ಮಕ್ಕಳಿಗೆ ಆಟೋಟದ ಜೊತೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ: ಕೆ.ಎಸ್.ಆನಂದ್‌

KannadaprabhaNewsNetwork |  
Published : Apr 23, 2026, 01:30 AM IST
22ಕೆಕೆಡಿಯು1. | Kannada Prabha

ಸಾರಾಂಶ

ಕಡೂರುಆಧುನಿಕ ವ್ಯವಸ್ಥೆಯೊಂದಿಗೆ ಪುಟಾಣಿ ಮಕ್ಕಳಿಗೆ ಆಟೋಟದ ಜೊತೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಶಾಸಕ ಕೆ.ಎಸ್.ಆನಂದ್‌ ತಿಳಿಸಿದರು.

ಕಡೂರಿನಲ್ಲಿ ಶ್ರೀ ಮಂಜು ವೆಂಕಟೇಶ್ವರ ಇನ್ಸೈಟ್ ಎಜುಕೇಶನ್ ಟ್ರಸ್ಟ್ ನಿಂದ ಬಚ್ಪನ್ ಪ್ಲೇ ಸ್ಕೂಲ್ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕಡೂರು

ಆಧುನಿಕ ವ್ಯವಸ್ಥೆಯೊಂದಿಗೆ ಪುಟಾಣಿ ಮಕ್ಕಳಿಗೆ ಆಟೋಟದ ಜೊತೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಶಾಸಕ ಕೆ.ಎಸ್.ಆನಂದ್‌ ತಿಳಿಸಿದರು.

ಅವರು ಪಟ್ಟಣದ ರೈಲ್ವೆ ಗೇಟ್ ಬಳಿ ಶ್ರೀ ಮಂಜು ವೆಂಕಟೇಶ್ವರ ಇನ್ಸೈಟ್ ಎಜುಕೇಶನ್ ಟ್ರಸ್ಟಿನಿಂದ ನೂತನವಾಗಿ ಆರಂಭಗೊಂಡ ಪ್ಲೇ ಸ್ಕೂಲನ್ನು ದೀಪ ಬೆಳಗಿಸಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಟ್ರಸ್ಟಿನ ಶೈಕ್ಷಣಿಕ ಕಾಳಜಿಯನ್ನು ಶ್ಲಾಘಿಸಿ, ಕಡೂರಿಗೆ ಗುಣಮಟ್ಟದ ಬಾಲ್ಯದ ಶಿಕ್ಷಣ ತಂದಿರುವುದು ಅಭಿನಂದನಾರ್ಹ. ಬಚ್ಪನ್ ಶಾಲೆಯಲ್ಲಿ ಚಟುವಟಿಕೆ ಆಧಾರಿತ ಕಲಿಕೆ, ಸ್ಮಾರ್ಟ್ ಕ್ಲಾಸ್ ಮತ್ತು ಸುರಕ್ಷಿತ ವಾತಾವರಣ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದೆ ಎಂದು ಹೇಳಿದರು.

ಟ್ರಸ್ಟಿನ ಆಡಳಿತ ಮಂಡಳಿ ಸ್ಪೀಕ್-ಓ-ಪೆನ್ ತಂತ್ರಜ್ಞಾನ, ವರ್ಣಮಯ ತರಗತಿಗಳು ಹಾಗೂ ಮಕ್ಕಳ ಸ್ನೇಹಿ ಪಠ್ಯಕ್ರಮದ ಬಗ್ಗೆ ವಿವರಿಸಿದ ಶಾಸಕರು, ಆಟದ ಪ್ರದೇಶ ಮತ್ತು ತರಗತಿಗಳಿಗೆ ಭೇಟಿ ನೀಡಿ ಪುಟಾಣಿಗಳನ್ನು ಮಾತನಾಡಿಸಿ ಅವರೊಂದಿಗೆ ಕೆಲ ಕಾಲ ಕಳೆದರು. ಭಾರತದ ಪ್ರಮುಖ ಪ್ಲೇ ಸ್ಕೂಲ್ ಸರಪಳಿಯಾದ ಬಚ್ಪನ್, ಮಂಜು ವೆಂಕಟೇಶ್ವರ ಇನ್ಸೈಟ್ ಎಜುಕೇಶನ್ ಟ್ರಸ್ಟ್ ಸಹಯೋಗದಲ್ಲಿ ಕಡೂರಿನಲ್ಲಿ ವಿಶ್ವ ದರ್ಜೆಯ ಬಾಲ್ಯದ ಶಿಕ್ಷಣವನ್ನು ಆರಂಭಿಸಿದೆ. ಟ್ರಸ್ಟಿನಿಂದ ಆರಂಭವಾಗಿರುವ ಬಚ್ಪನ್ ಪ್ಲೇ ಸ್ಕೂಲ್, ಕಡೂರಿನ ಪುಟಾಣಿಗಳಿಗೆ ಸಂತಸದಾಯಕ ಕಲಿಕೆ, ಸುರಕ್ಷಿತ ವಾತಾವರಣ ಮತ್ತು ಉಜ್ವಲ ಭವಿಷ್ಯದ ಭರವಸೆ ನೀಡಲಿದೆ. ಪೋಷಕರ ಸಹಕಾರ ಮತ್ತು ಸಮಾಜದ ಹಾರೈಕೆಯೊಂದಿಗೆ ಈ ಶೈಕ್ಷಣಿಕ ಪಯಣ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಮಾಜಿ ಶಾಸಕ ವೈಎಸ್ ವಿ.ದತ್ತ, ಬಿಇಒ ತಿಮ್ಮಪ್ಪ, ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಪುರಸಭಾ ಸದಸ್ಯ ತೋಟದಮನೆ ಮೋಹನ್, ಹೊಗರೇಹಳ್ಳಿ ಶಶಿ, ಭರತ್ ,ರಂಗನಾಥ್ ಶಾಲೆ ಸಿಬ್ಬಂದಿ ಪೋಷಕರು ಇದ್ದರು.

22ಕೆಕೆಡಿಯು1.

ಕಡೂರಿನ ರೈಲ್ವೆ ಗೇಟ್ ಸಮೀಪ ಆರಂಭಗೊಂಡ ಪುಟಾಣಿ ಮಕ್ಕಳ ಬಚ್ಪನ್ ಶಾಲೆಯನ್ನು ಶಾಸಕ ಕೆ ಎಸ್. ಆನಂದ್ ಉಧ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳೆಯ ನೆನಪು ಮರು ಕಳಿಸಿದ ಸ್ನೇಹ ಸಮ್ಮಿಲನ: ಕೆ.ಎಸ್.ಮನೋಹರ್
ಸ್ವಾತಂತ್ರ್ಯ-ಸಮಾನತೆ ಸಿಕ್ಕಾಗ ಹೆಣ್ಣು ಸಬಲೆ: ಚಂದ್ರೇಗೌಡ