ನಿರಂತರ ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದಬಹುದು-ಅಂಬಿಗೇರ

KannadaprabhaNewsNetwork |  
Published : Jun 23, 2024, 02:05 AM IST
ಪೊಟೋ ಪೈಲ್ ನೇಮ್ ೨೨ಎಸ್‌ಜಿವಿ೧    ಪಟ್ಟಣದ ಹೊರವಲಯದಲ್ಲಿರುವ ಪಿನಿಕ್ಸ ಇಂಟರ್ನ್ಯಾಷÀನಲ್ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಹಾಗೂ ವಿಶ್ವ ಯೋಗ ದಿನಾಚರಣೆ ಅಂಗವಾಗಿ  ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ ಸಸಿಗೆ ನೀರುಣಿಸಿ ಮಾತನಾಡಿದರು. | Kannada Prabha

ಸಾರಾಂಶ

ಮಾನವನ ಯೋಗಕ್ಷೇಮಕ್ಕೆ ಅವಶ್ಯವಿರುವ ಎಲ್ಲಾ ಸಂಪನ್ಮೂಲಗಳು ಈ ಭೂಮಿಯ ಮೇಲಿದೆ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಮತ್ತು ನಿರಂತರವಾಗಿ ಯೋಗ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು.

ಶಿಗ್ಗಾಂವಿ: ಮಾನವನ ಯೋಗಕ್ಷೇಮಕ್ಕೆ ಅವಶ್ಯವಿರುವ ಎಲ್ಲಾ ಸಂಪನ್ಮೂಲಗಳು ಈ ಭೂಮಿಯ ಮೇಲಿದೆ. ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಮತ್ತು ನಿರಂತರವಾಗಿ ಯೋಗ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಫಿನಿಕ್ಸ್‌ ಇಂಟರ್‌ ನ್ಯಾಶನಲ್‌ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಹಾಗೂ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸಸಿಗೆ ನೀರುಣಿಸಿ ಮಾತನಾಡಿದ ಅವರು ಮಾನವ ಸಂಕುಲದ ಬದುಕುಳಿಯುವಿಕೆಗೆ ಅವಶ್ಯವಿರುವ ಮೂಲಭೂತ ಅವಶ್ಯಕತೆಗಳನ್ನು ಪರಿಸರ ಒದಗಿಸುತ್ತದೆ ಎಂದರು.

ಫಿನಿಕ್ಸ ಇಂಟರ್‌ ನ್ಯಾಶನಲ್‌ ಶಾಲೆಯ ಅಧ್ಯಕ್ಷ ಡಾ.ಎಂ.ಎಂ. ತಿರ್ಲಾಪೂರ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯ ಇಂದಿನ ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮದ್ಯೆ ನಡೆಯುವ ಶಿಕ್ಷಣಕಷ್ಟೇ ಸೀಮಿತವಾಗದೇ ಪರಿಸರ ವಿನಾಶದಿಂದಾಗುವ ಪರಿಣಾಮ ಮತ್ತು ಪರಿಸರ ಸಮತೋಲನಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತಂತೆ ಚಿಂತಿಸಬೇಕಾದ ಅಗತ್ಯವಿದೆ. ಅಲ್ಲದೇ ಉತ್ತಮ ಆರೋಗ್ಯ ಶೈಲಿ ಹೊಂದಲು ಯೋಗ ತುಂಬ ಉಪಯುಕ್ತಕಾರಿಯಾಗಿದೆ ಎಂದರು.

ಸಂಸ್ಥೆ ಉಪಾಧ್ಯಕ್ಷ ನರಹರಿ ಕಟ್ಟಿ ಮಾತನಾಡಿ, ವಿಶ್ವವು ತಾಪಮಾನದಿಂದ ಸಾಕಷ್ಟು ತೊಂದರೆಗೆ ಈಡಾಗಿದೆ ಕಾರಣ ಪರಿಸರ ನಾಶ ಹಾಗೂ ಪರಿಸರದ ಬಗ್ಗೆ ಜವಾಬ್ದಾರಿಯನ್ನು ಅರಿತು ಮರಗಳನ್ನು ಬೆಳೆಸುವ ಪೋಷಿಸುವ ಕೆಲಸವನ್ನು ಅವಿರತವಾಗಿ ಮಾಡಬೇಕು ಅಲ್ಲದೇ ಉತ್ತಮ ಆರೋಗ್ಯಕ್ಕಾಗಿ ಯೋಗಾಭ್ಯಾಸ ಮಾಡಬೇಕು ಎಂದರು.

ಆರ್ಟ್‌ ಆಫ್ ಲಿವಿಂಗನ ಶೋಭಾ ಅಳಗವಾಡಿ, ಸಾಹಿತಿ ಶಿವಾನಂದ ಮ್ಯಾಗೇರಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಡಾ. ರಾಣಿ ತಿರ್ಲಾಪೂರ, ಮುಖ್ಯೋಪಾಧ್ಯಾಯ ಮಂಜುನಾಥ.ಕೆ. ಎಚ್., ಗಿರೀಶ ಡಿ.ಬಿ., ಶಿಕ್ಷಕರು, ಪಾಲಕರು ಸೇರಿದಂತೆ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಎಲ್ಲ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೆ ನೆರವೇರಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ