ಭಾರತಕ್ಕೆ ಸ್ವಾತಂತ್ರ‍್ಯ ಬಂದು 78 ವರ್ಷ ಆಗಿದ್ದು, ದೇಶ ಬಲಿಷ್ಠವಾಗಿದೆ. ಆದರೆ ಬಡತನ, ನಿರುದ್ಯೋಗ, ಹೆಚ್ಚಳವಾಗುತ್ತಿದೆ ಎಂದು ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಹೇಳಿದರು.
ದಾಬಸ್‌ಪೇಟೆ: ಭಾರತಕ್ಕೆ ಸ್ವಾತಂತ್ರ‍್ಯ ಬಂದು 78 ವರ್ಷ ಆಗಿದ್ದು, ದೇಶ ಬಲಿಷ್ಠವಾಗಿದೆ. ಆದರೆ ಬಡತನ, ನಿರುದ್ಯೋಗ, ಹೆಚ್ಚಳವಾಗುತ್ತಿದೆ ಎಂದು ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಹೇಳಿದರು.
ವನಕಲ್ಲು ಮಠದಲ್ಲಿ 78ನೇ ವರ್ಷದ ಸ್ವಾತಂತ್ರೋತ್ಸವ ಅಂಗವಾಗಿ ಮಠದ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಿ ಮಾತನಾಡಿದರು. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ದುಡಿಯುವ ವರ್ಗಕ್ಕೆ ಕಾಯಕ ನೀಡಬೇಕಾಗಿದೆ.ಅನೇಕ ಸ್ವತಂತ್ರ ಹೋರಾಟಗಾರರ ಬಲಿದಾನಗಳ ಮೂಲಕ 300 ವರ್ಷಗಳ ನಂತರ ಬ್ರೀಟಿಷರಿಂದ ನಮಗೆ ಮುಕ್ತಿ ಸಿಕ್ಕಿದೆ ಎಂದರು.
ಮುಖ್ಯಶಿಕ್ಷಕ ಯೋಗಾನಂದ, ಶ್ರೀನಿವಾಸ್ ಚಾರ್, ರಾಮಸ್ವಾಮಿ, ಗೀತಾ, ಜಯಮಾಲ್ ಲಯನ್ಸ್ ಕ್ಲಬ್ ಅಧ್ಯಕ್ಷ ತಿಪ್ಪೇಶ್, ಸದಸ್ಯರಾದ ಯುಟಿ ನಾಯಕ್, ಶಿವಪ್ರಸಾದ್, ಅರವಿಂದ ಶೆಟ್ಟಿ, ಆರ್ ಕೆ ಹೆಗಡೆ, ಮೋಹನ್ ಕುಮಾರ್, ಲಯನ್ಸ್ ಕ್ಲಬ್ ಗೌರ್ನರ್, ಹನುಮಂತ್ ರಾಜ್, ತೋಪಯ್ಯ, ತಿರುಮಲಯ್ಯ, ಜಯಲಕ್ಷ್ಮಿ, ಸಾಹಿತಿಗಳಾದ ಬಿದಲೂರು ಸೋಮಣ್ಣ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.