ಪುಸ್ತಕಗಳನ್ನು ಓದಿ ಜ್ಞಾನವಂತರಾಗಲು ಪ್ರಯತ್ನಿಸಿ: ಸೌಮ್ಯ

KannadaprabhaNewsNetwork |  
Published : Jul 29, 2024, 12:58 AM IST
ಕ್ಯಾಪ್ಷನಃ27ಕೆಡಿವಿಜಿ40ಃದಾವಣಗೆರೆಯಲ್ಲಿ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಸೌಮ್ಯ ಬಸವರಾಜ ಉದ್ಘಾಟಿಸಿದರು. | Kannada Prabha

ಸಾರಾಂಶ

ಜಗತ್ತಿನಲ್ಲೇ ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆ ಇಲ್ಲದ ಕಾಲಘಟ್ಟದಲ್ಲಿ ಜಗತ್ತಿನಾದ್ಯಾಂತ ಹೆಸರು ಮಾಡಿದ್ದು ನಮ್ಮ ಭಾರತ ದೇಶದ ನಳಂದ ವಿಶ್ವವಿದ್ಯಾಲಯ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದು ಜಯವಿಭವ ವಿದ್ಯಾಸಂಸ್ಥೆ ಸಹ ಕಾರ್ಯದರ್ಶಿ ಸೌಮ್ಯ ಬಸವರಾಜ ಹೇಳಿದ್ದಾರೆ.

- ಶ್ರೀ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಪ್ರೌಢಶಾಲೆ ಕ್ರೀಡೆ-ಸಾಂಸ್ಕೃತಿಕ ಸಂಘ ಉದ್ಘಾಟನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಜಗತ್ತಿನಲ್ಲೇ ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆ ಇಲ್ಲದ ಕಾಲಘಟ್ಟದಲ್ಲಿ ಜಗತ್ತಿನಾದ್ಯಾಂತ ಹೆಸರು ಮಾಡಿದ್ದು ನಮ್ಮ ಭಾರತ ದೇಶದ ನಳಂದ ವಿಶ್ವವಿದ್ಯಾಲಯ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದು ಜಯವಿಭವ ವಿದ್ಯಾಸಂಸ್ಥೆ ಸಹ ಕಾರ್ಯದರ್ಶಿ ಸೌಮ್ಯ ಬಸವರಾಜ ಹೇಳಿದರು.

ನಗರದ ವಿನೋಬ ನಗರದಲ್ಲಿರುವ ಶ್ರೀ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಪ್ರೌಢಶಾಲೆಯಲ್ಲಿ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ನಳಂದ ವಿಶ್ವವಿದ್ಯಾಲಯದ ಗ್ರಂಥಾಲಯ 16 ಸಾವಿರ ಗ್ರಂಥಗಳನ್ನು ಹೊಂದಿತ್ತು. ಅದರ ಪ್ರಯೋಜನೆಯನ್ನು ಜಗತ್ತಿನ ಹಲವು ಪ್ರಮುಖರು ಭೇಟಿ ನೀಡಿ ಪಡೆದಿದ್ದಾರೆ. ನಾಳಿನ ಪ್ರಜೆಗಳಾದ ನೀವುಗಳು ಪುಸ್ತಕಗಳನ್ನು ಓದುವುದು ಕಲಿಯಿರಿ. ಓದಿ ಜ್ಞಾನವಂತರಾಗಿ ಬೆಳೆಯಿರಿ ಸಲಹೆ ನೀಡಿದರು.

ಸಂಸ್ಥೆ ಕಾರ್ಯದರ್ಶಿ ಮನೋಹರ ಚಿಗಟೇರಿ ಮಾತನಾಡಿ, ಶ್ರದ್ಧೆಯಿಂದ ಕಲಿಯಬೇಕು. ಉತ್ತಮ ಅಂಕ ಗಳಿಸಿದರೆ ನೀವುಗಳೂ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗಲು ಸಾಧ್ಯ. ಭವಿಷ್ಯದ ಸಮಾಜದಲ್ಲಿ ಗೌರವ ಸ್ಥಾನ ಪಡೆದು ಹೆತ್ತ ತಂದೆ-ತಾಯಿ ಹಾಗೂ ಕಲಿತ ಶಾಲೆಗೆ ಕೀರ್ತಿ ತರಬೇಕು ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಕಳೆದ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ನಗದು ಪುರಸ್ಕಾರ ನೀಡಲಾಯಿತು. ಮುಖ್ಯೋಪಾಧ್ಯಾಯ ಎಸ್.ನಾಗರಾಜ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಎಸ್.ಸಿ.ಶಂಕರಮೂರ್ತಿ, ಎಸ್‌ವಿಎಂಸಿ ಶಾಲೆ ಮುಖ್ಯಶಿಕ್ಷಕಿ ಎಸ್.ಎಂ. ಶೈಲಜ, ಶೈಕ್ಷಣಿಕ ಸಲಹೆಗಾರರಾದ ಆರ್.ವಾಗ್ದೇವಿ, ಎಂ.ಟಿ.ಮಳಗಿ, ಸುರೇಶ ನಾಯ್ಕ್, ಎಸ್.ವಿ. ನಾಗರಾಜ, ಚಿತ್ರಕಲಾ ಶಿಕ್ಷಕ ಶಾಂತಯ್ಯ ಪರಡಿಮಠ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಾರ್ಯದರ್ಶಿ ಹೇಮಯ್ಯ ಮಠಪತಿ, ಸಹ ಕಾರ್ಯದರ್ಶಿ ವಿ.ಅನುಷಾ, ಎಚ್.ಪಿ.ಜ್ಯೋತಿ, ಪಿ.ಅನಿತಾ ಹಾಗೂ ವಿದ್ಯಾರ್ಥಿ ಸಂಘ ಪದಾಧಿಕಾರಿಗಳು ಇದ್ದರು.

- - - -27ಕೆಡಿವಿಜಿ40ಃ:

ದಾವಣಗೆರೆಯಲ್ಲಿ ಶ್ರೀ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಪ್ರೌಢಶಾಲೆ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಜಯವಿಭವ ವಿದ್ಯಾಸಂಸ್ಥೆ ಸಹ ಕಾರ್ಯದರ್ಶಿ ಸೌಮ್ಯ ಬಸವರಾಜ ಉದ್ಘಾಟಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ