- ಉಕ್ಕಡಗಾತ್ರಿಯಲ್ಲಿ ಕಟ್ಟಡಗಳ ಲೋಕಾರ್ಪಣೆ, ಧಾರ್ಮಿಕ ಸಮಾರಂಭದಲ್ಲಿ ಜ್ಞಾನಪ್ರಭು ಸಿದ್ಧರಾಮ ಶ್ರೀ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಇಲ್ಲಿಗೆ ಸಮೀಪದ ಸುಕ್ಷೇತ್ರ ಉಕ್ಕಡಗಾತ್ರಿ ಗ್ರಾಮದಲ್ಲಿ ಶುಕ್ರವಾರ ವಿವಿಧ ನೂತನ ಕಟ್ಟಡಗಳ ಲೋಕಾರ್ಪಣೆ ಮತ್ತು ಸರ್ವಧರ್ಮ ಸಾಮೂಹಿಕ ವಿವಾಹ, ನವಜೋಡಿಗಳಿಗೆ ಹೊಲಿಗೆ ಯಂತ್ರ ವಿತರಣೆ, ಆದಿಯೋಗಿ ಶಿವ ಶಿಲಾಮೂರ್ತಿ ಉದ್ಘಾಟನೆ, ಕೃಷಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಫಲಕ ಅನಾವರಣ ಮತ್ತು ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಅವರು ಸಂದೇಶ ನೀಡಿದರು.
ಕೊಳಗುಂದ ಕೇದಿಗೆ ಮಠಾಧ್ಯಕ್ಷ ಜಯಚಂದ್ರಶೇಖರ ಮಹಾಸ್ವಾಮೀಜಿ ಮಾತನಾಡಿ, ಭರತ ಖಂಡದಲ್ಲಿ ಗುರುವಿಗೆ ಅಪಾರ ಸ್ಥಾನವಿದೆ. ಭಕ್ತರು ಧರ್ಮಿಕ ತಳಹದಿ ಮೇಲೆ ತಂದೆ ತಾಯಿ ದೇವರು ಎಂಬ ಭಾವನೆಯಿಂದ ಜೀವನ ಸಾಗಿಸಿದಲ್ಲಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯವಿದೆ. ನಂದಿಗುಡಿ ಪೀಠದ ಸ್ವಾಮೀಜಿ ಇಂತಹ ಉತ್ತಮ ಸಮಾರಂಭದಲ್ಲಿ ಹಾಜರಾಗಿ ಎಲ್ಲರನ್ನು ಪ್ರೀತಿಯಿಂದ ಸ್ವಾಗತಿಸದೆ ಗೈರಾಗಿರುವುದು ಬೇಸರ ತಂದಿದೆ ಎಂದರು.ಲಿಂಗದಹಳ್ಳಿ ಮಠದ ವೀರಭದ್ರ ಮಹಾಸ್ವಾಮೀಜಿ ಅವರು, ಕರಿಬಸವೇಶ್ವರ ಗದ್ದಿಗೆ ಟ್ರಸ್ಟ್ ಪದಾಧಿಕಾರಿಗಳು ಪ್ರಾಮಾಣಿಕತೆಯಿಂದ ಕಂಕಣತೊಟ್ಟು ಧಾರ್ಮಿಕ ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಸ್ಥಳವನ್ನೇ ಧರ್ಮಸ್ಥಳವಾಗಿಸಿದ್ದಾರೆ. ಮಾನವರು ದೇವರಾಗುವ ಇಚ್ಛೆಯನ್ನು ಭಕ್ತರಲ್ಲಿ ಮೂಡಿಸಿದ್ದಾರೆ ಎಂದರು.
ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಉಕ್ಕಡಗಾತ್ರಿ ಗ್ರಾಮವು ಪಾಪಮುಕ್ತ ಕ್ಷೇತ್ರವಾಗಿದೆ. ಭಕ್ತರು ಜೀವನದಲ್ಲಿ ಮನಸ್ಸಿನ ಮೈಲಿಗೆ ಬಿಟ್ಟು ಉತ್ತಮ ಮಾರ್ಗದಲ್ಲಿ ಸಾಗಿದಾಗ ಪವಿತ್ರ ಕ್ಷೇತ್ರವಾಗಲು ಪೂರಕವಾಗುತ್ತದೆ. ಭಕ್ತರು ತ್ರಿಕಾಲ ಇಷ್ಟ ಲಿಂಗಪೂಜೆ ನೆರವೇರಿಸಿ, ಕಾಯಕ, ದಾಸೋಹ, ಲಿಂಗಪೂಜೆ, ಭಕ್ತಿ, ಪ್ರೀತಿ, ಶಕ್ತಿವಂತರಾಗಿ ಬಾಳಲು ಸಲಹೆ ನೀಡಿದರು.
ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಹಳೇಬೀಡಿನ ಪುಷ್ಪಗಿರಿ ಮಹಾಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಗವಿಮಠದ ಚಂದ್ರಶೇಖರ ಸ್ವಾಮೀಜಿ, ಯಲವಟ್ಟಿಯ ಗುರುಸಿದ್ದಾಶ್ರಮದ ಯೋಗಾನಂದ ಸ್ವಾಮೀಜಿ, ಕರಡಿ ಗವಿಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ, ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಸಾಯಿನಾಥ ಗುರುಗಳು, ಮಡಿವಾಳ ಪೀಠದ ಮಡಿವಾಳ ಮಾಚಿದೇವ ಸ್ವಾಮೀಜಿ ಮಾತನಾಡಿದರು.
೨೦ ನವಜೋಡಿಗಳು ದಾಂಪತ್ಯಕ್ಕೆ ಹೆಜ್ಜೆಯರಿಸಿದರು. ನವದಂಪತಿಗಳಿಗೆ ಹೊಲಿಗೆ ಯಂತ್ರ, ಬಟ್ಟೆ, ತಾಳಿ ಮತ್ತು ಕಾಲುಂಗುರ, ಅಜ್ಜಯ್ಯನ ನೆನಪಿನ ಕಾಣಿಕೆ ವಿತರಿಸಲಾಯಿತು.
- - -
- - - -ಚಿತ್ರ೧: