ಮಂಗಳೂರು: ಸಂತ ರವಿದಾಸರ 650ನೇ ಜನ್ಮ ಜಯಂತಿ ಅಂಗವಾಗಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ (ಕೆಆರ್‌ಎಂಎಸ್‌ಎಸ್) ದಕ್ಷಿಣ ಕನ್ನಡ ಜಿಲ್ಲೆ ಘಟಕ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಬೈಕಂಪಾಡಿ, ಅಂಗಾರಗುಂಡಿ ಕ್ಲಸ್ಟರ್ ಸಂಯುಕ್ತ ಆಶ್ರಯದಲ್ಲಿ ಶಾಲೆಯ ಸಭಾಂಗಣದಲ್ಲಿ ಭಾರತೀಯ ಸಂತ ಪರಂಪರೆ ಉಪನ್ಯಾಸಮಾಲೆಯ 12ನೇ ಕಾರ್ಯಕ್ರಮ ನಡೆಯಿತು.
ಶ್ರೀನಿವಾಸ್ ವಿಶ್ವವಿದ್ಯಾನಿಲಯ ಪಾಂಡೇಶ್ವರ ಅಧ್ಯಾಪಕಿ ಸ್ವಾತಿ ಕಿರಣ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಶಾಲಾ ಮುಖ್ಯಗುರು ಚಂದ್ರಕಲಾ, ಶಿಕ್ಷಕರಾದ ಕುಸುಮ ಕೆ.ಆರ್., ಯಶೋದ ಬಿ., ಪ್ರೌಢಶಾಲಾ ಮುಖ್ಯಗುರು ಸುಜಯ ಬೇಕಲ್, ಶಿಕ್ಷಕ ಸವಿತಾ ಕೆ.ಎಸ್., ಪ್ರೊ.ನಾಗರತ್ನ ಮತ್ತಿತರರು ಇದ್ದರು.ಪರಮಾನಂದ ಪುಂಡಲೀಕ ಕುಲಗೋಡ ಸ್ವಾಗತಿಸಿದರು. ಪ್ರಕಾಶ ಪುಂಡಲೀಕ ಕುಲಗೋಡ ವಂದಿಸಿದರು.