ಕಮಿಷನ್‌ ಬಿಡುಗಡೆ ಮಾಡುವಂತೆ ಪಡಿತರ ವಿತರಕರ ಆಗ್ರಹ

KannadaprabhaNewsNetwork |  
Published : Sep 04, 2026, 03:00 AM IST
ಪಡಿತರ ವಿತರಕರು ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ ಮುಖಾಂತರ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಪ್ರತಿ ತಿಂಗಳ ಆಹಾರ ಧಾನ್ಯ ವಿತರಿಸುವ ಪಡಿತರ ವಿತರಕರಿಗೆ ಸರ್ಕಾರ ಶೀಘ್ರದಲ್ಲಿ ಕಮಿಷನ್‌ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಪಡಿತರ ವಿತರಕರು ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ ಮುಖಾಂತರ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿದರು.

ತಹಸೀಲ್ದಾರ ಮುಖಾಂತರ ಸರ್ಕಾರಕ್ಕೆ ಮನವಿ

ಕನ್ನಡಪ್ರಭ ವಾರ್ತೆ ನರಗುಂದ

ಪ್ರತಿ ತಿಂಗಳ ಆಹಾರ ಧಾನ್ಯ ವಿತರಿಸುವ ಪಡಿತರ ವಿತರಕರಿಗೆ ಸರ್ಕಾರ ಶೀಘ್ರದಲ್ಲಿ ಕಮಿಷನ್‌ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಪಡಿತರ ವಿತರಕರು ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ ಮುಖಾಂತರ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿದರು.

ತಾಲೂಕಾ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ 7 ವರ್ಷದ ಇ-ಕೆವೈಸಿ ಹಣ ಮತ್ತು 5 ತಿಂಗಳ ಕಮಿಷನ್ ಹಣ ಪಾವತಿಯಾಗದ ಕಾರಣ ವಿತರಕರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ಪ್ರತಿ ತಿಂಗಳ ವಿತರಣೆ ಕೇಂದ್ರಗಳ ಬಾಡಿಗೆ, ವಿತರಣೆ ಸಹಾಯಕರಿಗೆ ಕೂಲಿ ಕೊಡಲು ಜತೆಗೆ ಕುಟುಂಬ ನಿರ್ವಹಣೆಗೆ ತುಂಬಾ ತೊಂದರೆಯಾಗಿರುತ್ತದೆ.

ತಾಲೂಕಿನಲ್ಲಿ ಆಗಸ್ಟ್‌ ತಿಂಗಳಲ್ಲಿ ಸರ್ವರ್‌ ಸಮಸ್ಯೆಯಿಂದ ಇ-ಕೆವೈಸಿ ಕಾರ್ಯಕ್ಕೆ ನ್ಯಾಯಬೆಲೆ ಅಂಗಡಿ ಮಾಲೀಕರು ತುಂಬಾ ಸಮಸ್ಯೆ ಅನುಭವಿಸಿದ್ದೇವೆ. ಸರ್ವರ್‌ ಸಮಸ್ಯೆಯಿಂದ ಪಡಿತರದಾರರು ದಿನ ನಿತ್ಯ ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುತ್ತಿದ್ದಾರೆ. ಇದರಿಂದ ಪಡಿತರ ವಿತರಕರಿಗೆ ತುಂಬಾ ಮಾನಸಿಕ ತೊಂದರೆ ಆಗಿರುತ್ತದೆ. ಪಡಿತರದಾರ ಇ-ಕೆವೈಸಿ ಕಾರ್ಯವನ್ನು ಗ್ರಾಮ-1 ಹಾಗೂ ಕರ್ನಾಟಕ-1 ಸೇವಾ ಕೇಂದ್ರಗಳಲ್ಲಿ ಮಾಡಿಸುವ ಅವಕಾಶ ಕಲ್ಪಿಸಿದರೆ ಇ-ಕೆವೈಸಿ ಪ್ರಗತಿ ಉತ್ತಮವಾಗುತ್ತದೆ. ಸರ್ಕಾರ ಸರಿಯಾಗಿ ಸರ್ವರ್‌ ಸೇವೆ ಒದಗಿಸಿದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಸಹಿತ ಇ-ಕೆವೈಸಿ ಮಾಡಲು ಮುಂಚೂಣಿಯಲ್ಲಿರುತ್ತಾರೆ. ಇದರಿಂದ ಎಲ್ಲ ಪಡಿತರದಾರರಿಗೆ ಅನುಕೂಲವಾಗುತ್ತದೆ. ಆದಷ್ಟು ಬೇಗನೇ ಸಂಬಂದಪಟ್ಟ ಅಧಿಕಾರಿಗಳ ನಮ್ಮ ಸಮಸ್ಯೆ ಬಗೆಹರಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭ ಗುರಲಿಂಗಪ್ಪ ಹೊಸಕೇರಿ, ಸಂಜು ಭೋಸಲೆ, ಮಡಿವಾಳಯ್ಯ ಹಿರೇಮಠ, ಮಹಾಂತೇಶ ಜಂಬಗಿ, ಶರಣಪ್ಪ ಕೋಟಿ ಸೇರಿ ತಾಲೂಕಾ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಷ್ಟ್ರೀಯ ಸೇವಾ ಯೋಜನೆ ಘಟಕ ಉದ್ಘಾಟನೆ
ಹಾರಂಗಿ ಸಾಕಾನೆ ಶಿಬಿರ ಪ್ರವಾಸಿಗರಿಗೆ ಶೀಘ್ರ ಮುಕ್ತ