ಚಿಕ್ಕಬಳ್ಳಾಪುರ: ಬಿಜೆಪಿ ಮುಖಂಡ ಹಾಗೂ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ರವರು ರಂಜಾನ್ ಹಬ್ಬದ ಅಂಗವಾಗಿ ಮಂಗಳವಾರ ನಗರದ ಮದೀನಾ ಶಾದಿ ಮಹಲ್ ನಲ್ಲಿ ನಗರದ ಸುಮಾರು 1000 ಬಡ ಮುಸ್ಲಿಂ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿ, ಹಬ್ಬಗಳನ್ನು ಖುಷಿಯಾಗಿ ಆಚರಿಸುವುದರ ಜೊತೆಗೆ ಬಡವರ ಜೊತೆ ನಿಂತು ಅವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ನಾವು ಎಲ್ಲರೂ ಭೇದಭಾವ ಮರೆತು ಮಾನವೀಯತೆಯನ್ನು ಉಳಿಸಬೇಕು. ವೈವಿಧ್ಯತೆಯಲ್ಲಿ ಐಕ್ಯತೆ ಭಾರತದ ವೈಶಿಷ್ಟ್ಯವಾಗಿದೆ. ಜಾತಿ-ಧರ್ಮ ಭೇದವಿಲ್ಲದೆ ಪರಸ್ಪರ ಪ್ರೀತಿ ಹಾಗೂ ಸಹಕಾರದಿಂದ ಬದುಕುತ್ತಿದ್ದೇವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಂದರೂ ಅವನ್ನು ಮರೆತು ಮತ್ತೆ ಒಂದಾಗಿ ಸಾಗುವುದು ನಮ್ಮ ಭಾರತೀಯರ ಗುಣ. ನಾವೆಲ್ಲರೂ ಭಾರತೀಯರು ಎಂದು ಹೇಳಿಕೊಳ್ಳುವುದರಲ್ಲಿ ಹೆಮ್ಮೆ ಇದೆ ಎಂದು ಅಭಿಪ್ರಾಯಪಟ್ಟರು.ಮುಸ್ಲಿಂ ಸಮುದಾಯದ ಮುಖಂಡ ಇಸ್ಮಾಯಿಲ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಇದು ಬಹಳ ಸಹಾಯವಾಗಲಿದೆ. ಅವರು ಸಂತೋಷದಿಂದ ಹಬ್ಬ ಆಚರಿಸಲು ಸಾಧ್ಯವಾಗುತ್ತದೆ ಎಂದು ಹೇಳಿ, ಮುಸ್ಲಿಂ ಸಮುದಾಯದ ಪರವಾಗಿ ಸಂದೀಪ್ ರೆಡ್ಡಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಅಮ್ಜದ್, ನಯಾಜ಼್, ಹಿದಾಯತ್, ಮೌಲ, ಸಾಧಿಕ್, ಅಸ್ಲಂ, ಇಮ್ತೀಯಾಜ಼್, ಮುಬಾರಕ್, ಮತ್ತಿತರರು ಇದ್ದರು. ಸಿಕೆಬಿ-5 ನಗರದ ಮದೀನಾ ಶಾದಿ ಮಹಲ್ ನಲ್ಲಿ ರಂಜಾನ್ ಹಬ್ಬದ ಅಂಗವಾಗಿ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಡ ಮುಸ್ಲಿಂ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ಅನ್ನು ಸಂದೀಪ್ ರೆಡ್ಡಿ ವಿತರಣೆ ಮಾಡಿದರು