ಕಲೋತ್ಸವ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ

KannadaprabhaNewsNetwork |  
Published : Nov 04, 2024, 12:15 AM ISTUpdated : Nov 04, 2024, 12:16 AM IST
3ಎಚ್ಎಸ್ಎನ್17: 2024-25 ನೇ ಕಲೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿ ನಾನಾ ಬಹುಮಾನಗಳನ್ನು ಪಡೆದ ಬೇಲೂರು ತಾಲೂಕು ಅರೇಹಳ್ಳಿಯ ಅನುಗ್ರಹ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಶಾಲಾ ವ್ಯವಸ್ಥಾಪಕ ಫಾ.ಕಿರಣ್ ಮೆಲ್ವಿನ್ ಅಭಿನಂದಿಸಿದರು. | Kannada Prabha

ಸಾರಾಂಶ

ಅರೇಹಳ್ಳಿಯ ಮಲ್ನಾಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದ 2024-25ನೇ ಸಾಲಿನ ಕಲೋತ್ಸವ ಸ್ಪರ್ಧೆಯಲ್ಲಿ ಅರೇಹಳ್ಳಿಯ ಅಂಬೇಡ್ಕರ್‌ ನಗರದಲ್ಲಿರುವ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ನಾನಾ ಸ್ಥಾನಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದು, ಜಾನಪದ ನೃತ್ಯ 6 , ಕ್ವಿಜ್ 2, ಕವ್ವಾಲಿ 6 ವಿದ್ಯಾರ್ಥಿಗಳು ಸೇರಿದಂತೆ ವೈಯಕ್ತಿಕ ಹಾಗೂ ಗುಂಪು ವಿಭಾಗಗಳಲ್ಲಿ ಭಾಗವಹಿಸಿ ಒಟ್ಟು 27 ಪದಕಗಳನ್ನು ವಿದ್ಯಾರ್ಥಿಗಳು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಬೇಲೂರು: ತಾಲೂಕು ಅರೇಹಳ್ಳಿಯ ಮಲ್ನಾಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದ 2024-25ನೇ ಸಾಲಿನ ಕಲೋತ್ಸವ ಸ್ಪರ್ಧೆಯಲ್ಲಿ ಅರೇಹಳ್ಳಿಯ ಅಂಬೇಡ್ಕರ್‌ ನಗರದಲ್ಲಿರುವ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ನಾನಾ ಸ್ಥಾನಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದು, ಜಾನಪದ ನೃತ್ಯ 6 , ಕ್ವಿಜ್ 2, ಕವ್ವಾಲಿ 6 ವಿದ್ಯಾರ್ಥಿಗಳು ಸೇರಿದಂತೆ ವೈಯಕ್ತಿಕ ಹಾಗೂ ಗುಂಪು ವಿಭಾಗಗಳಲ್ಲಿ ಭಾಗವಹಿಸಿ ಒಟ್ಟು 27 ಪದಕಗಳನ್ನು ವಿದ್ಯಾರ್ಥಿಗಳು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಈ ವಿದ್ಯಾರ್ಥಿಗಳನ್ನು ಶಾಲಾ ವ್ಯವಸ್ಥಾಪಕ ಫಾ.ಕಿರಣ್ ಮೆಲ್ವಿನ್, ಮುಖ್ಯ ಶಿಕ್ಷಕ ರಂಜಿತ್ ಕುಮಾರ್ ಕೆ.ಎಸ್, ಶಿಕ್ಷಕರಾದ ಸುಮಿತ ಕೀರ್ತಿ, ನಿರ್ಮಲ, ಚಂದ್ರು, ಜ್ಯೋತಿ, ಗ್ರೇಷಿಯನ್ ಮೆನೆಜಸ್ ಸಂಗೀತ ಶಿಕ್ಷಕಿ ಗೌರಿ ಹೆಗಡೆ ಅಭಿನಂದಿಸಿದರು.ವಿಜೇತರ ವಿವರ:

1. ಚೈತನ್ಯ ಎಸ್ .ಆರ್ . ಮತ್ತು ತಂಡ -ಜಾನಪದ ನೃತ್ಯ (ಪ್ರ) 2.ಪ್ಲೆವಿನ್ -ಮಿಮಿಕ್ರಿ (ಪ್ರ) 3. ಪೆಲ್ಸ್ ಟನ್ - ಆಶು ಭಾಷಣ (ಪ್ರ) 4.ಮೊಹಮ್ಮದ್ ಬಿಲಾಲ್- ಅರೇಬಿಕ್ ಧಾರ್ಮಿಕ ಪಠಣ (ಪ್ರ) , ದುಂಬಿನಿ -ಭಗವದ್ಗೀತೆ ಧಾರ್ಮಿಕ ಪಠಣ(ದ್ವಿ), ಅಫ್ಸಾನಾ ಬಾನು-ಕನ್ನಡ ಪ್ರಬಂಧ (ದ್ವಿ),ಆಯೇಷಾ ಸಿದ್ಧಿಕಾ-ಹಿಂದಿ ಭಾಷಣ (ದ್ವಿ), ಯಶಸ್ವಿನಿ ಹಾಗೂ ಪೆಲ್ಸ್ ಟನ್ -ಕ್ವಿಜ್ (ದ್ವಿ), ಆದಿತ್ಯ-ಚಿತ್ರಕಲೆ (ದ್ವಿ), ಪೆಲ್ಸ್ ಟನ್ - ಚರ್ಚಾ ಸ್ಪರ್ಧೆ(ದ್ವಿ), ಜಾಯ್ಸಟನ್- ಜನಪದ ಗೀತೆ(ದ್ವಿ), ಫಿದಾ ಮತ್ತು ತಂಡ- ಕವ್ವಾಲಿ (ತೃ), ಭವ್ಯ- ಭಾವಗೀತೆ(ತೃ), ಜ್ಞಾನೇಶ್-ಕವನ ವಾಚನ (ತೃ), ಯಶಸ್ವಿನಿ-ಭರತನಾಟ್ಯ(ತೃ), ಸಿಯಾನ್ ಜೈಸನ್ ಡಿ ಕುನ್ಹಾ- ಇಂಗ್ಲೀಷ್ ಭಾಷಣ(ತೃ).

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!