ಖ್ಯಾತ ವೈದ್ಯ ಟಿ.ಬಿ.ಪ್ರಸಾದ್‌ಗೆ ಸುವರ್ಣ ಸೇವಾರತ್ನ ಬಿರುದು

KannadaprabhaNewsNetwork |  
Published : Dec 02, 2025, 01:45 AM IST
ಖ್ಯಾತ ವೈದ್ಯರಾದ ಟಿ.ಬಿ.ಪ್ರಸಾದ ಅವರಿಗೆ ಸುವರ್ಣ ಸೇವಾ ರತ್ನ ಬಿರುದು ನೀಡಿ ಸನ್ಮಾನ | Kannada Prabha

ಸಾರಾಂಶ

ತರೀಕೆರೆ, ಲಕ್ಕವಳ್ಳಿ ಗ್ರಾಮ ಮುಖ್ಯ ರಸ್ತೆಯ ಶ್ರೀ ಬಸವೇಶ್ವರ ಆಸ್ಪತ್ರೆ ವೈದ್ಯ ಟಿ.ಬಿ.ಪ್ರಸಾದ ಅವರನ್ನು ಕರುಣಾಮಯಿ ಸೇವಾ ಟ್ರಸ್ಟ್ ನಿಂದ ಆಯೋಜಿಸಿದ್ದ ಸಮಾರಂಭದಲ್ಲಿ "ಸುವರ್ಣ ಸೇವಾ ರತ್ನ " ಎಂಬ ಬಿರುದು ನೀಡಿ ಸನ್ಮಾನ ಮಾಡಲಾಯಿತು.

ಹೆಚ್ಚು ಹಣ ಪಡೆಯದೇ ಚಿಕಿತ್ಸೆ ನೀಡುವ ವೈದ್ಯ

ನ್ನಡಪ್ರಭ ವಾರ್ತೆ, ತರೀಕೆರೆ

ಲಕ್ಕವಳ್ಳಿ ಗ್ರಾಮ ಮುಖ್ಯ ರಸ್ತೆಯ ಶ್ರೀ ಬಸವೇಶ್ವರ ಆಸ್ಪತ್ರೆ ವೈದ್ಯ ಟಿ.ಬಿ.ಪ್ರಸಾದ ಅವರನ್ನು ಕರುಣಾಮಯಿ ಸೇವಾ ಟ್ರಸ್ಟ್ ನಿಂದ ಆಯೋಜಿಸಿದ್ದ ಸಮಾರಂಭದಲ್ಲಿ "ಸುವರ್ಣ ಸೇವಾ ರತ್ನ " ಎಂಬ ಬಿರುದು ನೀಡಿ ಸನ್ಮಾನ ಮಾಡಲಾಯಿತು.ತರೀಕೆರೆ ವಿಧಾನಸಭಾ ಕ್ಷೇತ್ರದ ಪ್ರಥಮ ಶಾಸಕ ದಿ.ಟಿ.ಸಿ.ಬಸಪ್ಪನವರ ಪುತ್ರ ಡಾ.ಟಿ.ಬಿ.ಪ್ರಸಾದ ಲಕ್ಕವಳ್ಳಿ ಗ್ರಾಮದಲ್ಲಿ ಸುಮಾರು50ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ರೋಗಿಗಳಿಂದ ಹೆಚ್ಚು ಹಣ ಪಡೆಯದೇ ಎಂಥಾ ಕ್ಲಿಷ್ಟಕರ ಕಾಯಿಲೆಗಳಿಂದ ಬಳಲುತ್ತಿದ್ದ ರೋಗಿಗಳಿಗೂ ಚಿಕಿತ್ಸೆ ನೀಡುತ್ತಿದ್ದಾರೆ. ಶಾಸಕರ ಪುತ್ರರಾಗಿದ್ದರೂ ನಿಸ್ವಾರ್ಥವಾಗಿ, ಪ್ರಾಮಾಣಿಕ ವಾಗಿ, ಬಡರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಒದಗಿಸುವ ಗುರಿಯಿಂದ ಯಾವುದೇ ಆಮಿಷಗಳಿಗೆ ಒಳಗಾಗದೆ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವುದು ಪ್ರಶಂಸನೀಯ, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಲಕ್ಕವಳ್ಳಿ ಹೋಬಳಿ ಮಾತ್ರವಲ್ಲ, ಅಕ್ಕಪಕ್ಕದ ತಾಲೂಕು ಹಾಗೂ ಜಿಲ್ಲೆಗಳ ಜನರು ಡಾಕ್ಟರ್ ಪ್ರಸಾದ್ ನವರನ್ನು ಸಾಕ್ಷಾತ್ 2ನೇ ದೇವರೆಂದು ಭಾವಿಸಿದ್ದಾರೆ. ಲಕ್ಕವಳ್ಳಿಯಲ್ಲಿ ತಮ್ಮ ಇಳಿ ವಯಸ್ಸಿನಲ್ಲೂ ಹುರುಪಿನಿಂದ ಸೇವೆ ಸಲ್ಲಿಸುತ್ತಿರುವ ಇವರ ವಯಸ್ಸು 75 ದಾಟಿದ್ದು ಇವರ ಈ ಸೇವೆ ಪರಿಗಣಿಸಿ ಬಿರುದು ನೀಡಿ ಗೌರವಿಸಲಾಯಿತು. ಗ್ರಾಪಂ ಸದಸ್ಯ ಫಣಿರಾಜ್, ವೆಂಕಟೇಶ್, ಬಾಲ ಕೃಷ್ಣ ಮಾಸ್ಟರ್, ರಮೇಶ್, ಹರಿಕೃಷ್ಣ, ಸಂಜೀವ ಕುಮಾರ್, ಮಾಜಿ ಸಿಂಡಿಕೇಟ್ ಸದಸ್ಯ ಎಲ್. ಟಿ. ಹೇಮಣ್ಣ, ಮಂಜುನಾಥ್ ರೆಡ್ಡಿ, ಹರೀಶ್ ಹಾಗೂ ಟ್ರಸ್ಟ್ ನಿಂದ ಅಧ್ಯಕ್ಷ ಮಂಜುನಾಥ್ . ಗ್ರಾಪಂ ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು, ಗ್ರಾಮದ ಮುಖಂಡರು ಹಾಜರಿದ್ದರು.

-

29ಕೆಟಿಆರ್.ಕೆ.1ಃ ತರೀಕೆರೆ ಸಮೀಪದ ಲಕ್ಕವಳ್ಳಿಯಲ್ಲಿ ಖ್ಯಾತ ವೈದ್ಯರಾದ ಟಿ.ಬಿ.ಪ್ರಸಾದ ಅವರಿಗೆ ಸುವರ್ಣ ಸೇವಾ ರತ್ನ ಬಿರುದು ನೀಡಿ ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ