ಪತ್ರಿಕೆ 3ರಲ್ಲಿ ಇಂಗ್ಲಿಷ್‌ ಕಡ್ಡಾಯ ರದ್ದುಪಡಿಸಲು ಮನವಿ

KannadaprabhaNewsNetwork |  
Published : Jul 29, 2026, 03:00 AM IST
ಜಮಖಂಡಿ ಶಿಕ್ಷಕರ ನೇಮಕಾತಿ ಪರಿಕ್ಷೆ 3 ರಲ್ಲಿ ಇಂಗ್ಲಿಷ ಕಡ್ಡಾಯ ಮಾಡಿರುವದನ್ನು ರದ್ದಯ ಪಡಿಸುವಂತೆ ಆಗ್ರಹಿಸಿ ಉಪವಿಭಾಗಾ ಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು, | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿರಾಜ್ಯ ಸರ್ಕಾರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 15,000 ಶಿಕ್ಷಕರ ನೇಮಕಾತಿಗೆ ಚಾಲನೆ ನೀಡಿದೆ. ಸರ್ಕಾರವು 2026ರ ಕರಡು ಅಧಿಸೂಚನೆ ಪ್ರಕಟಿಸಿದ್ದು, ಅಧಿಸೂಚನೆಯಲ್ಲಿ ಪತ್ರಿಕೆ -3ರಲ್ಲಿ ಇಂಗ್ಲಿಷನಲ್ಲಿ 50 ಅಂಕಗಳಿಗೆ ವಿವರಣಾತ್ಮಕ ಉತ್ತರ ಬರೆಯುವುದು ಕಡ್ಡಾಯ ಮಾಡಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಅಧ್ಯಯನ ಮಾಡಿದ ಅಭ್ಯರ್ಥಿಗಳಿಗೆ ಆತಂಕ ಉಂಟಾಗಿದೆ. ಇದನ್ನು ರದ್ದು ಮಾಡಬೇಕೆಂದು ಕೇದಾರಪ್ಪ ರಾವಳೋಜಿ ಅವರು ಉಪ ವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ರಾಜ್ಯ ಸರ್ಕಾರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 15,000 ಶಿಕ್ಷಕರ ನೇಮಕಾತಿಗೆ ಚಾಲನೆ ನೀಡಿದೆ. ಸರ್ಕಾರವು 2026ರ ಕರಡು ಅಧಿಸೂಚನೆ ಪ್ರಕಟಿಸಿದ್ದು, ಅಧಿಸೂಚನೆಯಲ್ಲಿ ಪತ್ರಿಕೆ -3ರಲ್ಲಿ ಇಂಗ್ಲಿಷನಲ್ಲಿ 50 ಅಂಕಗಳಿಗೆ ವಿವರಣಾತ್ಮಕ ಉತ್ತರ ಬರೆಯುವುದು ಕಡ್ಡಾಯ ಮಾಡಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಅಧ್ಯಯನ ಮಾಡಿದ ಅಭ್ಯರ್ಥಿಗಳಿಗೆ ಆತಂಕ ಉಂಟಾಗಿದೆ. ಇದನ್ನು ರದ್ದು ಮಾಡಬೇಕೆಂದು ಕೇದಾರಪ್ಪ ರಾವಳೋಜಿ ಅವರು ಉಪ ವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

2026ರ ಕರಡು ಅಧಿಸೂಚನೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಗಣಕ ವಿಜ್ಞಾನ ಶಿಕ್ಷಕರು ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ನೇಮಕಾತಿಗೆ ಉದ್ದೇಶಿಸಲಾಗಿದೆ. ಅಭ್ಯರ್ಥಿಗಳ ಆಯ್ಕೆಗೆ ಒಟ್ಟು 400 ಅಂಕಗಳ 3 ಪತ್ರಿಕೆ ಬರೆಯಬೇಕು ಎಂದು ನಿಯಮ ರಚಿಸಲಾಗಿದೆ. ಆದರೆ, 3ನೇ ಪತ್ರಿಕೆಯು 100 ಅಂಕಗಳ ಭಾಷಾ ಪ್ರಾವೀಣ್ಯತೆಗೆ ಆದ್ಯತೆ ನೀಡಲಾಗಿದೆ. ಅದರಲ್ಲಿ 50 ಅಂಕಗಳ ಕನ್ನಡ ಭಾಷೆಗೆ, 50 ಅಂಕಗಳ ಇಂಗ್ಲಿಷ್ ಭಾಷೆಯಲ್ಲಿ ವಿವರಣಾತ್ಮಕ ಬರೆಯಬೇಕೆಂಬ ನಿಯಮ ರೂಪಿಸಲಾಗಿದೆ. ಇಂಗ್ಲಿಷ್‌ ಭಾಷೆಯ 50 ಅಂಕಗಳ ವಿವರಣಾತ್ಮಕ ಬರೆಯಬೇಕೆಂಬ ನಿಯಮವು ಗ್ರಾಮೀಣ ಭಾಗದ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಸರ್ಕಾರ ಕೂಡಲೇ ನಿಯಮವನ್ನು ಬದಲಾಯಿಸಿ ಪತ್ರಿಕೆ -3 ಅನ್ನು ರದ್ದು ಮಾಡಬೇಕು. ಇಲ್ಲವೇ 50 ಅಂಕಗಳ ಇಂಗ್ಲಿಷ್‌ ಬದಲಾಗಿ 100 ಅಂಕಗಳ ಕನ್ನಡ ಪರೀಕ್ಷೆಯನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.

ರಾಜಕುಮಾರ ಪಾಟೀಲ, ಭರತೇಶ ಪಾನಕ್ಕನ್ನವರ, ಗುಲಾಬ ತೇರದಾಳ, ದಲಿತ ಸೇನೆ ಅಧ್ಯಕ್ಷ ಲಿಂಗರಾಜ ಬೆಳ್ಳನವರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಕ್ಕಬಳ್ಳಾಪುರದಲ್ಲಿ ಐತಿಹಾಸಿಕ ರಕ್ತದಾನ ಶಿಬಿರ
ಹಿಪ್ಪರಗಿ ಕಾರು ಸ್ಫೋಟ ಪ್ರಕರಣ: ಐಜಿಪಿ ಭೇಟಿ