ಸಾಗರ: ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆ ಶ್ರೇಷ್ಠವಾದುದು. ನಾವು ಮಾಡುವ ಸೇವೆ ಪ್ರಾಮಾಣಿಕವಾಗಿರಬೇಕು. ಅದಕ್ಕೆ ಕಿಂಚಿತ್ತೂ ಸ್ವಾರ್ಥದ ಲೇಪ ಇರಬಾರದು ಎಂದು ಅರ್ಚಕ ರಾಮಚಂದ್ರ ಭಟ್ ಹೇಳಿದರು.
ನಾವು ದೇವರ ಬಳಿ ಹಲವು ಬೇಡಿಕೆಗಳನ್ನಿಡುತ್ತೇವೆ. ಆದರೆ ದೇವರಿಗೆ ಯಾವಕಾಲಕ್ಕೆ-ಯಾರಿಗೆ ಏನು ಅನುಗ್ರಹ ಮಾಡಬೇಕೆನ್ನುವುದು ಗೊತ್ತಿದ್ದು, ಅದು ಮಾತ್ರ ಆತನಿಗೆ ಲಭಿಸುತ್ತದೆ. ನಮ್ಮ ಸಂಸ್ಕೃತಿ ಸಂಸ್ಕಾರದ ಉಳಿವಿಗೆ ಸಾಮೂಹಿಕವಾಗಿ ತೊಡಗಿಕೊಳ್ಳುವ ಮನಸ್ಥಿತಿ ಹೆಚ್ಚಾಗಬೇಕು ಎಂದು ಹೇಳಿದರು.
ಮಾಧ್ವ ಸಂಘದ ಅಧ್ಯಕ್ಷ ವೆಂಕಟೇಶ್ ಕಟ್ಟಿ ಮಾತನಾಡಿ, ಆಡಂಬರದ ಪೂಜೆಯಿಂದ ದೇವರು ಒಲಿಯಲು ಸಾಧ್ಯವಿಲ್ಲ. ಭಕ್ತಿ ಮನುಷ್ಯನಿಗೆ ಬಹಳ ಮುಖ್ಯವಾದುದು. ಪ್ರತಿವರ್ಷ ನಮ್ಮ ಸಂಘದಲ್ಲಿ ''''''''ರಾಯರ ಅನುಗ್ರಹ ''''''''ಪುರಸ್ಕಾರವನ್ನು ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದಾಸ ಸಾಹಿತ್ಯದ ಪರೀಕ್ಷೆಗಳಲ್ಲಿ ಸಮಾಜದ ಮಹಿಳೆಯರು ತೊಡಗಿಕೊಂಡು ಯಶಸ್ವಿಯಾಗುತ್ತಿದ್ದಾರೆ. ಭಕ್ತಿಪಂಥಕ್ಕೆ ಅಪಾರ ಕೊಡುಗೆಯನ್ನು ನೀಡಿದ ಹರಿದಾಸರ ಪರಂಪರೆಯನ್ನು ಪರಿಚಯಿಸುವ ಕಾಯಕ ಯಶಸ್ವಿಯಾಗಿ ನಡೆಯುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.ಡಾ.ಗುರುರಾಜ್ ಕಲ್ಲಾಪುರ್ ಅಭಿನಂದಿತರ ಕುರಿತು ಮಾತನಾಡಿದರು. ಮಾಧ್ವಸಂಘದ ಕಾರ್ಯದರ್ಶಿ ಬದರೀನಾಥ್, ದೀಪಕ್ ಕಲ್ಯಾಣಿ , ಶ್ರೀಶಾಚಾರ್, ಸಹನಾ ಕಲ್ಯಾಣಿ, ವಿರಜಾ ಕಲ್ಲಾಪುರ್, ಮಂಜುಳಾ ಬದರೀನಾಥ್, ರಘುನಂದನ್ ಪುರೋಹಿತ್, ಭಾಗ್ಯಲಕ್ಷ್ಮೀ, ಆನಂದ ಕಲ್ಯಾಣಿ, ಹರ್ಷವರ್ಧನ್ ಭಟ್, ಮಂಜುನಾಥ್ ಅರೆಗುಳಿ, ರಶ್ಮಿ ಪಿ.ಜಿ, ಶಾಂತಮೂರ್ತಿ ಹಾಜರಿದ್ದರು.