ಸಹಕಾರ ಸಂಘ ಅಭಿವೃದ್ಧಿಗೆ ಸಾಲ ಮರುಪಾತಿಸಿ: ಚಂದ್ರಪ್ಪ

KannadaprabhaNewsNetwork |  
Published : Sep 30, 2025, 12:00 AM IST
ಹೊನ್ನಾಳಿ ಫೋಟೋ 28ಎಚ್.ಎಲ್.ಐ1. ಪಟ್ಟಣದ  ಪ್ರಾಥಮಿಕ ಕೃಷಿ ಪ್ರತ್ತಿನ ಸಹಕಾರ ಸಂಘ ನಿಯಮತಿ ಕಸಬಾ ಇದರು ವಾರ್ಷಿಕ ಸಮಾಭೆ ಹಿರೇಕಲ್ಮಠದ ಸಭಾಭವನದಲ್ಲಿ ಹಮ್ಮಿಕೊಂಡಿದ್ದು ಸಭೆಯನ್ನು ಸಂಘದ ಅಧ್ಯಕ್ಷ ಎ. ಚಂದ್ರಪ್ಪ ಅವರು ಉದ್ಘಾಟಿಸಿದರು, ಸಂಘದ ಸದಸ್ಯರುಗಳು ಇದ್ದರು.   | Kannada Prabha

ಸಾರಾಂಶ

ಸಹಕಾರ ಸಂಘಗಳು ಹೆಚ್ಚು ಅಭಿವೃದ್ಧಿ ಆಗಬೇಕೆಂದರೆ ಸಾಲಗಾರರು ಸಕಾಲದಲ್ಲಿ ಸಾಲ ಮರುಪಾತಿ ಮಾಡಬೇಕು ಎಂದು ಸಂಘದ ಅಧ್ಯಕ್ಷ ಎಂ.ಚಂದ್ರಪ್ಪ ಹೇಳಿದ್ದಾರೆ.

- ಹೊನ್ನಾಳಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವಾರ್ಷಿಕ ಮಹಾಸಭೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸಹಕಾರ ಸಂಘಗಳು ಹೆಚ್ಚು ಅಭಿವೃದ್ಧಿ ಆಗಬೇಕೆಂದರೆ ಸಾಲಗಾರರು ಸಕಾಲದಲ್ಲಿ ಸಾಲ ಮರುಪಾತಿ ಮಾಡಬೇಕು ಎಂದು ಸಂಘದ ಅಧ್ಯಕ್ಷ ಎಂ.ಚಂದ್ರಪ್ಪ ಹೇಳಿದರು.

ನಗರದ ಹಿರೇಕಲ್ಮಠದ ಜಗದ್ಗುರು ಪಂಚಾಚಾರ್ಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಕಸಬಾ ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘವು 2743 ಸದಸ್ಯರನ್ನು ಹೊಂದಿದ್ದು, ಹೊನ್ನಾಳಿ ಪಟ್ಟಣ ಸೇರಿದಂತೆ ಹೊಳೆ ಹರಳಹಳ್ಳಿ, ಹೊಸೂರು, ಬಳ್ಳೇಶ್ವರ, ಕೊನಾಯಕನಹಳ್ಳಿ, ಮಾರಿಕೊಪ್ಪ ಹಾಗೂ ಹಿರೇಮಠ ಗ್ರಾಮಗಳು ಹಾಗೂ ಬೇಚಾರ್ ಗ್ರಾಮಗಳಾದ ಅಂಜನಾಪುರ, ನರಸಿಂಹರಾಜಪುರ ಈ ಎರಡು ಗ್ರಾಮಗಳ ವ್ಯಾಪ್ತಿ ಹೊಂದಿದೆ. ಪ್ರಸ್ತಕ ಸಾಲಿನಲ್ಲಿ ₹54,134 ನಿವ್ವಳ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು.

ನಿಧನರಾದ ಸಂಘದ ಸದಸ್ಯರ ಗೌರವಾರ್ಥ ಸಭೆ ಆರಂಭದಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಿ, ಗೌರವ ಸಲ್ಲಿಸಲಾಯಿತು. ನಿರ್ದೇಶಕರಾದ ನಾಗರಾಜ್ ಕತ್ತಿಗೆ, ಹನುಮಂತಪ್ಪ ಎಚ್.ಡಿ. ಜೀನದತ್ತ ಅವರು 2024-25ನೇ ಸಾಲಿನ ಆಡಳಿತ ಮಂಡಳಿಯ ವರದಿ, ಆಡಿಟ್ ವರದಿ, 2025-26ನೇ ಸಾಲಿಗೆ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ತರಬಹುದಾದ ವಿವಿಧ ಸಾಲಗಳ ಮಿತಿ ನಿಗದಿ, ಹಾಗೂ ಜಮಾ -ಖರ್ಚುಗಳನ್ನು ಮಂಡಿಸಿ, ಅನುಮೋದನೆ ಪಡೆದರು.

ಉಪಾಧ್ಯಕ್ಷ ಈಶ್ವರ ನಾಯ್ಕ, ಸದಸ್ಯರಾದ ಜೆಸಿಬಿ ಹನುಮಂತಪ್ಪ, ಎಚ್.ಡಿ.ಜಿನದತ್ತ, ಬಿ.ಎಲ್.ಕುಮಾರ ಸ್ವಾಮಿ, ರಾಣಿ ಸುರೇಶ್, ಪುಟ್ಟರಾಜು, ಶಿವಶಂಕರಪ್ಪ, ಸರೋಜ, ಎಚ್.ಪಿ.ಪ್ರಕಾಶ್, ಎಂ.ಸುರೇಶ್ ಅಪ್ಪಿನಕಟ್ಟೆ, ನಾಗರಾಜ್ ಕತ್ತಿಗೆ, ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಬಿ.ಪಿ. ವಿಜಯಕುಮಾರ್, ಕಾರ್ಯದರ್ಶಿ ಸಿ.ರವಿ, ಸಿಬ್ಬಂದಿ ಹಾಗೂ ಸದಸ್ಯರು ಭಾಗವಹಿಸಿದ್ದರು.

- - -

-28ಎಚ್.ಎಲ್.ಐ1:

ಕಸಬಾ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ವಾರ್ಷಿಕ ಸಭೆಯನ್ನು ಅಧ್ಯಕ್ಷ ಎ.ಚಂದ್ರಪ್ಪ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ