ಹಿರೇಮರಳಿ ಗ್ರಾಪಂ ಅಧ್ಯಕ್ಷೆಯಾಗಿ ರತ್ನಮ್ಮ ಆಯ್ಕೆ

KannadaprabhaNewsNetwork |  
Published : Jun 18, 2025, 12:39 AM IST
17ಕೆಎಂಎನ್ ಡಿ21 | Kannada Prabha

ಸಾರಾಂಶ

ತಾಲೂಕಿನ ಹಿರೇಮರಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ - ಉಪಾಧ್ಯಕ್ಷರಾಗಿ ಸಿ.ರತ್ನಮ್ಮ ಹಾಗೂ ಬಿ.ಜೆ.ವಿಜಯಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ಪಾಂಡವಪುರ: ತಾಲೂಕಿನ ಹಿರೇಮರಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ - ಉಪಾಧ್ಯಕ್ಷರಾಗಿ ಸಿ.ರತ್ನಮ್ಮ ಹಾಗೂ ಬಿ.ಜೆ.ವಿಜಯಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ - ಉಪಾಧ್ಯಕ್ಷರಾದ ಮಂಜುಳಾ ಹಾಗೂ ಕೃಷ್ಣೇಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದು ಗ್ರಾಪಂನ ಒಟ್ಟು 20 ಸದಸ್ಯರಲ್ಲಿ ಸಿ.ರತ್ನಮ್ಮ ಹಾಗೂ ಬಿ.ಜೆ.ವಿಜಯಕುಮಾರ್ ಹಾಗೂ ಬಿ.ಸಿ.ರೇವಣ್ಣ ನಾಮಪತ್ರ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬಯಸಿದ್ದ ಬಿ.ಸಿ.ರೇವಣ್ಣ ನಾಮಪತ್ರ ಹಿಂಪಡೆದರು. ಅಂತಿಮವಾಗಿ ಅಧ್ಯಕ್ಷ-ಉಪಾಧ್ಯಕ್ಷ ರಾಗಿ ಸಿ.ರತ್ನಮ್ಮ - ವಿಜಯಕುಮಾರ್ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಕಾವೇರಿ ನೀರಾವರಿ ನಿಗಮದ ವಿ.ಸಿ ಉಪವಿಭಾಗದ ಎಇಇ ಎಲ್.ಶಿವಪ್ರಸಾದ್ ಘೋಷಿಸಿದರು. ಈ ವೇಳೆ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷೆ ಮಂಜುಳಾ, ಮಾಜಿ ಉಪಾಧ್ಯಕ್ಷರಾದ ಯಶ್ವಂತ್ (ಪುಟ್ಟ), ಕೃಷ್ಣೇಗೌಡ, ಬಿ.ಎನ್. ಕುಮಾರಸ್ವಾಮಿ, ಸದಸ್ಯರಾದ ಜಯಲಕ್ಷ್ಮೀ, ಯಶವಂತಗೌಡ, ವಿ.ಎನ್. ಶ್ವೇತಾವಿಶ್ವ, ಹೇಮಲತಾ, ಸವಿತಾ ರಮೇಶ್, ರಮೇಶಶೆಟ್ಟಿ, ಬಿ.ಸಿ.ರೇವಣ್ಣ, ಎಚ್.ಎನ್.ನವೀನ (ಕೆಂಚಪ್ಪ), ಮಹಾದೇವಿ, ಎಚ್.ಎಂ.ಮನು, ಪುಷ್ಪಾ, ಉಮಾ, ಭಾಗ್ಯ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಎಚ್.ಬಿ.ಚಲುವೇಗೌಡ (ಬಕೋಡಿ), ಮುಖಂಡರಾದ ಎಚ್.ಎನ್.ಮಂಜುನಾಥ್, ಶಂಕರಪ್ಪ, ಶನಿ ಗುಡ್ಡಪ್ಪ, ಸಣ್ಣಪ್ಪಚಾರಿ, ಸೋಮಾಚಾರಿ, ವೆಲ್ಡಿಂಗ್ ಕಿರಣ್, ವಾಟರ್ ಸಿದ್ದೇಗೌಡ, ಬೇವಿನಕುಪ್ಪೆ ಶ್ರೀನಿವಾಸ್, ಚಿನಕುರಳಿ ಕೃಷ್ಣೇಗೌಡ, ಮೆಡಿಕಲ್ ಸುನೀಲ್, ರಾಗಿಮುದ್ದನಹಳ್ಳಿ ಭಾಸ್ಕರ, ರಮೇಶ್, ದರ್ಶನ್, ಆಟೋ ಸುನೀಲ್, ಪಿಡಿಒ ವೈ.ಡಿ.ನಿರಂಜನ್, ಕಾರ್ಯದರ್ಶಿ ಎಚ್.ಎಂ.ಸತೀಶ, ದ್ವಿತೀಯ ದರ್ಜೆ ಸಹಾಯಕ ಮರೀಗೌಡ, ಸಿಬ್ಬಂದಿಗಳಾದ ಜಿ.ಆರ್.ಸುರೇಶ್, ಸರಿತಾ, ವೀಣಾ ಇತರರಿದ್ದರು.------------- 17ಕೆಎಂಎನ್ ಡಿ21

ಪಾಂಡವಪುರ ತಾಲೂಕು ಹಿರೇಮರಳಿ ಗ್ರಾಪಂ ಅಧ್ಯಕ್ಷ - ಉಪಾಧ್ಯಕ್ಷರಾಗಿ ಆಯ್ಕೆಯಾದ ಸಿ.ರತ್ನಮ್ಮ ಹಾಗೂ ಬಿ.ಜೆ.ವಿಜಯಕುಮಾರ್ ಅವರನ್ನು ಅಭಿನಂದಿಸಲಾಯಿತು. ಮಂಜುಳಾ, ಯಶ್ವಂತ್ (ಪುಟ್ಟ), ಕೃಷ್ಣೇಗೌಡ, ಬಿ.ಎನ್. ಕುಮಾರಸ್ವಾಮಿ, ಜಯಲಕ್ಷ್ಮೀ, ಯಶವಂತಗೌಡ ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ