ಮೂಲ ಸೌಕರ್ಯ ಕಲ್ಪಿಸಲು ಹಿರೇಕೆರೂರಿನ ಗುಡ್ಡಳ್ಳಿ ಪ್ಲಾಟಿನ ನಿವಾಸಿಗಳ ಮನವಿ

KannadaprabhaNewsNetwork |  
Published : Aug 05, 2025, 01:30 AM IST
ಹಿರೇಕೆರೂರಿನ ಗುಡ್ಡಳ್ಳಿ ಪ್ಲಾಟಿನ ನಿವಾಸಿಗಳು ಶಾಸಕ ಯು.ಬಿ. ಬಣಕಾರ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗುಡ್ಡಳ್ಳಿ ಪ್ಲಾಟ್ ಜನವಸತಿ ಪ್ರದೇಶದಲ್ಲಿ ಮೂಲ ಸೌಕರ್ಯಗಳಿಂದ ವಂಚಿತವಾಗಿ ನಿತ್ಯ ತೊಂದರೆ ಅನುಭವಿಸುವಂತಾಗಿದೆ. ರಸ್ತೆಗಳು ಹಾಳಾಗಿದ್ದು, ಮಳೆ ಬಂದಾಗ ರಸ್ತೆಗಳು ನೀರಿನಿಂದ ಆವೃತವಾಗಿ ನಿವಾಸಿಗಳು ಓಡಾಡದಂಥ ಪರಿಸ್ಥಿತಿ ಇದೆ.

ಹಿರೇಕೆರೂರು: ಪಟ್ಟಣದ ಗುಡ್ಡಳ್ಳಿ ಪ್ಲಾಟಿನಲ್ಲಿ ವಿವಿಧ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಅಲ್ಲಿನ ನಿವಾಸಿಗಳು ಶಾಸಕ ಯು.ಬಿ. ಬಣಕಾರ ಅವರಿಗೆ ಮನವಿ ಸಲ್ಲಿಸಿದರು.ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗುಡ್ಡಳ್ಳಿ ಪ್ಲಾಟ್ ಜನವಸತಿ ಪ್ರದೇಶದಲ್ಲಿ ಮೂಲ ಸೌಕರ್ಯಗಳಿಂದ ವಂಚಿತವಾಗಿ ನಿತ್ಯ ತೊಂದರೆ ಅನುಭವಿಸುವಂತಾಗಿದೆ. ರಸ್ತೆಗಳು ಹಾಳಾಗಿದ್ದು, ಮಳೆ ಬಂದಾಗ ರಸ್ತೆಗಳು ನೀರಿನಿಂದ ಆವೃತವಾಗಿ ನಿವಾಸಿಗಳು ಓಡಾಡದಂಥ ಪರಿಸ್ಥಿತಿ ಇದೆ.

ಚರಂಡಿಗಳು ಮುಚ್ಚಿರುವುದರಿಂದ ನೀರು ಸರಾಗವಾಗಿ ಹರಿಯದೇ ಅಲ್ಲಲ್ಲಿ ನಿಂತು ಸೊಳ್ಳೆಗಳ ಕಾಟ ಅಧಿಕವಾಗಿದೆ. ಬೀದಿದೀಪಗಳು ಸರಿಯಾಗಿ ಮಿನುಗುತ್ತಿಲ್ಲ. ಒಳಚರಂಡಿ ವ್ಯವಸ್ಥೆಯಿಲ್ಲ. ಇಲ್ಲಿನ ಉದ್ಯಾನವನದ ಸರಿಯಾದ ನಿರ್ವಹಣೆ ಇಲ್ಲದೇ ವಾಯುವಿಹಾರಿಗಳಿಗೆ ತೊಂದರೆಯಾಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು.ಮನವಿ ಸ್ವೀಕರಿಸಿದ ಶಾಸಕ ಯು.ಬಿ. ಬಣಕಾರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅಶೋಕ ಗೊಲ್ಲರ, ಆರ್.ಕೆ. ಲಮಾಣಿ, ಪವನ ಜೆ.ಎಸ್., ತೀರ್ಥನಾಯ್ಕ ಸೇರಿ ಅಲ್ಲಿನ ನಿವಾಸಿಗಳು ಇದ್ದರು.

ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಮೋಸ

ಹಾವೇರಿ: ಅಪರಿಚಿತ ವ್ಯಕ್ತಿ ಟೆಲಿಗ್ರಾಂನಲ್ಲಿ ಲಿಂಕ್‌ವೊಂದನ್ನು ಕಳಿಸಿ ಹಣವನ್ನು ಇನ್ವೆಸ್ಟ್ ಮಾಡಿದರೆ ಲಾಭಾಂಶ ಕೊಡುವುದಾಗಿ ಹೇಳಿ ನಂಬಿಸಿ ಸುಮಾರು ₹2.32 ಲಕ್ಷ ವರ್ಗಾವಣೆ ಮಾಡಿಸಿಕೊಂಡು ವಿದ್ಯಾರ್ಥಿನಿಗೆ ಮೋಸ ಎಸಗಿದ ಘಟನೆ ನಡೆದಿದೆ.

ಹಾನಗಲ್ಲ ತಾಲೂಕಿನ ನಿಸ್ಸೀಮ ಆಲದಕಟ್ಟಿಯ ಬಸವರಾಜ ಗೌಡಗೇರಿ ಎಂಬವರ ಮಗಳೆ ಮೋಸ ಹೋದ ವಿದ್ಯಾರ್ಥಿನಿ. ಅಪರಿಚಿತ ವ್ಯಕ್ತಿಗಳು ಲಿಂಕ್ ಹಾಗೂ ಸ್ಕ್ಯಾನರ್‌ನ್ನು ಕಳುಹಿಸಿದ್ದಾರೆ. ಆರಂಭದಲ್ಲಿ ಸ್ವಲ್ಪ ಹಣವನ್ನು ಹಿಂದುರುಗಿಸಿ ಬಳಿಕ ನಂಬಿಕೆ ಬರುವಂತೆ ಮಾಡಿ ವಿವಿಧ ಅಕೌಂಟ್‌ಗಳಿಂದ ₹2,32,894 ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಿದೆ. ಹಾವೇರಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ