ಆರೋಗ್ಯ, ಯೋಗಕ್ಷೇಮ ಉತ್ತೇಜಿಸುವುದು ರೆಡ್‌ಕ್ರಾಸ್: ಪ್ರದೀಪ್‌ಗೌಡ

KannadaprabhaNewsNetwork |  
Published : May 10, 2025, 01:02 AM IST
ಚಿಕ್ಕಮಗಳೂರು ನಗರದ ಜಿಲ್ಲಾ ರೆಡ್‌ಕ್ರಾಸ್ ಕಚೇರಿಯಲ್ಲಿ ಗುರುವಾರ ನಡೆದ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ ಯ ಸಂಸ್ಥಾಪಕ ಜೀನ್ ಹೆನ್ರಿ ಡ್ಯುನಾಂಟ್ ಅವರ ಜನ್ಮದಿನ ಕಾರ್ಯಕ್ರಮವನ್ನು ಪಾಲ್ಗೊಂಡು ಭಾರತೀಯ ರೆಡ್‌ಕ್ರಾಸ್ ಜಿಲ್ಲಾಧ್ಯಕ್ಷ ಪ್ರದೀಪ್‌ಗೌಡ  ಮಾತನಾಡಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ಗುರಿ ಹೊಂದಿರುವ ರೆಡ್‌ಕ್ರಾಸ್, ಯುದ್ಧ ಮತ್ತು ಪ್ರವಾಹ ಇನ್ನಿತರ ಪ್ರಾಕೃತಿಕ ವಿಕೋಪಗಳಿಗೀಡಾದ ಜನಸಾಮಾನ್ಯರಿಗೆ ನೆರವು ನೀಡುತ್ತಿದೆ ಎಂದು ಭಾರತೀಯ ರೆಡ್‌ಕ್ರಾಸ್ ಜಿಲ್ಲಾಧ್ಯಕ್ಷ ಪ್ರದೀಪ್‌ಗೌಡ ಹೇಳಿದರು.

ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕರ ಜನ್ಮದಿನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ಗುರಿ ಹೊಂದಿರುವ ರೆಡ್‌ಕ್ರಾಸ್, ಯುದ್ಧ ಮತ್ತು ಪ್ರವಾಹ ಇನ್ನಿತರ ಪ್ರಾಕೃತಿಕ ವಿಕೋಪಗಳಿಗೀಡಾದ ಜನಸಾಮಾನ್ಯರಿಗೆ ನೆರವು ನೀಡುತ್ತಿದೆ ಎಂದು ಭಾರತೀಯ ರೆಡ್‌ಕ್ರಾಸ್ ಜಿಲ್ಲಾಧ್ಯಕ್ಷ ಪ್ರದೀಪ್‌ಗೌಡ ಹೇಳಿದರು.ನಗರದ ಜಿಲ್ಲಾ ರೆಡ್‌ಕ್ರಾಸ್ ಕಚೇರಿಯಲ್ಲಿ ಗುರುವಾರ ನಡೆದ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕ ''''''''''''''''ಜೀನ್ ಹೆನ್ರಿ ಡ್ಯುನಾಂಟ್'''''''''''''''' ಅವರ ಜನ್ಮದಿನದಲ್ಲಿ ಮಾತನಾಡಿದರು. ಈಗಾಗಲೇ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಸಂಸ್ಥೆ ಮೂಲಭೂತ ಸೌಕರ್ಯ ವಂಚಿತ, ಅಶಕ್ತ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಶ್ರವಣ ದೋಷ ಹೊಂದಿರುವವರಿಗೆ ಶ್ರವಣ ಸಾಧನ, ಗಾಲಿಕುರ್ಚಿಗಳು ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹಿರಿಯರ ಸದಸ್ಯರ ಹಾಗೂ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನೆರವೇರಲಿದೆ. ಈ ಉಪಕ್ರಮ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಉದಾರ ಬೆಂಬಲವಾಗಿದ್ದು ನಮ್ಮ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತಿದ್ದು ಮಾನವೀಯ ತೆಗೆ ಒಟ್ಟಾಗಿ ಸಾಗುವುದರೊಂದಿಗೆ ಹೆಚ್ಚು ಅಗತ್ಯ ವಿರುವವರ ಜೀವನದಲ್ಲಿ ನಾವು ಬದಲಾವಣೆ ತರಬಹುದಾಗಿದೆ ಎಂದರು.ರೆಡ್ ಕ್ರಾಸ್ ಸಂಸ್ಥೆ ಮೌಲ್ಯಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ. ಕೋವಿಡ್ ಹಾಗೂ ಅನೇಕ ಸಂಕಷ್ಟಗಳ ಸಮಯದಲ್ಲಿ ರೆಡ್‌ಕ್ರಾಸ್ ಧೈರ್ಯವಾಗಿ ಮುನ್ನುಗ್ಗಿ ಸಾರ್ವಜನಿಕರಿಗೆ ಕೊರತೆಯಾಗದಂತೆ ಮೂಲಸೌಕರ್ಯ ನಿರಂತರವಾಗಿ ಪೂರೈಸುತ್ತಿದೆ ಎಂದರು.ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಕಾರ್ಯಕಾರಿ ಸಮಿತಿ ಸದಸ್ಯ ಆರ್. ಶ್ರೀನಿವಾಸ, ಕಾರ್ಯ ದರ್ಶಿ. ರಸೂಲ್ ಖಾನ್, ನಿರ್ದೇಶಕರಾದ ವಿಲಿಯಂ ಪೆರೆರಾ, ಚಂದನ್ ಕುಮಾರ್, ಡಾ. ಸುಂದರೇಗೌಡ, ಸದಸ್ಯರಾದ ಪ್ರಸನ್ನಗೌಡ, ಮಂಜುನಾಥ್ ಅರಸ್ ಮತ್ತು ಆರ್. ಶಿವ ಪ್ರಕಾಶ್‌ಗೌಡ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ