ಪ್ರತಿನಿತ್ಯ ಪತ್ರಿಕೆ ಓದಿಕೊಂಡಿದ್ದರೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಲೀಸು

KannadaprabhaNewsNetwork |  
Published : Jul 11, 2026, 01:45 AM IST
ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಯುವ ಅವೃತ್ತಿ ಬಿಡುಗಡೆ ಸಮಾರಂಭ | Kannada Prabha

ಸಾರಾಂಶ

ನಿತ್ಯ ಪತ್ರಿಕೆಯಲ್ಲಿ ಬರುವ ಪ್ರಶ್ನೆಗಳಿಗೆ ಅಂದೇ ಉತ್ತರ ಕಂಡು ಕೊಂಡರೆ ಮುಂದೆ ಎಸ್.ಎಸ್.ಎಲ್.ಸಿ.ವಾರ್ಷಿಕ ಪರೀಕ್ಷೆಗೆ ಹೆಚ್ಚು ಅನುಕೂಲವಾಗುತ್ತದೆ. ವಾರ್ಷಿಕ ಪರೀಕ್ಷೆಗಳಲ್ಲಿ ಒಳ್ಳೆಯ ಫಲಿತಾಂಶ ದೊರಕುತ್ತದೆ ಎಂದು ಶಾಸಕ ಜಿ.ಹೆಚ್. ಶ್ರೀನಿವಾಸ್ ಅವರ ಪುತ್ರಿ ಕೆ.ಡಿ.ಪಿ.ಸದಸ್ಯೆ ರಚನಾ ಶ್ರೀನಿವಾಸ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ತರೀಕೆರೆ

ನಿತ್ಯ ಪತ್ರಿಕೆಯಲ್ಲಿ ಬರುವ ಪ್ರಶ್ನೆಗಳಿಗೆ ಅಂದೇ ಉತ್ತರ ಕಂಡು ಕೊಂಡರೆ ಮುಂದೆ ಎಸ್.ಎಸ್.ಎಲ್.ಸಿ.ವಾರ್ಷಿಕ ಪರೀಕ್ಷೆಗೆ ಹೆಚ್ಚು ಅನುಕೂಲವಾಗುತ್ತದೆ. ವಾರ್ಷಿಕ ಪರೀಕ್ಷೆಗಳಲ್ಲಿ ಒಳ್ಳೆಯ ಫಲಿತಾಂಶ ದೊರಕುತ್ತದೆ ಎಂದು ಶಾಸಕ ಜಿ.ಹೆಚ್. ಶ್ರೀನಿವಾಸ್ ಅವರ ಪುತ್ರಿ ಕೆ.ಡಿ.ಪಿ.ಸದಸ್ಯೆ ರಚನಾ ಶ್ರೀನಿವಾಸ್ ಹೇಳಿದ್ದಾರೆ.

ಅವರು ಶುಕ್ರವಾರ ಸಮೀಪದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಪತ್ರಿಕೆ ಯುವ ಅವೃತ್ತಿ ಬಿಡುಗಡೆ ಸಮಾರಂಭದಲ್ಲಿ ಪತ್ರಿಕೆ ಬಿಡುಗಡೆ ನೆರವೇರಿಸಿ ಮಾತನಾಡುತ್ತಿದ್ದರು.

ಪತ್ರಿಕೆಯಲ್ಲಿನ ಬೇರೆ ಬೇರೆ ವಿಚಾರಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು, ಪಠ್ಯೇತರ ವಿಚಾರಗಳಲ್ಲೂ ಕೌಶಲ್ಯ ಪಡೆದುಕೊಳ್ಳಬೇಕು, ವಿದ್ಯಾರ್ಥಿನಿಯರು ಧೈರ್ಯವಂತರಾಗಬೇಕು, ಏಕೆಂದರೆ ಪ್ರತಿಯೊಂದು ಕ್ಷೇತ್ರದಲ್ಲೂ ಹೆಣ್ಣು ಮಕ್ಕಳು ಮುಂದೆ ಬರುತ್ತಿದ್ದಾರೆ, ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಲು ಸಿದ್ಧರಾಗಿ, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು, ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ಸಮಾಜಕ್ಕೆ ಒಳಿತಾಗುವ ಕಾರ್ಯಗಳನ್ನು ಮಾಡಬೇಕು ಎಂದು ಅವರು ಹೇಳಿದರು.

ಇದು ಬಹಳ ಒಳ್ಳೆಯ ಕಾರ್ಯಕ್ರಮವಾಗಿದೆ, ಶಾಲೆಯು ಒಳ್ಳೆಯ ಪರಿಸರವನ್ನು ಹೊಂದಿದೆ, ನಾವು ಮಾಡುವ ಉತ್ತಮ ಕೆಲಸಗಳಿಗೆ ಧರ್ಮ ಎನ್ನುವರು, ನಿಮ್ಮ ಪರಿಶ್ರಮ ಪ್ರಾಮಾಣಿಕವಾಗಿದ್ದರೆ ಕಾಲವೇ ನಿಮ್ಮ ಕನಸಿಗೆ ಜೀವ ತುಂಬುವುದು ನಿಶ್ಚಿತ, ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿರುವ ಸಮಸ್ಯೆಗಳನ್ನು ಪರಿಹರಿಸಲು ಖಂಡಿತ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತ ಅನಂತ ನಾಡಿಗ್ ಮಾತನಾಡಿ ಕನ್ನಡಪ್ರಭ ಯುವ ಅವೃತ್ತಿಯಲ್ಲಿ ಬರುವ ಪ್ರತಿಯೊಂದು ವಿಚಾರಗಳನ್ನು ಚೆನ್ನಾಗಿ ಮನನ ಮಾಡಿಕೊಳ್ಳಿ, ಇದರಿಂದ ಎಸ್.ಎಸ್.ಎಲ್.ಸಿ.ವಾರ್ಷಿಕ ಪರೀಕ್ಷೆಗಳಿಗೆ ಹೆಚ್ಚು ಅನುಕೂಲವಾಗುತ್ತದೆ, ಪತ್ರಿಕೆಗಳಿಂದ ದೇಶ ವಿದೇಶ ರಾಜ್ಯಗಳ ವಿವಿಧ ವಿಚಾರಗಳನ್ನು ತಿಳಿದುಕೊಳ್ಳಬಹುದು ಎಂದು ಅವರು ಹೇಳಿದರು,

ಮುಖ್ಯೋಪಾಧ್ಯಾಯ ಹಾಲೇಶ್ ಕೆ.ಟಿ. ಮಾತನಾಡಿ ಕನ್ನಡಪ್ರಭ ಯುವ ಅವೃತ್ತಿ ಪತ್ರಿಕೆಯು ಪ್ರೌಢಶಾಲೆಯ ಮೂರು ತರಗತಿ ವಿದ್ಯಾರ್ಥಿಗಳಿಗೂ ಹೆಚ್ಚು ಅನುಕೂಲವಾಗುತ್ತದೆ, ಪತ್ರಿಕೆಯು ನಾಲ್ಕೂ ದಿಕ್ಕಿನ ಅನೇಕ ವಿಚಾರಗಳನ್ನು ಸಮಾಜಕ್ಕೆ ಮತ್ತು ಸಮುದಾಯಕ್ಕೆ ತಿಳಿಸುತ್ತದೆ, ಸಾಂಸ್ಕೃತಿಕವಾಗಿ ಜ್ಞಾನದಾಹವನ್ನು ಹೆಚ್ಚಿಸುತ್ತದೆ, ಪತ್ರಿಕೆಯಲ್ಲಿ ಸಿಲಬಸ್ ಕೂಡ ಇರುತ್ತದೆ, ಚೆನ್ನಾಗಿ ಮನನ ಮಾಡಿಕೊಳ್ಳಿ, ಇದರಿಂದ ವಾರ್ಷಿಕ ಪರೀಕ್ಷೆಗೆ ಹೆಚ್ಚು ಅನುಕೂಲವಾಗುತ್ತದೆ, ವಿದ್ಯಾರ್ಥಿಗಳು ನಾಯಕತ್ವ ಬೆಳೆಸಿಕೊಳ್ಳಬೇಕು ಎಂದರು.

ಶಾಲಾ ಸಲಹಾ ಸಮಿತಿ ಉಪಾಧ್ಯಕ್ಷ ಷಡಕ್ಷರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡಪ್ರಭ ಯುವ ಪತ್ರಿಕೆಯಿಂದ ಮಕ್ಕಳಿಗೆ ಹೆಚ್ಚು ಅನುಕೂಲವಾಗಿದೆ. ಶಾಲೆಯ ಮುಖ್ಯ ಶಿಕ್ಷಕರಾದ ಹಾಲೇಶ್ ಕೆ.ಟಿ.ಅವರು ಶಾಲೆಯ ಅಭಿವೃದ್ದಿಗೆ ಹೆಚ್ಚು ಶ್ರಮ ವಹಿಸಿದ್ದಾರೆ, ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಫಲಿತಾಂಶ ತಂದು ಶಾಲೆಗೆ ಒಳ್ಳೆಯ ಹೆಸರನ್ನು ತರಬೇಕು ಎಂದು ಅವರು ಹೇಳಿದರು.

ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಗಳನ್ನು ಕುರಿತು ಮಾತನಾಡಿದರು. ಶಿಕ್ಷಕರಾದ ರಮಾಕಾಂತ್, ಪಂಚಾಕ್ಷರಪ್ಪ,ವೀಣಾ, ಸತೀಶ್ ನಂದಿಹಳ್ಳಿ, ಮಂಜುಳ ಮಲ್ಲಿಗವಾಡ, ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-----------

ಫೋಟೋ ಇದೆಃ

10ಕೆಟಿಆರ್.ಕೆ.1ಃ

ತರೀಕೆರೆ ಸಮೀಪದ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕನ್ನಡಪ್ರಭ ಯುವ ಆವೃತ್ತಿ ಪತ್ರಿಕೆ ಬಿಡುಗಡೆಯನ್ನು ಶಾಸಕ ಜಿ.ಹೆಚ್. ಶ್ರೀನಿವಾಸ್ ಅವರ ಪುತ್ರಿ ಕೆ.ಡಿ.ಪಿ.ಸದಸ್ಯೆ ರಚನಾ ಶ್ರೀನಿವಾಸ್ ಅವರು ನೆರವೇರಿಸಿದರು. ಶಾಲಾ ಸಲಹಾ ಸಮಿತಿ ಉಪಾಧ್ಯಕ್ಷ ಷಡಕ್ಷರಪ್ಪ, ಶಾಲೆ ಮುಖ್ಯ ಶಿಕ್ಷಕ ಹಾಲೇಶ್ ಕೆ.ಟಿ. ಮತ್ತಿತರರು ಇದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿವ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸಿ
ಹತ್ತಿ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ಬೆಳೆಗಳಿಗೆ ನೀರು