ಹೂಳು ತುಂಬಿದ ಚರಂಡಿ ದುರಸ್ತಿ ಮಾಡಿ: ಡಂಬಳ ಗ್ರಾಮಸ್ಥರ ಆಗ್ರಹ

KannadaprabhaNewsNetwork |  
Published : Jul 17, 2026, 02:15 AM IST
ಪೋಟೊ ಕ್ಯಾಪ್ಸನ್:ಡಂಬಳ ಗ್ರಾಮದಲ್ಲಿ ಬುಧವಾರ ಆಡಳಿತಾಧಿಕಾರಿ ಗುರುರಾಜ ಚವ್ಹಾಣ ಸಾರ್ವಜನಿಕರೊಂದಿಗೆ ಗ್ರಾಮದ ಬಹುತೇಕ ಕಡೆ ಗಟಾರನಲ್ಲಿ ಸಂಗ್ರಹವಾಗಿರುವ ಚರಂಡಿ ಪರಿಶೀಲನೆ ಮಾಡಿದರು. ಮುಖಂಡ ಗೋಣಿಬಸಪ್ಪ ಎಸ್ ಕೊರ್ಲಹಳ್ಳಿ, ಕುಬೇರಪ್ಪ ಕೊಳ್ಳಾರ  ಇದ್ದರು. | Kannada Prabha

ಸಾರಾಂಶ

ಸಾರ್ವಜನಿಕರು ಮಾತನಾಡಿ, ಗ್ರಾಮದಲ್ಲಿ ಚರಂಡಿ ನಿರ್ವಹಣೆ ಕೊರತೆಯಿದೆ. ಹೀಗಾಗಿ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಆಗುತ್ತದೆ. ಸೊಳ್ಳೆ ಕಾಟದಿಂದ ಹಲವು ರೋಗಗಳಿಗೆ ದಾರಿ ಮಾಡಿಕೊಡುವಂತಿದೆ ಎಂದರು.

ಡಂಬಳ: ಗ್ರಾಮದಲ್ಲಿ ಎರಡ್ಮೂರು ವರ್ಷಕೊಮ್ಮೆ ಸಿಬ್ಬಂದಿ ಚರಂಡಿ ಸ್ವಚ್ಛಗೊಳಿಸುತ್ತಾರೆ. ಗ್ರಾಮದ ಬಹುತೇಕ ಗಟಾರ್‌ಗಳಲ್ಲಿ ಹೂಳು ತುಂಬಿದ್ದು, ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿವೆ. ಸ್ವಚ್ಛತೆಗೆ ಏನು ಕ್ರಮ ಕೈಗೊಂಡಿದ್ದಿರಿ ಎಂದು ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.

ಗ್ರಾಮದಲ್ಲಿ ಬುಧವಾರ ಮುಖಂಡರಾದ ಗೋಣಿಬಸಪ್ಪ ಎಸ್. ಕೊರ್ಲಹಳ್ಳಿ, ಮುಖಂಡ ಕುಬೇರಪ್ಪ ಕೊಳ್ಳಾರ ನೇತೃತ್ವದಲ್ಲಿ ಸಾರ್ವಜನಿಕರೊಂದಿಗೆ ಆಡಳಿತಾಧಿಕಾರಿ ಗುರುರಾಜ ಚವ್ಹಾಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಾರ್ವತಿ ಹೊಂಬಳ ಅವರು ಗ್ರಾಮದ ಚರಂಡಿ ಪರಿಶೀಲಿಸಿದರು.

ಸಾರ್ವಜನಿಕರು ಮಾತನಾಡಿ, ಗ್ರಾಮದಲ್ಲಿ ಚರಂಡಿ ನಿರ್ವಹಣೆ ಕೊರತೆಯಿದೆ. ಹೀಗಾಗಿ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಆಗುತ್ತದೆ. ಸೊಳ್ಳೆ ಕಾಟದಿಂದ ಹಲವು ರೋಗಗಳಿಗೆ ದಾರಿ ಮಾಡಿಕೊಡುವಂತಿದೆ ಎಂದರು.

ಆಸ್ಪತ್ರೆಯಿಂದ ತೋಂಟದಾರ್ಯ ಶಿಕ್ಷಣ ಸಂಸ್ಥೆಯವರಿಗೆ ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ಇದೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ಮುಖಂಡ ಗೋಣಿಬಸಪ್ಪ ಕೊರ್ಲಹಳ್ಳಿ ಒತ್ತಾಯಿಸಿದರು.

ಹೊಸದಾಗಿ ನಿರ್ಮಾಣವಾಗಿರುವ ಎನ್‍ಎ ಬಡಾವಣೆಯಲ್ಲಿ ಸರಿಯಾಗಿ ರಸ್ತೆ ಚರಂಡಿ ನಿರ್ಮಾಣವಾಗಿಲ್ಲ. ಸಾರ್ವಜನಿಕ ಬಳಕೆಗೆ ಎಲ್ಲಿ ಜಾಗ ಮೀಸಲಿದೆ? ಕಂಪ್ಯೂಟರ್ ಉತಾರ ಯಾವ ಆಧಾರದ ಮೇಲೆ ನೀಡುತ್ತಿರಿ? ಅಧಿಕಾರಿಗಳು ಸಾರ್ವಜನಿಕರ ಉತ್ತಮ ಸೇವೆಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಅಧಿಕಾರಿಗಳಿಗೆ ಮುಖಂಡ ಕುಬೇರಪ್ಪ ಕೊಳ್ಳಾರ ತಿಳಿಸಿದರು.

ಸಾರ್ವಜನಿಕ ಅಹವಾಲು ಆಲಿಸಿದ ಆಡಳಿತಾಧಿಕಾರಿ ಗುರುರಾಜ ಚವ್ಹಾಣ ಮಾತನಾಡಿ, ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡುತ್ತೇವೆ. ಸಾರ್ವಜನಿಕರು ಜಾಗೃತೆ ಹೊಂದಬೇಕು. ಚರಂಡಿಯಲ್ಲಿ ಹೂಳು ಸಂಗ್ರಹವಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಸ್ವಚ್ಛ ಪರಿಸರ ಉತ್ತಮ ಆರೋಗ್ಯ ಎಲ್ಲರ ಕರ್ತವ್ಯವಾಗಬೇಕು. ನಮ್ಮ ಸಿಬ್ಬಂದಿಗೂ ಸೂಚನೆ ನೀಡುತ್ತೇವೆ ಎಂದು ಭರವಸೆ ನೀಡಿದರು.

ಈ ಸಮಯದಲ್ಲಿ ಬಸವರಾಜ ಕುಸಗಲ್ ಪ್ರಕಾಶ ಕೋತಂಬ್ರಿ, ಪ್ರವೀಣ ಇಡಗಲ್ಲ, ಮಂಜುನಾಥ ಹಡಪದ, ಹಾಲೇಶ ತುಂಬರಗುದ್ದಿ, ಫಕ್ಕೀರಪ್ಪ ಕರಿಗಾರ, ಬಸವರಾಜ ಕರ್ಣಿ, ನಾಗರಾಜ ಕರ್ಣಿ, ರಾಚಪ್ಪ ಗದಗಿನ, ರಜೇಕಸಾಬ್ ಆಲೂರ, ಶಿವು ಮಠದ, ಮಂಜುನಾಥ, ಸಿದ್ದಲಿಂಗೇಶ ಸ್ಥಾವರಮಠ, ಶಬ್ಬೀರ ನಮಾಜಿ, ಮಹಿಖೆಯರು ಸೇರಿದಂತೆ ಹಲವು ಯುವಕರು ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನ ನಿರ್ವಹಣೆಗೆ ಪದವಿ ಮುಖ್ಯವಲ್ಲ, ಕೌಶಲ್ಯ ಬೇಕು
ಸಾರ್ವಜನಿಕ ಸ್ಥಳಗಳಲ್ಲಿ ಕುಡಿತದ ಹಾವಳಿ: ಮಹಿಳೆಯರ ಸುರಕ್ಷತೆಗೆ ಸವಾಲು