ರಟ್ಟೀಹಳ್ಳಿ: ಆ. 17ರಂದು ನಡೆಯುವ ಪಟ್ಟಣ ಪಂಚಾಯಿತಿ ಚುನಾವಣೆಗೆ 15 ವಾರ್ಡ್‌ಗಳಲ್ಲಿ 11ನೇ ವಾರ್ಡ್ ಹೊರತುಪಡಿಸಿ ಉಳಿದ 14 ವಾರ್ಡ್‌ಗಳಿಗೆ ಬಿಜೆಪಿ ಹುರಿಯಾಳುಗಳನ್ನು ಶುಕ್ರವಾರ ಪಕ್ಷದ ಕಾರ್ಯಾಲಯದಲ್ಲಿ ಘೋಷಣೆ ಮಾಡಲಾಯಿತು.
1ನೇ ವಾರ್ಡ್ ಪ. ಪಂಗಡಕ್ಕೆ ಸ್ಥಾನಕ್ಕೆ ರೇವಣ್ಣ ಸುಭಾಷ ಹದಡೇರ, 2ನೇ ವಾರ್ಡ್ ಹಿಂದುಳಿದ ವರ್ಗ(ಎ) ಮಹಿಳೆ ಬಸಮ್ಮ ರಾಮಪ್ಪ ಸಾವಕ್ಕಳವರ, 3ನೇ ವಾರ್ಡ್ ಸಾಮಾನ್ಯ ಸ್ಥಾನಕ್ಕೆ ಗಿರೀಶ ವೀರಪ್ಪ ಅಂಗರಗಟ್ಟಿ, 4ನೇ ವಾರ್ಡ್ ಸಾಮಾನ್ಯ ಸ್ಥಾನಕ್ಕೆ ರಾಘವೇಂದ್ರ ಶಿದ್ದಲಿಂಗಪ್ಪ ಹರವಿಶೆಟ್ಟರ್, ವಾರ್ಡ್ ನಂ. 5 ಹಿಂದುಳಿದ ವರ್ಗ(ಎ) ಸ್ಥಾನಕ್ಕೆ ಬಸವರಾಜ ಫಕ್ಕಿರಪ್ಪ ಆಡಿನವರ, 6ನೇ ವಾರ್ಡ್ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಸಮೀನಾಬಾನು ದೊಡ್ಡಮನಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ.ಅದೇ ರೀತಿ ವಾರ್ಡ್ ನಂ. 7 ಹಿಂದುಳಿದ ವರ್ಗ(ಬಿ) ರಾಜನಗೌಡ ನಿಂಗನಗೌಡ ಪಾಟೀಲ್, ವಾರ್ಡ್ ನಂ. 8 ಹಿಂದುಳಿದ ವರ್ಗ(ಎ) ಮಹಿಳೆ ಸ್ಥಾನಕ್ಕೆ ಲಕ್ಷ್ಮೀ ರಮೇಶ ಚಿಕ್ಕಮೊರಬ, ವಾರ್ಡ್ ನಂ. 9 ಸಾಮಾನ್ಯ ಸ್ಥಾನಕ್ಕೆ ಸುಶೀಲ್ ಏಳುಕೋಟಿರಾವ್ ನಾಡಿಗೇರ, ವಾರ್ಡ್ ನಂ. 10 ಸಾಮಾನ್ಯ ಸ್ಥಾನಕ್ಕೆ ಜಿಯಾವುಲ್ಲಾ ಮಹುಬ್‍ಸಾಬ ಮುಲ್ಲಾ, ವಾರ್ಡ್ ನಂ. 12 ಸಾಮಾನ್ಯ ಮಹಿಳೆ ಸ್ಥಾನಕ್ಕೆ ಮಂಜುಳಾ ರಾಮಪ್ಪ ಅಗಡಿ, ವಾರ್ಡ್ ನಂ. 13 ಸಾಮಾನ್ಯ ಮಹಿಳೆ ಸ್ಥಾನಕ್ಕೆ ಶ್ರೀದೇವಿ ಶ್ರೀನಿವಾಸ ಬೈರಪ್ಪನವರ, ವಾರ್ಡ್ 14 ಪರಿಶಿಷ್ಟ ಜಾತಿ ಬಸವರಾಜ ನರಸಪ್ಪ ಕಟ್ಟಿಮನಿ, ವಾರ್ಡ್ ನಂ. 15 ಸಾಮಾನ್ಯ ಮಹಿಳೆ ಸ್ಥಾನಕ್ಕೆ ಹೇಮಾವತಿ ಪ್ರಕಾಶ ಯಡಚಿ ಈ ರೀತಿಯಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಯಿತು.11ನೇ ವಾರ್ಡ್ ಹಿಂದುಳಿದ ವರ್ಗ(ಎ) ಸ್ಥಾನಕ್ಕೆ ಅಭ್ಯರ್ಥಿ ಫೈನಲ್ ಆಗಿಲ್ಲ. ಶೀಘ್ರ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುವುದು ಎಂದು ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ ಮಾಹಿತಿ ನೀಡಿದರು.ಮುಖಂಡರಾದ ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ, ಶಂಬಣ್ಣ ಗೂಳಪ್ಪನವರ, ಆರ್.ಎನ್. ಗಂಗೋಳ, ಗಣೇಶ ವೇರ್ಣೇಕರ್, ಹನುಮಂತಪ್ಪ ಗಾಜೇರ, ಬಸಣ್ಣ ಬಾಗೋಡಿ, ರಾಘವೇಂದ್ರ ಹರವಿಶೆಟ್ಟರ, ಸಿದ್ದು ಸಾವಕ್ಕನವರ, ರುದ್ರಪ್ಪ ಬೆನ್ನೂರ ಮುಂತಾದವರು ಇದ್ದರು.