ರೇಣುಕಾ ಯಲ್ಲಮ್ಮ ದೇವಿಗೆ ₹4.5 ಲಕ್ಷದ ಸೀರೆ ಅರ್ಪಣೆ

KannadaprabhaNewsNetwork |  
Published : Apr 12, 2025, 12:46 AM IST
ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಶಿವಯೋಗೀಶ್ವರ ಮಹಾರಾಜರ, ಅಡವಿಲಿಂಗ ಮಹಾರಾಜರು ರೇಷ್ಮೆಯಿಂದ ತಯಾರಿಸಿದ ಮತ್ತು ಚಿನ್ನದ ಝರಿಗಳನ್ನು ಒಳಗೊಂಡ ಸೀರೆಯನ್ನು ದೇವಿಗೆ ಅರ್ಪಿಸಿದರು. ಬಾಬುರಾಯಗೌಡ ಬಿರಾದಾರ, ಕಲಾವತಿ, ಪೂಜ್ಯರು ಇತರರಿದ್ದರು. | Kannada Prabha

ಸಾರಾಂಶ

ವಿಜಯಪುರ ಜಿಲ್ಲೆಯ ಜಂಬಗಿಯ ಪ್ರಭುದೇವರ ಬೆಟ್ಟದ ಶಿವಯೋಗೀಶ್ವರ ಮಹಾರಾಜರ ಸಂಕಲ್ಪದಂತೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವೀರಘಟ್ಟದ ಅಡವಿಲಿಂಗ ಮಹಾರಾಜರು ಸುಮಾರು ₹4.5 ಲಕ್ಷ ವೆಚ್ಚದಲ್ಲಿ ಸಿದ್ಧಪಡಿಸಿದ ಸೀರೆಯನ್ನು ರೇಣುಕಾ ಯಲ್ಲಮ್ಮ ದೇವಿಗೆ ಗುರುವಾರ ರಾತ್ರಿ ಅರ್ಪಿಸಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ವಿಜಯಪುರ ಜಿಲ್ಲೆಯ ಜಂಬಗಿಯ ಪ್ರಭುದೇವರ ಬೆಟ್ಟದ ಶಿವಯೋಗೀಶ್ವರ ಮಹಾರಾಜರ ಸಂಕಲ್ಪದಂತೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವೀರಘಟ್ಟದ ಅಡವಿಲಿಂಗ ಮಹಾರಾಜರು ಸುಮಾರು ₹4.5 ಲಕ್ಷ ವೆಚ್ಚದಲ್ಲಿ ಸಿದ್ಧಪಡಿಸಿದ ಸೀರೆಯನ್ನು ರೇಣುಕಾ ಯಲ್ಲಮ್ಮ ದೇವಿಗೆ ಗುರುವಾರ ರಾತ್ರಿ ಅರ್ಪಿಸಿದರು.

1955ರಲ್ಲಿ ಜಂಬಗಿಯ ಪ್ರಭುದೇವರ ಬೆಟ್ಟದ ಶಿವಯೋಗೀಶ್ವರ ಮಹಾರಾಜರು ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಆಗಮಿಸಿದ್ದರು. ಆಗ ದೇವಿಗೆ ಇಂಥ ಸೀರೆ ನೀಡುವುದಾಗಿ ಬೇಡಿಕೊಂಡಿದ್ದರು. 70 ವರ್ಷಗಳ ನಂತರ, ಕಾಶಿಯ ಬನಾರಸನಲ್ಲಿ ರೇಷ್ಮೆಯಿಂದ ತಯಾರಿಸಿದ ಮತ್ತು ಚಿನ್ನದ ಝರಿಗಳನ್ನು ಒಳಗೊಂಡ ಸೀರೆಯನ್ನು ದೇವಿಗೆ ಅರ್ಪಿಸಿ ಭಕ್ತಿ ಮೆರೆದರು.ಸಕಲ ಜೀವರಾಶಿಗೆ ಒಳಿತಾಗಲೆಂದು ಪ್ರಾರ್ಥಿಸಿದರು. ನಂತರ ದೇವಿಗೆ ಉಡಿ ತುಂಬಿ ಹರಕೆ ತೀರಿಸಿದರು. ಶುಕ್ರವಾರ ಬೆಳಗ್ಗೆ ಮಡಿಭಜನೆ, ಧಾರ್ಮಿಕ ಸಭೆ ನೆರವೇರಿದವು. ರಾಯಚೂರು, ವಿಜಯಪುರ, ಬಳ್ಳಾರಿ ಜಿಲ್ಲೆಗಳಿಂದ ಬಂದಿದ್ದ ನೂರಾರು ಕಲಾವಿದರು ನಿರಂತರ 3 ದಿನಗಳವರೆಗೂ ಭಜನೆ ಪ್ರಸ್ತುತಪಡಿಸಿದರು.ವೀರಘಟ್ಟದ ಅಡವಿಲಿಂಗ ಮಹಾರಾಜರು, ವಿವೇಕ ಚಿಂತಾಮಣಿ ಶ್ರೀಗಳು, ವಿಜಯಪುರದ ಮಧುವನ ಹೋಟೆಲ್‌ನ ಬಾಬುರಾಯಗೌಡ ಬಿರಾದಾರ, ಕಲಾವತಿ ಬಿರಾದಾರ, ಜ್ಞಾನಸಿಂಧು ಶ್ರೀಗಳು, ಬಯಲು ಬಸವೇಶ್ವರ ಶ್ರೀಗಳು, ಸಿ.ಎನ್.ಕುಲಕರ್ಣಿ, ಆರ್.ಎಚ್.ಸವದತ್ತಿ, ಗಡ್ಡಯ್ಯ ಋಷಿಗಳು, ಅಲ್ಲಮಪ್ರಭು ಪ್ರಭುನವರ, ಜಿ.ಸಿ.ಕಗದಾಳ, ಎನ್.ಎಸ್.ಸಬರದ, ಗಿರೀಶ ಅನಂತರಡ್ಡಿ, ದೇವಪ್ಪ ಶ್ರೀಗಳು, ಎಸ್.ಬಿ.ಮಹಜನಶೇಟ್ಟಿ, ಸಂಗನಗೌಡ ಪಾಟೀಲ, ಶರಣಬಸಪ್ಪ ಹರವಿ, ರಾಮನಗೌಡ ಲಿಂಗಡೂಣಿ, ಶಾಂತಯ್ಯ ಮುತ್ಯಾ, ಜಂಬಗಿ ದೇಶಮುಖ ಮನೆತನದ ಭಕ್ತರು, ವಿಜಯಕುಮಾರ ನಾರಾಯಣಪೂರ, ರಾಘು ಹಿರೇಮಠ, ಮಹೇಶ ಕುಂಬಾರ, ಮಹದೇವ ಬಿರಾದಾರ, ಮಲ್ಲಿಕಾರ್ಜುನ ಬುಯ್ಯಾರ, ಮಂಜನಗೌಡ ಸಂಧಿಮನಿ, ಪಂಡಿತ ಯಡೂರಯ್ಯ ಹಾಗೂ ನೂರಾರು ಭಕ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ