ತಾಲೂಕು ಸಮ್ಮೇಳನ ಲಾಂಛನ ಬಿಡುಗಡೆ

KannadaprabhaNewsNetwork | Published : Sep 22, 2024 1:51 AM

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಪಟ್ಟಣದಲ್ಲಿ ಅ.೧ ರಂದು ಜರುಗಲಿರುವ ತಾಳಿಕೋಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ತಹಸೀಲ್ದಾರ್‌ ಕೀರ್ತಿ ಚಾಲಕ್ ಅವರು ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ತಹಸೀಲ್ದಾರ್‌ ಕೀರ್ತಿ ಚಾಲಕ್, ತಾಳಿಕೋಟೆ ಐತಿಹಾಸಿಕ ನಗರಿ ತಾಲೂಕು ಕೇಂದ್ರವಾದ ಬಳಿಕ ಮೊದಲನೇಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅತ್ಯಂತ ಖುಷಿ ತಂದಿದೆ. ಕನ್ನಡಾಂಭೆಯ ತೇರನ್ನು ಎಲ್ಲರೂ ಒಗ್ಗಟ್ಟಿನಿಂದ ಎಳೆಯಬೇಕಾಗಿದೆ.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಪಟ್ಟಣದಲ್ಲಿ ಅ.೧ ರಂದು ಜರುಗಲಿರುವ ತಾಳಿಕೋಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ತಹಸೀಲ್ದಾರ್‌ ಕೀರ್ತಿ ಚಾಲಕ್ ಅವರು ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ತಹಸೀಲ್ದಾರ್‌ ಕೀರ್ತಿ ಚಾಲಕ್, ತಾಳಿಕೋಟೆ ಐತಿಹಾಸಿಕ ನಗರಿ ತಾಲೂಕು ಕೇಂದ್ರವಾದ ಬಳಿಕ ಮೊದಲನೇಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅತ್ಯಂತ ಖುಷಿ ತಂದಿದೆ. ಕನ್ನಡಾಂಭೆಯ ತೇರನ್ನು ಎಲ್ಲರೂ ಒಗ್ಗಟ್ಟಿನಿಂದ ಎಳೆಯಬೇಕಾಗಿದೆ. ನಮ್ಮ ನಾಡಿನ ಕನ್ನಡ ಭಾಷೆಯಲ್ಲಿ ಪ್ರೀತಿ ತುಂಬಿದೆ ಇಂತಹ ಭಾಷೆಯನ್ನು ಎಲ್ಲರೂ ಹೊತ್ತು ಮೆರೆಸುವಂತಹ ಸಂದರ್ಭ ಬಂದಿದ್ದು, ನಾಡಿನ ನೆಲ ಜಲ ಭಾಷೆಯನ್ನು ಉಳಿಸಿ ಬೆಳೆಸುವದರೊಂದಿಗೆ ಅದನ್ನು ರಕ್ಷಿಸುವ ಜವಾಬ್ದಾರಿಯೂ ಕೂಡ ಪ್ರತಿಯೊಬ್ಬರ ಮೇಲಿದೆ. ತಾಳಿಕೋಟೆ ತಾಲೂಕಿನ ಸಾಹಿತಿಗಳು ರಾಜ್ಯ ಅಲ್ಲದೇ ದೇಶ ಮಟ್ಟದಲ್ಲಿಯೂ ಹೆಸರು ಮಾಡಿರುವ ಅನೇಕರಿದ್ದಾರೆ. ಆದರೆ ಅವರಿಗೆ ವೇದಿಕೆ ನೀಡುವಂತಹ ಕಾರ್ಯವಾಗುವದರ ಜೊತೆಗೆ ಪ್ರೋತ್ಸಾಹಿಸ ಕೆಲಸವಾಗಬೇಕಿದೆ. ಅಲ್ಲದೇ, ಈ ಸಮ್ಮೇಳನದಲ್ಲಿ ತಾಲೂಕಿನ ಎಲ್ಲ ಇಲಾಖೆಗಳು ಈ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಎಲ್ಲ ರೀತಿಯಿಂದ ಸಹಕರಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿರುವ ಆರ್.ಎಲ್.ಕೊಪ್ಪದ ಕೂಡ ಕನ್ನಡ ಭಾಷಾಭಿಮಾನದ ಪ್ರತೀಕವಾಗಿದ್ದು, ಕನ್ನಡದ ತಾಯಿ ಭುವನೇಶ್ವರಿ ದೇವಿಯ ತೇರನ್ನು ಎಲ್ಲರನ್ನೂ ಒಗ್ಗೂಡಿಸಿಕೊಂಡು ಎಳೆಯಲು ಸಜ್ಜಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಮಯದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಆರ್.ಎಲ್.ಕೊಪ್ಪದ, ಸಾಹಿತಿಗಳಾದ ಗುರುಪಾದ ಘೀವಾರಿ, ಶ್ರೀಕಾಂತ್ ಪತ್ತಾರ, ಕಲಾವಿದ ಹುಸೇನ ಮಕಾನದಾರ, ಸಿ.ಆರ್.ಸಿ.ರಾಜು ವಿಜಾಪುರ, ಸಂಘಟನಾ ಸಂಚಾಲಕ ಜೈ ಭೀಮ್ ಮುತ್ತಗಿ, ರಾಜು ಹಂಚಾಟೆ, ಸಂಗನಗೌಡ ಅಸ್ಕಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ.ವಜ್ಜಲ್, ಡಾ.ಅನಿಲ್‌ ಕುಮಾರ ಇರಾಜ, ಆರ್.ಬಿ.ದಾನಿ, ಶಾಲಾ ಶಿಕ್ಷಕರ ಸಂಘದ ಗೌರವ ಕಾರ್ಯದರ್ಶಿ ಸುರೇಶ ಬೀರಗೊಂಡ, ಆರಿಫ್ ಹೊನ್ನುಟಗಿ, ಎಸ್.ವ್ಹಿ.ಜಾಮಗೊಂಡಿ, ಬಸವರಾಜ ಕಟ್ಟಿಮನಿ, ರವಿ ಕಟ್ಟಿಮನಿ, ಶಿಕ್ಷಕ ಗುಂಡುರಾವ್ ಧನಪಾಲ, ಸಿದ್ದು ಕಟ್ಟಿಮನಿ, ರೇಣುಕಾ ಕಲ್ಬುರ್ಗಿ, ಮಡಿವಾಳಮ್ಮ ನಾಡಗೌಡ, ಮುನ್ನಾ ಅತ್ತಾರ, ಪ್ರಭು ಸಣ್ಣಕ್ಕಿ, ಪರಿಷತ್ತಿನ ಮಹಿಳಾ ಪದಾಧಿಕಾರಿಗಳು ಹಾಗೂ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.

Share this article