ಹುಬ್ಬಳ್ಳಿ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಪಿಎಂಸಿ ಆವರಣದಲ್ಲಿ ಕೆಸಿಸಿಐನ 9 ಎಕರೆ ಜಾಗವಿದ್ದು, ಅದನ್ನು ಅಭಿವೃದ್ಧಿಪಡಿಸಲು ಕೋರಲಾಗುವುದು. ಅಲ್ಲದೆ, ಎಪಿಎಂಸಿ ಬಳಿ ರೈಲು ನಿಲ್ದಾಣ ನಿರ್ಮಾಣ ಮತ್ತು ಎಫ್‌ಎಂಸಿಜಿ (ತ್ವರಿತ ಬಿಕರಿ ಗ್ರಾಹಕ ಉತ್ಪನ್ನಗಳು) ಕ್ಲಸ್ಟರ್ ಆರಂಭಿಸಲು ಸಚಿವ ಎಂ.ಬಿ. ಪಾಟೀಲ ಸೇರಿದಂತೆ ಸಂಬಂಧಿಸಿದವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸಂಸ್ಥೆಯು 2026 ಅನ್ನು ಹಸಿರು ಉಪಕ್ರಮ ಎಂದು ಘೋಷಿಸಿದ್ದು, ಆರ್ಥಿಕ ಬೆಳವಣಿಗೆಯ ಜತೆಗೆ ಪರಿಸರ ಸುಸ್ಥಿರತೆಗೆ 5 ಸಾವಿರ ಸಸಿ ನೆಡಲು ಉದ್ದೇಶಿಸಲಾಗಿದೆ. ಸಂಘ-ಸಂಸ್ಥೆಗಳೊಂದಿಗೆ ಸೇರಿ ಸಸಿಗಳ ನಿರ್ವಹಣೆ ಮಾಡಲಾಗುವುದು. ಸಂಸ್ಥೆಗೆ ಭೇಟಿ ನೀಡುವವರಿಗೆ ಹಸಿರು ಪ್ರಮಾಣಪತ್ರ ನೀಡಲಾಗುವುದು ಎಂದರು.ಕೈಗಾರಿಕಾ, ವಾಣಿಜ್ಯ ಮತ್ತು ವ್ಯಾಪಾರ ಪ್ರದರ್ಶನ ಕಾರ್ಯಕ್ರಮ ಇನ್‌ಕಾಮೆಕ್ಸ್–2026 ಅನ್ನು ಏಪ್ರಿಲ್ 20ರಿಂದ 24ರ ವರೆಗೆ ಎಪಿಎಂಸಿಯ ಪ್ರದರ್ಶನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದ ಅವರು, ಕೈಗಾರಿಕಾ ಪ್ರದೇಶಗಳಲ್ಲಿ ಇ-ಸ್ವತ್ತು, ನೈರ್ಮಲ್ಯ, ನಿರ್ವಹಣೆ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು. ಸರಕು ಸಾಗಣೆ ದಕ್ಷತೆ ಹೆಚ್ಚಿಸಲು ಗದಗ, ಬಾದಾಮಿ, ಹಾವೇರಿ, ರಾಣಿಬೆನ್ನೂರು ಮತ್ತು ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿ ಯಾರ್ಡ್‌ನಲ್ಲಿ ಗೂಡ್ಸ್ ಶೆಡ್‌ಗಳ ಆಧುನೀಕರಣಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಸ್.ಜಿ. ಕಮ್ಮಾರ, ವೀರಣ್ಣ ಕಲ್ಲೂರ, ಗೌರವ ಕಾರ್ಯದರ್ಶಿ ಉದಯ್ ರೇವಣಕರ, ಜಂಟಿ ಗೌರವ ಕಾರ್ಯದರ್ಶಿ ಪ್ರಕಾಶ್ ಶೃಂಗೇರಿ ಸೇರಿದಂತೆ ಹಲವರಿದ್ದರು.