ಕನ್ನಡಪ್ರಭ ವಾರ್ತೆ ಕಲಬುರಗಿ
ಈ ಬಗ್ಗೆ ವಿವಿ ಉಪ ಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಮಾಹಿತಿ ನೀಡಿ, ಐವರು ವಿದ್ಯಾರ್ಥಿನಿಯರು ಬೆಂಗಳೂರಿನ ಗ್ಲೋಲಾಜಿಕ್ಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ವಾರ್ಷಿಕ 6.2 ಲಕ್ಷ ರು. ವೇತನದೊಂದಿಗೆ ಉದ್ಯೋಗ ಪಡೆದಿದ್ದರೆ, ಇಬ್ಬರು ವಿದ್ಯಾರ್ಥಿನಿಯರು ಗ್ರಾಡ್‍ಗುರು ಇನ್ನೋವೇಷನ್ಸ್ ಕಂಪನಿಯಲ್ಲಿ ವಾರ್ಷಿಕ 6 ಲಕ್ಷ ರು. ವೇತನದೊಂದಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಡಿಜಿಸ್ನೇರ್ ಟೆಕ್ನಾಲಜಿ ಮತ್ತು ಲಾಹೋಟಿ ಮೋಟಾರ್ಸ್ ಸೇರಿದಂತೆ ವಿವಿಧ ಕಂಪನಿಗಳಲ್ಲಿ ಇನ್ನೂ 17 ವಿದ್ಯಾರ್ಥಿನಿಯರು ವಾರ್ಷಿಕ 2 ಲಕ್ಷ ರು.ಗಳಿಂದ 3.6 ಲಕ್ಷ ರು.ವರೆಗಿನ ವೇತನದೊಂದಿಗೆ ಉದ್ಯೋಗ ಪಡೆದುಕೊಂಡಿದ್ದಾರೆ. ಗ್ಲೋಲಾಜಿಸ್ಟಿಕ್ಸ್ ಸೊಲ್ಯೂಷನ್ಸ್ ಕಂಪನಿಗೆ ಪ್ರಣೀತಾ, ನಾಗವೇಣಿ ಹುಲಿಮನಿ, ಅಂಕಿತಾ ಸಿ.ಕೆ., ಶಿವಾನಿ ಹಾಗೂ ರುಶಾನಾ ತಹ್ರೀನ್ ಅವರು ತಲಾ ವಾರ್ಷಿಕ 6.2 ಲಕ್ಷ ರು. ವೇತನದೊಂದಿಗೆ ಆಯ್ಕೆಯಾಗಿದ್ದಾರೆ. ಗ್ರಾಡ್‍ಗುರು ಇನ್ನೋವೇಷನ್ಸ್ ಕಂಪನಿಗೆ ಶಿಲ್ಪಾ ಕಲಶೆಟ್ಟಿ ಮತ್ತು ಶ್ರೀದೇವಿ ಅವರು ತಲಾ ವಾರ್ಷಿಕ 6 ಲಕ್ಷ ರು. ವೇತನದೊಂದಿಗೆ ನೇಮಕಗೊಂಡಿದ್ದಾರೆ.ವಾರ್ಷಿಕ 2 ಲಕ್ಷ ರು.ಗಳಿಂದ 3.6 ಲಕ್ಷ ರು.ವರೆಗಿನ ವೇತನದೊಂದಿಗೆ ವಿವಿಧ ಕಂಪನಿಗಳಿಗೆ ಆಯ್ಕೆಯಾದವರಲ್ಲಿ ಸೃಷ್ಟಿ (ಗ್ಲೋಲಾಜಿಸ್ಟಿಕ್ಸ್ ಸೊಲ್ಯೂಷನ್ಸ್), ದೀಪಿಕಾ ಬಿರಾದಾರ, ನಿಹಾರಿಕಾ ಹಾಗೂ ಪೂರ್ವಿ ಕುಲಕರ್ಣಿ (ಡಿಜಿಸ್ನೇರ್ ಟೆಕ್ನಾಲಜಿ), ಭಾಗ್ಯಶ್ರೀ ನಾವದಗಿ, ಬನಶ್ರೀ, ವಿದ್ಯಾಶ್ರೀ ಅನಶೆಟ್ಟಿ, ಅನಿತಾ, ಯಶಸ್ವಿನಿ, ಪಲ್ಲವಿ ರಾಠೋಡ್, ಈಶ್ವರಿ ರಾಜಪೂತ್, ಸಾಕ್ಷಿ ಶಿವಾನಂದ, ಸಮ್ರೀನ್, ಸೌಮ್ಯ ಕಾಡಾದಿ, ರೇಣುಕಾ ಮೊಳಕೇರಿ, ಪ್ರಿಯಾಂಕಾ ಮದ್ದೂರ ಹಾಗೂ ಶೋಭಾ ಅಫಜಲಪುರಕರ (ಲಾಹೋಟಿ ಮೋಟಾರ್ಸ್) ಆಯ್ಕೆಯಾಗಿದ್ದಾರೆ.