ಸಾಮರಸ್ಯದ ಬದುಕಿಗೆ ಧರ್ಮ ಅಗತ್ಯ

KannadaprabhaNewsNetwork |  
Published : Apr 23, 2026, 01:45 AM IST
22 ಎಚ್‍ಎಚ್‍ಆರ್ ಪಿ 01ಸಮೀಪದ ಯಡೇಹಳ್ಳಿಯಲ್ಲಿ ಶ್ರೀ ಕರಿ ಬಸವೇಶ್ವರ ದೇವಸ್ಥಾನ, ಶ್ರೀ ಮೈಲೆಮಲ್ಲಮ್ಮ, ಗಣಪತಿ ಹಾಗೂ ಶಿವಲಿಂಗ ಶಿಲಾ ವಿಗ್ರಹಗಳ ಪ್ರಾಣ ಪ್ರತಿಷ್ಟಾಪನೆ ಪ್ರಯುಕ್ತ ಅಮ್ಮಿಕೊಂಡಿದ ಧರ್ಮ ಸಭೆಯನ್ನು ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಉದ್ಘಾಟಿಸಿದರು, ಮಳಲಿ ಮಠದ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಎಚ್,ಆರ್. ಬಸವರಾಜಪ್ಪ, ಎಸ್.ಎಂ.ಹಾಲೇಶಪ್ಪ, ಎಂ.ಪಾಲಾಕ್ಷಪ್ಪ ಇತರರಿದ್ದರು. | Kannada Prabha

ಸಾರಾಂಶ

ಹೊಳೆಹೊನ್ನೂರುಸಾಮರಸ್ಯದ ಬದುಕಿಗೆ ಧರ್ಮ ಅಗತ್ಯ ಎಂದು ಮಳಲಿ ಮಠದ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಧರ್ಮ ಸಭೆಯಲ್ಲಿ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಅಭಿಮತ

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಸಾಮರಸ್ಯದ ಬದುಕಿಗೆ ಧರ್ಮ ಅಗತ್ಯ ಎಂದು ಮಳಲಿ ಮಠದ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಸಮೀಪದ ಯಡೇಹಳ್ಳಿಯಲ್ಲಿ ಬುಧವಾರ ಶ್ರೀ ಕರಿಬಸವೇಶ್ವರ ದೇವಸ್ಥಾನ, ಶ್ರೀ ಮೈಲೆಮಲ್ಲಮ್ಮ, ಗಣಪತಿ ಹಾಗೂ ಶಿವಲಿಂಗ ಶಿಲಾ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಪ್ರಯುಕ್ತ ಶಿವಪೂಜೆ ಮಲ್ಲೇಶಪ್ಪ ವೇದಿಕೆಯಲ್ಲಿ ಅಮ್ಮಿಕೊಂಡಿದ ಧರ್ಮ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮೌಡ್ಯದ ಬದುಕಿಗಿಂತ ಮೌಲ್ಯಯುತ ಜೀವನ ನಡೆಸಬೇಕಿದೆ. ನಮ್ಮ ಪೂರ್ವಜರು ಮತ್ತು ದೇವ ನಾಮ ಸ್ಮರಣೆಯನ್ನು ಕೈ ಬಿಡಬಾರದು. ಪ್ರತಿಯೊಬ್ಬರು ಹೆತ್ತ ಒಡಲು ಸೇರಿದಂತೆ ಹೊತ್ತ ಹೆಗಲನ್ನು ಮರೆಯಬಾರದು. ಗುರಿ ಮುಟ್ಟಲು ಗುರುವಿನ ಮಾರ್ಗದರ್ಶನ ಅಗತ್ಯ. ಪ್ರತಿಯೊಬ್ಬರು ದಾನದ ಮಹತ್ವ ಅರಿಯಬೇಕು. ಸಹಜ ದಾನ ಶ್ರೇಷ್ಠ ಮಹತ್ವ ಪಡೆಯುತ್ತದೆ. ದೇವರಿನ ಗುಣಗಳು ಮಾನವರಿಗೂ ಲಭಿಸಲಿ ಎಂದು ಪೂರ್ವಜರು ಮಠ ಮಂದಿರಗಳನ್ನು ನಿರ್ಮಾಣ ಮಾಡಿದರು. ಸಮಾರಸ್ಯದ ಬದುಕಿಗೆ ಧರ್ಮ ಅಗತ್ಯ. ಸ್ನೇಹ ಭಾವನೆ ಬೆಳೆದರೆ ದ್ವೇಷ ಮರೆಯಯಾಗುತ್ತದೆ. ಪರಸ್ಪರ ದ್ವೇಷ. ಪರನಿಂದನೆ ಕೈ ಬಿಟ್ಟಿರೆ ಉತ್ತಮ ಬದುಕು ನಮ್ಮದಾಗುತ್ತದೆ. ಮಕ್ಕಳಲ್ಲಿ ಸಂಸ್ಕಾರ ಬೆಳೆಸುವುದನ್ನು ಮರೆಯಬಾರದು. ಕೋಟಿ ವಿದ್ಯೆಗಳಗಿಂತ ಮೇಟಿ ವಿದ್ಯೆ ಮೇಲೆಂಬುದು ಸರ್ವ ಕಾಲಿಕ ಸತ್ಯ. ಯುವಕರು ಕೃಷಿ ಕಡೆಗೆ ಆಕರ್ಷಿತರಾಗಬೇಕು. ನಾವು ಮಾಡಿದ ಉಪಕಾರ ಸೇರಿದಂತೆ ಪರರು ಮಾಡಿದ ಅಪಕಾರಗಳನ್ನು ಆದಷ್ಟು ಬೇಗನೆ ಮರೆಯಬೇಕು. ಜೀವಾತ್ಮಕ್ಕೆ ಶಿವನ ಅಂಶವೇ ಆದಾರವಾಗಿದ್ದು ಧರ್ಮ ಮಾರ್ಗದಲ್ಲಿ ಜೀವನ ನಡೆಸಬೇಕು ಎಂದರು.

ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತ‌ನಾಡಿದರು. ಈ ವೇಳೆ ಗ್ರಾಮ ಸಮಿತಿ ಅಧ್ಯಕ್ಷ ಎಸ್.ಎಂ. ಹಾಲೇಶಪ್ಪ, ಮಾಜಿ ಛೇರ್ಮನ್ ಜಿ.ನಂದ್ಯಪ್ಪ, ರೈತ ಮುಖಂಡ ಎಚ್.ಆರ್.ಬಸವರಾಜಪ್ಪ, ಉಪನ್ಯಾಸಕ ಮನೋಹರಮಠದ್, ಆಯನೂರು ಮಂಜುನಾಥ್, ಶ್ರೀನಿವಾಸ್ ಕರಿಯಣ್ಣ, ಸಿ.ಹನುಮಂತು, ಎಂ.ಪಾಲಾಕ್ಷಪ್ಪ, ಹೆಚ್.ಬಸಪ್ಪ, ಹೆಚ್.ಎನ್.ನಾಗರಾಜ್, ದೇವರಾಜ್, ಯುವರಾಜ್, ಮನೋಹರ್, ಕೆ.ಪಿ.ಕಿರಣ್ ಕುಮಾರ್, ಶೇಖರಪ್ಪ, ಶಿವಕುಮಾರ್, ಗದ್ದೆ ಮಂಜಣ್ಣ, ಆರ್.ದಿನೇಶ್, ಮೃತ್ಯುಂಜಯ ಸ್ವಾಮಿ ಸೇರಿದಂತೆ ಇತರರು ಇದ್ದರು.

--

ಪೋಟೋ: 22 ಎಚ್‍ಎಚ್‍ಆರ್ ಪಿ 01

ಯಡೇಹಳ್ಳಿಯಲ್ಲಿ ಹಮ್ಮಿಕೊಂಡಿದ ಧರ್ಮಸಭೆಯನ್ನು ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಕಾನೂನಿನ ಅರಿವು ಮೂಡಿಸುವ ಅವಶ್ಯಕತೆ ಇದೆ
ಗುಂಡ್ಲುಪೇಟೆಯ ಕಣಿಯರ ಬೀದೀಲಿ ರಸ್ತೆ ಮೇಲೆ ಕೊಳಚೆ ನೀರು ಹರಿವು!