ಸಂಶೋಧನೆಯು ಸಮಾಜ, ಜನರಿಗೆ ಅಗತ್ಯ: ಎಸ್.ವಿದ್ಯಾಶಂಕರ್

KannadaprabhaNewsNetwork |  
Published : Oct 26, 2025, 02:00 AM IST
24ಕೆಎಂಎನ್ ಡಿ16 | Kannada Prabha

ಸಾರಾಂಶ

ಜಗತ್ತು 5-ಜಿ ಮತ್ತು 6-ಜಿ ಯಲ್ಲಿನ ಪ್ರಗತಿ, ಮತ್ತು 7-ಜಿ ಕುರಿತ ಸಂಶೋಧನೆಯಿಂದಾಗಿ ಸಂವಹನ ತಂತ್ರಜ್ಞಾನದಲ್ಲಿ ಕ್ರಾಂತಿಯನ್ನು ಕಾಣುತ್ತಿದೆ. ಭಾರತವು ಅತಿದೊಡ್ಡ ಎಂಜಿನಿಯರ್‌ಗಳ ಉತ್ಪಾದಕರಲ್ಲಿ ಒಂದಾಗಿದೆ. ಜೊತೆಗೆ ನಮ್ಮ ಪ್ರತಿಭೆ ಜಾಗತಿಕವಾಗಿ ಕೊಡುಗೆ ನೀಡುತ್ತಿದೆ. ಸಂಶೋಧನೆಯು ಪ್ರಕಟಣೆಗಳನ್ನು ಮೀರಿ ಬೆಳೆಯಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸಂಶೋಧನೆಯು ಸಮಾಜಕ್ಕೆ ಪ್ರಯೋಜನ ನೀಡುವ ಜೊತೆಗೆ ಸಾಮಾನ್ಯ ಜನರನ್ನು ತಲುಪಿಸಲು ಅಗತ್ಯವಾಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿದ್ಯಾಶಂಕರ್ ಹೇಳಿದರು.

ತಾಲೂಕಿನ ಲಕ್ಷ್ಮೀಪುರದ ಮೈಸೂರು ರಾಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆವರಣದಲ್ಲಿ ಆಯೋಜಿಸಿದ್ದ ಸಂವಹನ, ಗಣಕಯಂತ್ರ ಮತ್ತು ಮಾಹಿತಿ ತಂತ್ರಜ್ಞಾನ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಜಗತ್ತು 5-ಜಿ ಮತ್ತು 6-ಜಿ ಯಲ್ಲಿನ ಪ್ರಗತಿ, ಮತ್ತು 7-ಜಿ ಕುರಿತ ಸಂಶೋಧನೆಯಿಂದಾಗಿ ಸಂವಹನ ತಂತ್ರಜ್ಞಾನದಲ್ಲಿ ಕ್ರಾಂತಿಯನ್ನು ಕಾಣುತ್ತಿದೆ. ಭಾರತವು ಅತಿದೊಡ್ಡ ಎಂಜಿನಿಯರ್‌ಗಳ ಉತ್ಪಾದಕರಲ್ಲಿ ಒಂದಾಗಿದೆ. ಜೊತೆಗೆ ನಮ್ಮ ಪ್ರತಿಭೆ ಜಾಗತಿಕವಾಗಿ ಕೊಡುಗೆ ನೀಡುತ್ತಿದೆ. ಸಂಶೋಧನೆಯು ಪ್ರಕಟಣೆಗಳನ್ನು ಮೀರಿ ಬೆಳೆಯಬೇಕು. ಅದು ಜೀವನವನ್ನು, ವಿಶೇಷವಾಗಿ ಬಡವರ ಜೀವನವನ್ನು ಸುಧಾರಿಸುವ ಉತ್ಪನ್ನಗಳಾಗಿ ಪರಿವರ್ತನೆಯಾಗಬೇಕು ಎಂದರು.

ಪ್ರಾಧ್ಯಾಪಕರು ಉತ್ಪನ್ನ-ಆಧಾರಿತ ಸಂಶೋಧನೆಯತ್ತ ಗಮನ ಹರಿಸಲು ಪ್ರೋತ್ಸಾಹಿಸಲು ವಿಟಿಯು ಶೀಘ್ರದಲ್ಲೇ ಸಂಶೋಧನಾ ಪ್ರೋತ್ಸಾಹ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.

ಭಾರತವು ವಾರ್ಷಿಕ ಸುಮಾರು 20 ಲಕ್ಷ ಎಂಜಿನಿಯರ್‌ಗಳನ್ನು ಉತ್ಪಾದಿಸುತ್ತಿದೆ. ನಾಸಾದ ಶೇ.30 ರಷ್ಟು ವಿಜ್ಞಾನಿಗಳು ಭಾರತೀಯರಾಗಿದ್ದಾರೆ. ಆದರೂ ಸಂಶೋಧನಾ ಫಲಿತಾಂಶಗಳು ತಳಮಟ್ಟವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಸವಾಲಾಗಿದೆ ಎಂದರು.

ತಾಂತ್ರಿಕ ಪ್ರಗತಿಯ ಹೊರತಾಗಿಯೂ ಭಾರತದ ದೂರದ ಭಾಗಗಳು ಇನ್ನೂ ಮೂಲಭೂತ ಇಂಟರ್ ನೆಟ್ ಪ್ರವೇಶಕ್ಕಾಗಿ ಹೆಣಗಾಡುತ್ತಿವೆ ಎಂದು ಅವರು ಗಮನ ಸೆಳೆದರು. ಕೋವಿಡ್ ಸಮಯದಲ್ಲಿ ಆನ್ ಲೈನ್ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳು ಇಂಟರ್ ನೆಟ್ ಪಡೆಯಲು ಮರಗಳನ್ನು ಏರಬೇಕಾಯಿತು. ನಾವು ಅಂತಹ ಅಂತರವನ್ನು ಕಡಿಮೆ ಮಾಡುವ ತಂತ್ರಜ್ಞಾನಗಳನ್ನು ಆವಿಷ್ಕರಿಸಬೇಕು. ಇಂಟರ್ ನೆಟ್ ಇಲ್ಲದೆ ಕೆಲಸ ಮಾಡುವ ಸಂವಹನ ವ್ಯವಸ್ಥೆಗಳು ಎಂದರು.

ಈ ವೇಳೆ ಮೈಸೂರು ರಾಯಲ್ ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ನಂದಿನಿ ಎನ್. ಮೂರ್ತಿ, ಮಾಲ್ಟಾದ ಈಕ್ವಿನಾಕ್ಸ್ ಅಡ್ವೈಸರಿ ಲಿಮಿಟೆಡ್ ಹಿರಿಯ ವ್ಯಾಪಾರ ಸಲಹೆಗಾರ ಮತ್ತು ಎಂಐಐಸಿಟಿ ಯುರೋಪ್ ಅಧ್ಯಕ್ಷ ರೋಸಾನಾ ಕ್ಯಾಪುಟೊ, ಮಾಲ್ಟಾದ ಈಕ್ವಿನಾಕ್ಸ್ ಗ್ರೂಪ್ ಸಿಇಒ ಮತ್ತು ಐಆರ್‌ಐಎಸ್‌ಎಸ್ ಮಾಲ್ಟಾ ಅಧ್ಯಕ್ಷ ಬರ್ನಾರ್ಡ್ ಮಲ್ಲಿಯಾ, ಐಇಇಇ ಬೆಂಗಳೂರು ವಿಭಾಗದ ಉಪಾಧ್ಯಕ್ಷ (ಎಂ.ಡಿ.ಸಿ.) ಎನ್‌ಎಂಐಟಿ ಬೆಂಗಳೂರಿನ ಇಸಿಇ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಪರಮೇಶಾಚಾರಿ ಬಿ. ಡಿ., ಐಇಇಇ ಮೈಸೂರು ಉಪ-ವಿಭಾಗದ ಅಧ್ಯಕ್ಷ ಮತ್ತು ಎಂಐಟಿ ಮೈಸೂರಿನ ಡೀನ್ (ಸಂಶೋಧನೆ) ರವೀಚಂದ್ರ ಕುಲಕರ್ಣಿ, ಮೈಸೂರು ರಾಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಅಭಿನಂದನ್ ಕೆ.ಎಸ್., ಉಪ ಪ್ರಾಂಶುಪಾಲ ನಕುಲ್ ಎನ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನಕ್ಷರತೆ ಬಾಲ್ಯ ವಿವಾಹ ಕೇಸ್‌ ರದ್ದತಿಗೆ ಆಧಾರವಾಗದು: ಕೋರ್ಟ್‌
ಕೆಎಸ್‌ಡಿಎಲ್‌ನಿಂದ ₹400ನ ಮಲ್ಲಿಗೆ ಸೋಪ್‌!