ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನಗರದ ಡಿ.ಎ.ಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮವದಲ್ಲಿ ನೂತನವಾಗಿ ನಿರ್ಮಿಸಿರುವ ರಾಜ್ಯದಲ್ಲೇ ಅತಿ ಎತ್ತರದ ಹುತಾತ್ಮರ ಸ್ಮಾರಕಕ್ಕೆ ಗೌರವ ವಂದನೆ ಸಲ್ಲಿಸಿ, ನಂತರ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಕರ್ತವ್ಯದಲ್ಲಿರುವಾಗ ತಮ್ಮ ಖಾಸಗಿ ಬದುಕಿನ ಕಡೆಯು ಹೆಚ್ಚು ಗಮನಹರಿಸದೇ ಸಮಾಜದ ಶಾಂತಿ ಸುವ್ಯವಸ್ಥೆಗೆ ಹೆಚ್ಚು ಗಮನ ನೀಡುವ ಅವರ ಕರ್ತವ್ಯ ಅಭಿನಂದನಾರ್ಹ, ಹಲವು ಸವಾಲುಗಳು ಎದುರಾದಾಗ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ನಾವು ಎಷ್ಟು ಗೌರವ ಸಲ್ಲಿಸಿದರೂ ಸಾಲದು. ವೀರ ಮರಣ ಹೊಂದಿದ ಪೊಲೀಸರಿಗೆ ಗೌರವ ಸಲ್ಲಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.ಕಾಡುಗಳ್ಳ, ನರಹಂತಕ ವೀರಪ್ಪನ್‌ನಿಂದ ಅರಣ್ಯಾಧಿಕಾರಿ ಪಿ. ಶ್ರೀನಿವಾಸ್ ಸೇರಿದಂತೆ ಹಲವು ಪೊಲೀಸರು ಹತರಾದರು, ಪೊಲೀಸರು ಹಲವು ಸವಾಲಗಳನ್ನು ಎದುರಿಸಿ ನಾಡಿನ ಒಳಗಡೆ ಶಾಂತಿ ಸುವ್ಯವಸ್ಥೆಗಾಗಿ ಶ್ರಮಿಸುತ್ತಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಹುತಾತ್ಮರ ನಾಮವಾಚನ ಮಾಡಿ ಮಾತನಾಡಿ, ೨೧-೧೦-೧೯೫೯ ರಂದು ಭಾರತದ ಗಡಿ ಪ್ರದೇಶದಲ್ಲಿರುವ ಲಡಾಕ್ ಹಾಟ್ ಸ್ಪಿಂಗ್‌ನ ಆಕ್ಸಾಯ್ ಎಂಬ ಸ್ಥಳದಲ್ಲಿ ಸಿ.ಆರ್.ಪಿ.ಎಫ್, ಪಡೆಯ ಎಸ್.ಐ, ಶ್ರೀ.ಕಿರಣ್ ಸಿಂಗ್ ಮತ್ತು ಅವರ ಸಿಬ್ಬಂದಿಗಳು ಗಡಿ ಪಹರೆ ಕರ್ತವ್ಯದಲ್ಲಿರುವಾಗ ಇವರ ಮೇಲೆ ಹೆಚ್ಚು ಬಲ ಹೊಂದಿದ್ದ ಚೀನಾ ನಡೆ ಹೊಂಚು ಹಾಕಿ ಆಧುನಿಕ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿತ್ತು. ಆದರೂ ನಮ್ಮ ಭಾರತೀಯ ವೀರ ಪೊಲೀಸರು ಎದೆಗುಂದದೆ ಜೀವದ ಹಂಗು ತೊರೆದು ರಕ್ತದ ಕೊನೆಯ ಹನಿ ಹಾಗೂ ಕೊನೆಯ ಗುಂಡು ಇರುವವರೆಗೂ ಕೇವಲ ರೈಫಲ್ಸ್‌ಗಳಿಂದ ನಮ್ಮ ಪೊಲೀಸರು ಧೈರ್ಯ ಮತ್ತು ಸಾಹಸದಿಂದ ಹೋರಾಟ ನಡೆಸಿದರು. ೧೦ ಜನ ಪೊಲೀಸರು ಮರಣ ಹೊಂದಿದ್ದು, ೧೯ ಮಂದಿ ಪೊಲೀಸರು ಗಾಯಗೊಂಡು ಸೆರೆಯಾದರು.
ಈ ನೆನಪಿಗಾಗಿ ಪ್ರತಿ ವರ್ಷ ಸೇವೆಯಲ್ಲಿದ್ದಾಗ ಮರಣ ಹೊಂದಿದ ಪೊಲೀಸರ ಕಾರ್ಯದ ನೆನಪಿಗಾಗಿ ದೇಶವ್ಯಾಪಿ ಪ್ರತಿ ವರ್ಷ ಅಕ್ಟೋಬರ್ ೨೧ ರಂದು ಪೊಲೀಸ್ ಹುತಾತ್ಮರ ದಿನವನ್ನು ಆಚರಿಸರಾಗುತ್ತಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧೀಕಾರಿ ಭಾಸ್ಕರ್, ಬಿ, ಅಡಿಷನಲ್ ಎಸ್ಪಿ ಶಶಿಧರ್, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.