ಬೇರೆ ಭಾಷೆ ಗೌರವಿಸಿ, ಕನ್ನಡ ಹೆಚ್ಚು ಪ್ರೀತಿಸಿ

KannadaprabhaNewsNetwork |  
Published : Jul 21, 2024, 01:22 AM IST
ಮಹಾಲಿಂಗಪುರ  | Kannada Prabha

ಸಾರಾಂಶ

ವಿದ್ಯಾರ್ಥಿಗಳು ಎಲ್ಲ ಭಾಷೆಗಳನ್ನು ಗೌರವಿಸಬೇಕು. ಆದರೆ ಕನ್ನಡ ಭಾಷೆಯನ್ನು ಹೆಚ್ಚು ಪ್ರೀತಿಸಬೇಕು ಎಂದು ಎಸ್.ಟಿ.ಸಿ ಕಾಲೇಜ ಬನಹಟ್ಟಿಯ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಮ್.ಎನ್.ಬೆನ್ನೂರ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ವಿದ್ಯಾರ್ಥಿಗಳು ಎಲ್ಲ ಭಾಷೆಗಳನ್ನು ಗೌರವಿಸಬೇಕು. ಆದರೆ ಕನ್ನಡ ಭಾಷೆಯನ್ನು ಹೆಚ್ಚು ಪ್ರೀತಿಸಬೇಕು ಎಂದು ಎಸ್.ಟಿ.ಸಿ ಕಾಲೇಜ ಬನಹಟ್ಟಿಯ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಮ್.ಎನ್.ಬೆನ್ನೂರ ಹೇಳಿದರು.

ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಎಸ್.ಸಿ.ಪಿ ಕಲಾ, ವಿಜ್ಞಾನ ಮತ್ತು ಡಿ.ಡಿ ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್‌ ವಿಭಾಗದ ವತಿಯಿಂದ ಆರ್ಟಿಪಿಸಿಯಲ್ ಇಂಟಲಿಜೆನ್ಸ್‌ ಇನ್ ಇಂಗ್ಲಿಷ್‌ ಲ್ಯಾಂಗ್ವೇಜ್‌ ಟೀಚಿಂಗ್ ಆಂಡ್ ಲರ್ನಿಂಗ್ ಹಾಗೂ ಇತಿಹಾಸ ವಿಭಾಗದಿಂದ ಕರ್ನಾಟಕ ಏಕೀಕರಣ ಚಳವಳಿ ವಿಷಯದ ಕುರಿತು ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಇರುವವರು ಕಡ್ಡಾಯವಾಗಿ ಕನ್ನಡವನ್ನೇ ಬಳಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದರೂ ಕೆಲವರು ಬರೀ ತಮ್ಮ ಪ್ರತಿಷ್ಠೆಗಾಗಿ ಅನ್ಯ ಭಾಷೆಗಳನ್ನು ಮಾತನಾಡುತ್ತಿರುವುದು ಖೇದಕರ ಸಂಗತಿ. ನಮ್ಮ ಭಾಷೆಯನ್ನು ನಾವು ಗೌರವಿಸದಿದ್ದರೆ ಅದಕ್ಕೆ ಉಳಿಗಾಲವಿಲ್ಲ. ಕಾರಣ ಕನ್ನಡಿಗರಾದ ನಾವು ನಮ್ಮ ಭಾಷೆಯಲ್ಲೇ ಮಾತನಾಡುವ ಮೂಲಕ ಕನ್ನಡ ಉಳಿಸಿ ಬೆಳೆಸುವ ಹೊಣೆ ನಮ್ಮೇಲ್ಲರದ್ದಾಗಿದೆ ಎಂದರು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಎಸ್.ವಿ.ಎಮ್. ಕಾಲೇಜ ಇಳಕಲ್ಲ ಇಂಗ್ಲಿಷ್‌ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್.ಬಿ.ಬಿರಾದಾರ, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎಮ್.ಅವರಾದಿ ಮಾತನಾಡಿದರು.

ಇಂಗ್ಲಿಷ್‌ ವಿಭಾಗ ಎ.ಆಯ್ ಇನ್ ಇಂಗ್ಲಿಷ್‌ ಟೀಚಿಂಗ್ ಆಂಡ್ ಲರ್ನಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಎಸ್.ಎನ್.ಜಿ.ಪಿ ಎಸ್.ಎನ್.ಎಮ್.ಎಸ್ ಪದವಿ ಕಾಲೇಜ ನಿಡಸೋಸಿ ಕಾಲೇಜಿನ ವಿದ್ಯಾರ್ಥಿನಿ ಖುಷಿ ಬೋಸಲೆ, ದ್ವಿತೀಯ ಡಾ.ಸಿ.ಬಿ ಕುಲಗೂಡ, ಮುಗಳಖೋಡ ಕಾಲೇಜಿನ ವಿದ್ಯಾರ್ಥಿನಿ ಸೃಷ್ಟಿ ಗಾಣಗೇರ ಹಾಗೂ ತೃತಿಯ ಸ್ಥಾನವನ್ನು ಜೆ.ಎಸ್.ಎಸ್.ಬನಶಂಕರಿ ಕಾಲೇಜಿನ ವಿದ್ಯಾರ್ಥಿ ಕೀರ್ತನಾ ದೊಡ್ಡಮನಿ ಪಡೆದುಕೊಂಡರು.

ಇತಿಹಾಸ ವಿಭಾಗ ಕರ್ನಾಟಕ ಏಕೀಕರಣ ಚಳವಳಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಕಮಲಾ ಬಳಿಗಾ ಕಾಲೇಜ ಆಪ್ ಎಜುಕೇಶನ್ ಕುಮಟಾ ಕಾಲೇಜಿನ ವಿದ್ಯಾರ್ಥಿ ಮಹೇಶ ಶಿವಾಜಿ ಕಲ್ಯಾಣಕರ, ದ್ವಿತೀಯ ಜಿ.ಎಪ್.ಜಿ.ಸಿ ಕಾಲೇಜ ಜಮಖಂಡಿ ಕಾಲೇಜಿನ ವಿದ್ಯಾರ್ಥಿ ಭಾಗೀರಥಿ ಅಲುಗೂರ ಹಾಗೂ ತೃತೀಯ ಬಿ.ಎಲ್.ಡಿ.ಇ ಕಾಲೇಜ ಜಮಖಂಡಿ ಕಾಲೇಜಿನ ವಿದ್ಯಾರ್ಥಿನಿ ಪ್ರೀತಿಕಾ ಮಂಜರಗಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಸ್ಥಳೀಯ ಆಡಳಿತ ಮಂಡಳಿ ಸದಸ್ಯರಾದ ಅಶೋಕ.ಬಿ.ಅಂಗಡಿ, ಸಂತೋಷ ಹುದ್ದಾರ, ಐಕ್ಯೂಎಸಿ ಸಂಯೋಜಕರಾದ ಡಾ.ಎಸ್.ಡಿ.ಸೊರಗಾಂವಿ, ಇಂಗ್ಲಿಷ್‌ ವಿಭಾಗ ಮುಖ್ಯಸ್ಥ ವಿ.ಎ.ಅಡಹಳ್ಳಿ, ಇತಿಹಾಸ ವಿಭಾಗ ಮುಖ್ಯಸ್ಥ ಟಿ.ಡಿ.ಡಂಗಿ, ಸಿ.ಎಮ್.ಐಗಳಿ, ಎ.ಎಮ್.ಉಗಾರೆ, ಪಿ.ಎಸ್.ಹಿಪ್ಪರಗಿ, ಎಸ್.ಸಿ.ಬಿಜ್ಜರಗಿ, ಎಸ್.ಎಸ್.ಮುಗಳ್ಯಾಳ, ಬಿ.ಎನ್.ಹಂದಿಗುಂದ, ಆರ್.ಕೆ.ಕಲ್ಲೋಳಿ ಇತರ ಸಿಬ್ಬಂದಿ ವರ್ಗದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು