ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಶೆಟ್ಟಹಳ್ಳಿ ಗ್ರಾಮದ ಶನೇಶ್ವರಸ್ವಾಮಿ ನೂತನ ದೇವಾಲಯದ ಲೋಕಾರ್ಪಣೆ ಮತ್ತು ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ ಭಾರತೀಯ ಸಂಸ್ಕೃತಿ ಇಡೀ ಜಗತ್ತಿಗೆ ಒಳಿತನ್ನು ಬಯಸುತ್ತದೆ ಎಂದರು.
ಬಸವಣ್ಣ ಹೇಳಿದಂಗೆ ದಯವೇ ಧರ್ಮದ ಮೂಲವಯ್ಯ ಸಕಲ ಜೀವ ರಾಶಿಗಳಲ್ಲಿ ಜೀವ ಇರಲಿ ಭಗವಂತ ಕಾರಣ,ಭಗವಂತ ದಯೆ ಇಲ್ಲದೆ ಯಾವುದು ಶಾಶ್ವತವಲ್ಲ ಹಾಗಾಗಿ ಧಾರ್ಮಿಕ ಭಾವನೆಗಳಿಗೆ ಹೆಚ್ಚು ಒತ್ತು ನೀಡಿ ಎಂದು ಸಲಹೆ ನೀಡಿದರು.ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ, ಗ್ರಾಮದ ಒಗ್ಗಟ್ಟಿನಿಂದ ಕಾರ್ಯಕ್ರಮ ಮಾಡಿದಿದ್ದೀರಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಡಗೂರು ಅಡವಿ ಮಠಾಧೀಶ ಶಿವಲಿಂಗೇಂದ್ರ ಸ್ವಾಮೀಜಿ, ಸೋಮಹಳ್ಳಿ ವೀರ ಸಿಂಹಾಸನ ಮಠಾಧೀಶ ಸಿದ್ದಮಲ್ಲ ಸ್ವಾಮೀಜಿ ಹಾಗೂ ಮಾದಾಪಟ್ಟಣ ವಿರಕ್ತ ಮಠಾಧೀಶ ತೋಂಟದಾರ್ಯ ಸ್ವಾಮೀಜಿ, ಚಿಪ್ಪತುಪ್ಪೂರು ಶಿವ ಪೂಜಾ ಮಠಾಧೀಶ ಚನ್ನವೀರಸ್ವಾಮೀಜಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್,ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್,ಎಪಿಎಂಸಿ ಅಧ್ಯಕ್ಷ ಆರ್.ಎಸ್.ನಾಗರಾಜು,ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಆಲತ್ತೂರು ಜಯರಾಂ,ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ದೇಪಾಪುರ,ಮೈಮುಲ್ ಮಾಜಿ ಅಧ್ಯಕ್ಷ ಎನ್.ಮಹದೇವಪ್ಪ,ಟಿಎಪಿಸಿಎಂಎಸ್ ಅಧ್ಯಕ್ಷ ಜಿ.ಮಡಿವಾಳಪ್ಪ,ವೀರಶೈವ ಮಹಾಸಭಾ ಅಧ್ಯಕ್ಷ ರವಿ, ಮುಖಂಡ ಶೆಟ್ಟಹಳ್ಳಿ ರಾಮಣ್ಣ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾ ಸಭಾದ ತಾಲೂಕು ನಿರ್ದೇಶಕ ಬಿ.ಸಿ.ಮಹದೇವಸ್ವಾಮಿ, ವಕೀಲ ಪ್ರಸಾದ್, ಎಸ್‌ಬಿ ನಾಗೇಂದ್ರಸ್ವಾಮಿ, ಮಾಜಿ ಪ್ರಧಾನ ಹಸಗೂಲಿ ಗಂಗಾಧರಪ್ಪ,ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು,ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಡಾ.ನವೀನ್ ಮೌರ್ಯ,ಚಾಮುಲ್ ಮಾಜಿ ನಿರ್ದೇಶಕ ಕನ್ನೇಗಾಲಸ್ವಾಮಿ,ಉದ್ಯಮಿ ಆರ್.ಮಧುಕುಮಾರ್,ಮುಖಂಡರಾದ ಹಸಗೂಲಿ ಶಿವಕುಮಾರ್,ಆಲತ್ತೂರು ಕೆ.ರಾಜೇಶ್,ಮಂಚಹಳ್ಳಿ ಬಾಬು,ಮಾಡ್ರಹಳ್ಳಿ ನಾಗೇಂದ್ರ,ಪ್ರಣಯ್,ಚನ್ನಮಲ್ಲೀಪುರ ಬಸವಣ್ಣ,ಚನ್ನಯ್ಯನಹುಂಡಿ ಡಾ.ಮಲ್ಲು,ಸಿದ್ದಯ್ಯನಪುರ ಸೋಮಶೇಖರ್, ಇದ್ದರು.