ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 9.67 ಲಕ್ಷ ಮತದಾರರಿದ್ದು, ಈವರೆಗೆ 8.63 ಮತದಾರರ ಮ್ಯಾಪಿಂಗ್ ಕಾರ್ಯ ಪೂರ್ಣಗೊಳಿಸಲಾಗಿದೆ. ಇನ್ನೂ 1.03 ಲಕ್ಷ ಮಂದಿ ಮ್ಯಾಪಿಂಗ್ ಬಾಕಿ ಇದ್ದು, ಮುಂದಿನ ಕೆಲವು ದಿನಗಳಲ್ಲಿ ತ್ವರಿತವಾಗಿ ಮ್ಯಾಪಿಂಗ್ ಮಾಡಲಾಗುವುದು ಎಂದರು.
ಎಸ್‌ಐಆರ್ ಮ್ಯಾಪಿಂಗ್ ಕಾರ್ಯಕ್ಕೂ ಮತ್ತು ಎಸ್‌ಐಆರ್ (ಮತದಾರ ಒಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ) ಗೂ ನೇರವಾದ ಸಂಬಂಧವಿಲ್ಲ. ಆದರೆ, ಮ್ಯಾಪಿಂಗ್ ಮಾಡುವುದರಿಂದ ಎಸ್‌ಐಆರ್ ಪ್ರಕ್ರಿಯೆ ನಡೆಸು ವುದಕ್ಕೆ ಸರಳವಾಗಲಿದೆ ಎಂದು ಸ್ಪಷ್ಟಪಡಿಸಿದರು.ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಜೂ. 20ರಿಂದ 29ರವರೆಗೆ ತರಬೇತಿ ನಡೆಯುತ್ತಿದ್ದು, ಜೂ 30ರಿಂದ ಜುಲೈ 29ರವರೆಗೆ ಬಿಎಲ್‌ಓ ಗಳು ಮನೆಮನೆಗಳಿಗೆ ಭೇಟಿನೀಡಿ ಇನುಮರೇಶನ್ ಫಾರಂ ಗಳನ್ನು ಮತದಾರರಿಗೆ ನೀಡಲಿದ್ದಾರೆ. ಆ ಫಾರಂ ತುಂಬಿಕೊಟ್ಟರೆ, ಅದನ್ನು ಪರಿಶೀಲನೆ ಮಾಡಿ ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಅಪ್ ಲೋಡ್ ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿ ಮತಗಟ್ಟೆಗೆ ಒಬ್ಬರಂತೆ ಪ್ರತಿ ರಾಜಕೀಯ ಪಕ್ಷಗಳಿಂದ ಬೂತ್ ಮಟ್ಟದ ಏಜೆಂಟ್ ನೇಮಕ ಮಾಡ ಬೇಕಾಗಿದೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪರಿಶೀಲನಾ ಕೇಂದ್ರಗಳನ್ನು ತಾಲೂಕು ಕಚೇರಿ, ನಾಡಕಚೇರಿ, ಗ್ರಾಪಂ, ಗ್ರಾಮ ಆಡಳಿತಾಧಿಕಾರಿಗಳ ಕಚೇರಿ ಮತ್ತು ನಗರ ಮತ್ತು ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳಲ್ಲಿ ಸೂಕ್ತ ಮೂಲಸೌಕರ್ಯಗಳೊಂದಿಗೆ ಸ್ಥಾಪಿಸಲಾಗಿರುತ್ತದೆ ಎಂದು ತಿಳಿಸಿದರು.
-- ಬಾಕ್ಸ್ --
ವಿಧಾನಸಭಾ ಕ್ಷೇತ್ರ 2025ರ ಮತದಾರರ ಸಂಖ್ಯೆಮ್ಯಾಪಿಂಗ್ ಪೂರ್ಣಶೇಕಡವಾರು ಮ್ಯಾಪಿಂಗ್ ಬಾಕಿ
ಮೂಡಿಗೆರೆ1,68,8731,53,70791.0215,166
ತರೀಕೆರೆ1,93,1821,79,16993.1613,013
ಒಟ್ಟು9,57,2538,63,47389.271,03,625