿ ವಿಚಾರ ಮಂಡಿಸುವರು. ಮಧ್ಯಾಹ್ನ 3.45 ರಿಂದ ಸಂಜೆ 6ರವರೆಗೆ ಗುಣಮುಖ ನಾಟಕ ಪ್ರದರ್ಶನ ಮತ್ತು ಸಂವಾದವನ್ನು ಪ್ರೊ. ಮೇಟಿ ಮಲ್ಲಿಕಾರ್ಜುನ ನಡೆಸಿಕೊಡುವರು ಎಂದು ತಿಳಿಸಿದರು. ಅ.25ರಂದು ಬೆಳಗ್ಗೆ 10 ರಿಂದ 10.30 ಗುಣಮುಖ ನಾಟಕದ ಕುರಿತು ಮಾತುಕತೆ. 10.40 ರಿಂದ 12.15ರವರೆಗೆ ಬರಹಗಾರ್ತಿ ಪ್ರೀತಿ ನಾಗರಾಜ್‌ರಿಂದ ನಾಟಕ ವಿಶ್ಲೇಷಣೆ, ವಿಮರ್ಶಾತ್ಮಕ ನೋಟ. ಮಧ್ಯಾಹ್ನ 2 ರಿಂದ 3.30 ರವರೆಗೆ ಹಿರಿಯ ರಂಗಕರ್ಮಿ ಹಾಗೂ ರಂಗಾಯನ ಶಿವಮೊಗ್ಗದ ಮಾಜಿ ನಿರ್ದೇಶಕ ಇಕ್ಬಾಲ್‌ರಿಂದ ನಾಟಕದ ಕಟ್ಟುವಿಕೆಯಲ್ಲಿ ನಿರ್ದೇಶಕ ಹಾಗೂ ನೇಪಥ್ಯ ಕುರಿತು ವಿಷಯ ಮಂಡನೆ, 3.45 ರಿಂದ ಸಂಜೆ 6 ಗಂಟೆವರೆಗೆ ಅಗ್ನಿ ಮತ್ತು ಮಳೆ ನಾಟಕ ಪ್ರದರ್ಶನ ಕುರಿತು ಸಂವಾದ ಇರಲಿದೆ ಎಂದರು. ಅ. 26-10-2024 ಬೆಳಗ್ಗೆ 10.45 ರಿಂದ ಮಧ್ಯಾಹ್ನ 12.15 ರವರೆಗೆ ನಾಟಕದ ವಿಶ್ಲೇಷಣೆಯಲ್ಲಿ ಬಹು ಮಾಧ್ಯಮಕಗಳ ಬಳಕೆ ಕುರಿತು ಬೆಂಗಳೂರಿನ ವರ್ಡ್ವೈಸ್ ಲಾಂಗ್ವೇಜ್ ಲ್ಯಾಬ್ಸ್‌ನ ಸಿಇಒ ಅವಿನಾಶ್ ಹೆಗ್ಗೋಡು ವಿಚಾರ ಮಂಡನೆ ಮಾಡುವರು. ಮಧ್ಯಾಹ್ನ 2 ರಿಂದ 3.30 ರವರೆಗೆ ನಾಟಕದ ವಿಷಯ ವಸ್ತುವಿನ ಗ್ರಹಿಕೆ ಕುರಿತು ಕಾರ್ಕಳ ಯಕ್ಷ ರಂಗಾಯಣ ನಿರ್ದೇಶಕ ವೆಂಕಟರಮಣ ವಿಚಾರ ಮಂಡಿಸುವರು. ಈ ಎಲ್ಲ ಕಾರ್ಯಕ್ರಮಗಳನ್ನು ಪ್ರೊ. ಮೇಟಿ ಮಲ್ಲಿಕಾರ್ಜುನ ನಡೆಸಿಕೊಡುವರು ಎಂದು ತಿಳಿಸಿದರು.ಗೋಷ್ಟಿಯಲ್ಲಿ ರಂಗಾಯಣ ಆಡಳಿತಾಧಿಕಾರಿ ಡಾ.ಎ.ಸಿ. ಶೈಲಜಾ , ಡಾ.ಜಿ.ಆರ್. ಲವ ಉಪಸ್ಥಿತರಿದ್ದರು.