ರೇಣುಕರ ತತ್ವಗಳು ಶಾಂತಿ ನೆಮ್ಮದಿಗೆ ದಾರಿದೀಪ

KannadaprabhaNewsNetwork |  
Published : Mar 13, 2025, 12:46 AM IST
ತುಮಕೂರಿನಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ | Kannada Prabha

ಸಾರಾಂಶ

ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶ ನೀಡಿದ ರಂಭಾಪುರಿ ಪೀಠದ ಹಿಂದಿನ ಜಗದ್ಗುರುಗಳಾಗಿದ್ದ ಲಿಂ. ಶ್ರೀ ವೀರ ಗಂಗಾಧರ ಶಿವಾಚಾರ್ಯರ ಮೂಲ ಗುರುಗಳಾಗಿರುವ ಶ್ರೀರೇಣುಕಾಚಾರ್ಯರು ವಿಶ್ವದಲ್ಲಿ ಅವತರಿಸುವ ಮೂಲಕ ಈ ದೇಶದಲ್ಲಿ ಶಾಂತಿ ನೆಮ್ಮದಿ ನೆಲಗೊಳಿಸಲು ಶ್ರಮಿಸಿದ ಮೊದಲಿಗರು ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶ ನೀಡಿದ ರಂಭಾಪುರಿ ಪೀಠದ ಹಿಂದಿನ ಜಗದ್ಗುರುಗಳಾಗಿದ್ದ ಲಿಂ. ಶ್ರೀ ವೀರ ಗಂಗಾಧರ ಶಿವಾಚಾರ್ಯರ ಮೂಲ ಗುರುಗಳಾಗಿರುವ ಶ್ರೀರೇಣುಕಾಚಾರ್ಯರು ವಿಶ್ವದಲ್ಲಿ ಅವತರಿಸುವ ಮೂಲಕ ಈ ದೇಶದಲ್ಲಿ ಶಾಂತಿ ನೆಮ್ಮದಿ ನೆಲಗೊಳಿಸಲು ಶ್ರಮಿಸಿದ ಮೊದಲಿಗರು ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ತುಮಕೂರು ಜಿಲ್ಲಾ ಜಿಲ್ಲೆಯ ವೀರಶೈವ, ಲಿಂಗಾಯಿತ ಸಮಾಜದ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಧರ್ಮದ ಸಂಸ್ಥಾಪಕ ಜಗದ್ಗುರು ಶ್ರೀರೇಣುಕಾ ಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಪರಮ ಪಾವನರಾಗಿರುವ ಅಗಸ್ತ್ಯ ಮಹರ್ಷಿಗಳಿಗೆ ಶಕ್ತಿ ವಿಶಿಷ್ಠಾಧ್ವೈತವನ್ನು ಭೋಧಿಸುವ ಮೂಲಕ ಜನರಲ್ಲಿ ಸಮಾನತೆ ಹಾಗೂ ಸಾಮರಸ್ಯನ್ನು ನೆಲೆಗೊಳಿಸಿದ ರೇಣುಕರು, ಈ ನಾಡಿನಲ್ಲಿ ಶಾಂತಿ,ನೆಮ್ಮದಿ ನೆಲೆಸುವಂತೆ ಮಾಡುವಲ್ಲಿ ಬಹುವಾಗಿ ಶ್ರಮಿಸಿದರು. ಮೇಲೂ ಕೀಳೆಂಬ ಭಾವನೆ ತೊರೆದು ಲಿಂಗಪೂಜೆ ಮೂಲಕ ಮಾನವ ದೇವ ಮಾನವನಾಗುವ ಪರಿಯನ್ನು ಜಗತ್ತಿಗೆ ಸಾರಿದ ಕೀರ್ತಿ ಶ್ರೀಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲಬೇಕು ಎಂದರು.ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್‌ ಅಧ್ಯಕ್ಷರಾದ ಟಿ.ಆರ್.ಸದಾಶಿವಯ್ಯ ಮಾತನಾಡಿ,ಧರ್ಮ ಎಲ್ಲಿ ಇರುತ್ತದೆಯೋ ಅಲ್ಲಿ ಶಾಂತಿ ನೆಲಸಿರುತ್ತದೆ ಎಂಬುದು ಶ್ರೀಜಗದ್ಗುರು ರೇಣುಕಾಚಾರ್ಯರ ಪ್ರತಿಪಾದನೆಯಾಗಿತು. ಅವರ ತತ್ವ, ಸಿದ್ದಾಂತದಂತೆ ನಾವೆಲ್ಲರೂ ನಡೆದುಕೊಳ್ಳುವ ಮೂಲಕ ಮನುಷ್ಯ ಪ್ರೀತಿಯನ್ನು ಪಾಲಿಸೋಣ ಎಂದರು.

ಶಿವಶ್ರೀ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಜಿ.ಎಸ್.ಸಿದ್ದರಾಜು ಮಾತನಾಡಿ, ವೀರಶೈವ ಧರ್ಮದ ಸಂಸ್ಥಾಪಕರಾದ ಶ್ರೀಜಗದ್ಗುರು ರೇಣುಕಾಚಾರ್ಯರು, ನಮ್ಮಿಂದಲೇ ಶಾಂತಿ ಅಂದರೆ ಯಾವ ವ್ಯಕ್ತಿ ಶಿವಪೂಜೆಯಲ್ಲಿ ತನ್ನನ್ನು ತಾನು ತೊಡಗಿಸಿಗೊಂಡು ಸಂಪೂರ್ಣವಾಗಿ ದೇವರಲ್ಲಿ ಮನಸ್ಸನ್ನು ಲೀನ ಮಾಡುವ ಮೂಲಕ ಲೋಕ ಕಲ್ಯಾಣ ಬಯಸುತ್ತಾನೋ ಅವನೇ ನಿಜವಾದ ಶಾಂತಿ ಸಮನ್ವಯಕಾರ ಎಂಬ ಸಂದೇಶವನ್ನು ಸಾರಿದ್ದಾರೆ. ಹಾಗಾಗಿ ಅವರ ದಾರಿಯಲ್ಲಿ ನಾವೆಲ್ಲರೂ ಸಾಗುವ ಮೂಲಕ ಧರ್ಮವನ್ನು ಪ್ರತಿಪಾದಿಸೋಣ ಜೊತೆಗೆ ಶಾಂತಿ ನೆಲೆಸಲು ಪ್ರಯತ್ನಿಸೋಣ ಎಂದರು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಸುರೇಶಕುಮಾರ್, ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಟಿ.ಆರ್.ಸದಾಶಿವಯ್ಯ, ನಿರ್ದೇಶಕರಾದ ಓಂಕಾರಸ್ವಾಮಿ, ಜಿ.ಎಸ್.ಶ್ರೀಧರ, ಬಸವರಾಜು, ನಟರಾಜು, ವೀರಭದ್ರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಶಿವ ದುರ್ಗಾಂಭಿಕ ಅಕ್ಕನ ಬಳಗ ಜಾನಪದ ಕಲಾವಿದರ ಸಂಘ ಜಗಳೂರು, ಹರಳಯ್ಯ ಸ್ವಾಮಿ ಅಕ್ಕನ ಬಳಗ, ಜಾನಪದ ಕಲಾವಿದರ ಸಂಘದ ಓಬಳಾಪುರ ವಿಜಯನಗರ ಜಿಲ್ಲೆ, ಮಹೇಶ್ವರಿ ಜಾನಪದ ಕಲಾವಿದರ ಸಂಘ ವಿಜಯನಗರ ಜಿಲ್ಲೆ, ವಾಲ್ಮೀಕಿ ಸಂಘ ಜಗಳೂರು, ಶ್ರೀಬಸವೇಶ್ವರ ಸೋಬಾನೆ ಸಂಘ ಜಗಳೂರು ಈ ಕಲಾವಿದರುಗಳಿಂದ ಜಾನಪದ ಗೀತೆಗಳ ಗಾಯನ, ಸೋಬಾನೆ ಪದಗಳ ಗಾಯನ ನಡೆಯಿತು.

ಕೋಟ್‌....

ಪ್ರಾಚೀನ ಧರ್ಮ ಪ್ರವರ್ತಕರಲ್ಲಿ ಒಬ್ಬರಾದ ಶ್ರೀಜಗದ್ಗುರು ರೇಣುಕಾಚಾರ್ಯರು, ಶಂಕರಾಚಾರ್ಯರು, ರಾಮಾನುಜಾಚಾರ್ಯರ ರೀತಿಯಲ್ಲಿಯೇ ಶಕ್ತಿ ವಿಶಿಷ್ಟಾದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದರು. ಸಂಸ್ಥಾಪಿಸಿದ ಧರ್ಮವನ್ನು ಸಕಲ ಲೇಸುಗಳಿಗೆ ಬಳಕೆ ಮಾಡಿದ ಶ್ರೀಜಗದ್ಗುರು ರೇಣುಕಾಚಾರ್ಯರು, ವೀರಶೈವ ಧರ್ಮದ ಸಂಸ್ಥಾಪಕರು, ತದನಂತರದ ವರ್ಷದಲ್ಲಿ ಅದನ್ನು ಬಸವಣ್ಣನವರು ಶರಣಸಂಸ್ಕೃತಿ ಎಂದು ಪ್ರತಿಪಾದಿಸಿದರು. ಸಕಲ ಪ್ರಾಣಿಗಳಿಗೆ ಲೇಸು ಬಯಸುವುದೇ ನಿಜವಾದ ಧರ್ಮ ಎಂಬುದನ್ನು ನಾವೆಲ್ಲರೂ ಅರಿತು, ಅವರ ಹಾದಿಯಲ್ಲಿ ಮುನ್ನೆಡೆಯಬೇಕಾಗಿದೆ - ಕೆ.ಎಸ್.ಸಿದ್ದಲಿಂಗಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ