ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಪಟ್ಟಣದ ಬಸ್ ನಿಲ್ದಾಣದ ಆಟೋ ಸ್ಟ್ಯಾಂಡ್‌ನಲ್ಲಿ ಮಂಗಳವಾರ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಿದ ಅಭಿಮಾನಿಗಳು ಆಟದಲ್ಲಿ ಆರ್‌ಸಿಬಿ ತಂಡ ವಿಜಯಿಯಾಗುತ್ತಿದ್ದಂತೆ ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಪಟ್ಟಣದ ಭದ್ರಾ ಸ್ಪೋರ್ಟ್ಸ್ ಕ್ಲಬ್, ಜೇಸಿಐ ಭವನ, ಲಯನ್ಸ್ ಭವನ, ಸುದರ್ಶಿನಿ ಚಿತ್ರಮಂದಿರ ಸೇರಿದಂತೆ ಸೀಗೋಡು, ಹೇರೂರು, ಜಯಪುರ ಸೇರಿದಂತೆ ವಿವಿಧ ಗ್ರಾಮೀಣ ಭಾಗಗಳಲ್ಲೂ ಸಹ ಐಪಿಎಲ್ ಫೈನಲ್ ಪಂದ್ಯವನ್ನು ದೊಡ್ಡ ಪರದೆಯ ಮೂಲಕ ಅಭಿಮಾನಿಗಳು ವೀಕ್ಷಿಸಿದರು.ಆರ್‌ಸಿಬಿ ತಂಡ ಜಯಶಾಲಿಯಾಗುತ್ತಿದ್ದಂತೆ ಅಭಿಮಾನಿಗಳು ನಾಸಿಕ್ ಡೋಲಿನೊಂದಿಗೆ ನರ್ತಿಸುತ್ತ ಪಟಾಕಿ ಸಿಡಿಸಿ ಆರ್‌ಸಿಬಿ ತಂಡದ ಗೆಲುವು ಸಂಭ್ರಮಿಸಿದರು.ಬುಧವಾರ ಬೆಳಿಗ್ಗೆ ಪಟ್ಟಣದ ಬಸ್ ನಿಲ್ದಾಣ ಮುಂಭಾಗದ ನ್ಯಾಶನಲ್ ಮಿನಿ ಮಾರ್ಟ್ ಅಂಗಡಿ ಮಾಲೀಕ ಮಹಮ್ಮದ್ ರಫೀಕ್ ಮತ್ತು ಸಿಬ್ಬಂದಿ ಆರ್‌ಸಿಬಿ ಗೆಲುವಿನ ಹಿನ್ನೆಲೆಯಲ್ಲಿ ಅಂಗಡಿಗೆ ಆಗಮಿಸಿದ ಗ್ರಾಹಕರಿಗೆ ಕೇಸರಿಬಾತು ನೀಡಿ ಖುಷಿ ಹಂಚಿಕೊಂಡರು. ಒಟ್ಟಾರೆಯಾಗಿ ಆರ್‌ಸಿಬಿ ಗೆಲುವನ್ನು ಬಾಳೆಹೊನ್ನೂರು ಸುತ್ತಮುತ್ತಲಿನ ಜನರು ಸಂಭ್ರಮಿಸಿದರು.೦೪ಬಿಹೆಚ್‌ಆರ್ ೩:ಐಪಿಎಲ್‌ನಲ್ಲಿ ಆರ್‌ಸಿಬಿ ಬೆಂಗಳೂರು ತಂಡ ಚಾಂಪಿಯನ್ ಆದ ಹಿನ್ನೆಲೆಯಲ್ಲಿ ಬಾಳೆಹೊನ್ನೂರಿನ ನ್ಯಾಶನಲ್ ಮಿನಿ ಮಾರ್ಟ್ ಅಂಗಡಿಯವರು ಗ್ರಾಹಕರಿಗೆ ಕೇಸರಿಬಾತು ನೀಡಿ ಖುಷಿ ಹಂಚಿಕೊಂಡರು.