ಆದರ್ಶ ವ್ಯಕ್ತಿತ್ವದ ಶ್ರೀಕೃಷ್ಣನ ಸ್ಮರಣೆ ಮಾಡಿರಿ

KannadaprabhaNewsNetwork |  
Published : Aug 27, 2024, 01:41 AM IST
ಕೃಷ್ಣ ಜಯಂತಿ | Kannada Prabha

ಸಾರಾಂಶ

ಮಹನೀಯರ ಜನ್ಮದಿನವನ್ನು ಆಚರಿಸುವ ಮೂಲಕ ಅವರು ನಾಡಿಗೆ ನೀಡಿದ ಕೊಡುಗೆ ಸ್ಮರಿಸಬೇಕು. ಮುಂದಿನ ತಲೆಮಾರಿನವರಿಗೆ ಅವರ ತತ್ವಾದರ್ಶಗಳನ್ನು ಪರಿಚಯಿಸುವ ಕೆಲಸ ಆಗಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ತುಮಕೂರು: ಮಹನೀಯರ ಜನ್ಮದಿನವನ್ನು ಆಚರಿಸುವ ಮೂಲಕ ಅವರು ನಾಡಿಗೆ ನೀಡಿದ ಕೊಡುಗೆ ಸ್ಮರಿಸಬೇಕು. ಮುಂದಿನ ತಲೆಮಾರಿನವರಿಗೆ ಅವರ ತತ್ವಾದರ್ಶಗಳನ್ನು ಪರಿಚಯಿಸುವ ಕೆಲಸ ಆಗಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.ನಗರದ ಅಶೋಕ ನಗರದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವೇದಿಕೆ ಹಾಗೂ ಕರುನಾಡ ಮಿತ್ರ ಫೌಂಡೇಷನ್ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತಿ, ದೇವರಾಜ ಅರಸು, ನಾರಾಯಣಗುರುಗಳ ಜಯಂತಿ ಕಾರ್ಯಕ್ರಮಲ್ಲಿ ಮಾತನಾಡಿದರು. ನಮ್ಮ ನಾಡು, ದೇಶದ ಬಗ್ಗೆ ಯುವ ಜನರಲ್ಲಿ ಅಭಿಮಾನ ಮೂಡಬೇಕು. ಪ್ರಧಾನಿ ನರೇಂದ್ರ ಮೋದಿ ಜಗತ್ತು ಕಂಡು ಶ್ರೇಷ್ಠ ಆಡಳಿತಗಾರರಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದರು.

ಹಿಂದಿನ ಕೆಲವು ರಾಜಮಹಾರಾಜರ ಆಡಳಿತ ಕಾಲವನ್ನು ನಾವು ಸುವರ್ಣಯುಗ ಎಂದು ಗುರುತಿಸುತ್ತೇವೆ. ಹಾಗೇ ನರೇಂದ್ರ ಮೋದಿ ಆಡಳಿತ ಸುವರ್ಣಯುಗ. ಭಾರತದ ಅಭಿವೃದ್ಧಿಗೆ ಮೋದಿಯವರು ಶ್ರಮಿಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ನವರು ನಮ್ಮ ದೇಶವನ್ನು ಬಾಂಗ್ಲಾ ಮಾಡುತ್ತೇವೆ, ಆಫ್ಘಾನಿಸ್ತಾನ ಮಾಡುತ್ತೇವೆ ಎಂದು ದೇಶ ಒಡೆಯುವಂತಹ ಹೇಳಿಕೆ ನೀಡುತ್ತಿರುವುದು ದುರಾದೃಷ್ಟಕರ. ರಾಜ್ಯಪಾಲರು ಸಂವಿಧಾನದಡಿ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದನ್ನು ಕಾಂಗ್ರೆಸ್‌ನವರು ವಿರೋಧಿಸುತ್ತಿರುವುದು ಖಂಡನೀಯ. ತನಿಖೆ ಬಗ್ಗೆ ಕಾಂಗ್ರೆಸ್‌ನವರಿಗೆ ಆತಂಕವೇಕೆ? ಎಂದು ಪ್ರಶ್ನಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಉಳುವವನೇ ಭೂಮಿಯ ಒಡೆಯ ಕಾರ್ಯಕ್ರಮದಿಂದ ಅನೇಕ ಭೂರಹಿತರು ಭೂಮಿಯ ಯಜಮಾನರಾದರು. ಅವರ ಕಾರ್ಯಕ್ರಮಗಳು ಶೋಷಿತ ವರ್ಗದವರು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಿಲು ನೆರವಾದವು ಎಂದರು.ಕರುನಾಡ ಮಿತ್ರ ಫೌಂಡೇಷನ್ ಅಧ್ಯಕ್ಷ ಜೆ.ಜಗದೀಶ್ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಅನೇಕ ಮಹನೀಯರು ಈ ಸಮಾಜಕ್ಕೆ ಆದರ್ಶದ ಮಾರ್ಗದರ್ಶನ ನೀಡಿದ್ದಾರೆ. ಅವರ ಅದರ್ಶಗಳನ್ನು ಅನುಸರಿಸಿಕೊಂಡು ಮುನ್ನಡೆದರೆ ನಾವೆಲ್ಲಾ ಭಾವೈಕ್ಯತೆಯಿಂದ ಬಾಳಲು ಅವಕಾಶವಿದೆ ಎಂದು ಹೇಳಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ, ಕಾಡುಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ಕರಿಯಪ್ಪ, ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ವೇದಮೂರ್ತಿ, ಮುಖಂಡರಾದ ಟಿ.ಆರ್.ಸದಾಶಿವಯ್ಯ, ನಗರ ಪಾಲಿಕೆ ಮಾಜಿ ಸದಸ್ಯರಾದ ಮಲ್ಲಿಕಾರ್ಜುನ್, ಪುಟ್ಟರಾಜು, ಟಿ.ಜಿ.ನರಸಿಂಹರಾಜು, ಮುಖಂಡರಾದ ಮರಿತಿಮ್ಮಯ್ಯ, ಡಾ.ರಾಜಣ್ಣ, ಸತ್ಯಮಂಗಲ ಜಗದೀಶ್, ಓ.ಎಲ್.ಪುರುಷೋತ್ತಮ್, ಕೊಪ್ಪಳ್ ನಾಗರಾಜು, ಚಂದ್ರಬಾಬು ಮೊದಲಾದವರು ಭಾಗವಹಿಸಿದ್ದರು.

PREV

Latest Stories

ಏಕರೂಪ ಸಿನಿಮಾ ಟಿಕೆಟ್‌ ದರಕ್ಕೆ ಕರಡು- ಗರಿಷ್ಠ ಟಿಕೆಟ್‌ ದರ ₹200 ನಿಗದಿ
ಶಾಲೆಯಲ್ಲಿನ ಕಲುಷಿತ ಬಿಸಿಯೂಟ ಸೇವಿಸಿ 68 ವಿದ್ಯಾರ್ಥಿಗಳು ಅಸ್ವಸ್ಥ
ರಾಷ್ಟ್ರೀಯ ಲೋಕ ಅದಾಲತ್: 58.67 ಲಕ್ಷ ಕೇಸ್ ಇತ್ಯರ್ಥ