ಪ್ರಾಮಾಣಿಕವಾಗಿ ಸೇವೆಯಿಂದ ಗೌರವ

KannadaprabhaNewsNetwork | Published : Jul 2, 2025 11:52 PM
ಮುಂಡಗೋಡ: ಆಯುಷ್ ಇಲಾಖೆ ಹಾಗೂ ಮುಡಗೋಡ ವೈದ್ಯರ ಸಂಘದಿಂದ ಇಲ್ಲಿಯ ಆಯುರ್ವೇದ ಆಸ್ಪತ್ರೆಯ ಯೋಗ ಭವನದಲ್ಲಿ ಮಂಗಳವಾರ ರಾತ್ರಿ ವೈದ್ಯರ ದಿನಾಚರಣೆ ಹಾಗೂ  ಸಾದಕ ವೈದ್ಯರಿಗೆ ಸನ್ಮಾನ ಸಮಾರಂಭ ನಡೆಯಿತು | Kannada Prabha

ಸಾರಾಂಶ

ಪ್ರಾಮಾಣಿಕವಾಗಿ ವೈದ್ಯಕೀಯ ಸೇವೆ ಸಲ್ಲಿಸಿದರೆ ಗೌರವ ಹಾಗೂ ಹಣ ಎರಡೂ ತಾನಾಗಿಯೇ ಬರುತ್ತದೆ

ಮುಂಡಗೋಡ: ಜೀವನದಲ್ಲಿ ಎಷ್ಟೇ ಏರಿಳಿತ ಬರಬಹುದು. ಪ್ರಾಮಾಣಿಕವಾಗಿ ವೈದ್ಯಕೀಯ ಸೇವೆ ಸಲ್ಲಿಸಿದರೆ ಗೌರವ ಹಾಗೂ ಹಣ ಎರಡೂ ತಾನಾಗಿಯೇ ಬರುತ್ತದೆ ಎಂದು ಹಿರಿಯ ವೈದ್ಯ ಸುರೇಶ ದೇಸಾಯಿ ಹೇಳಿದರು.

ಆಯುಷ್ ಇಲಾಖೆ ಹಾಗೂ ಮುಂಡಗೋಡ ವೈದ್ಯರ ಸಂಘದಿಂದ ಇಲ್ಲಿಯ ಆಯುರ್ವೇದ ಆಸ್ಪತ್ರೆಯ ಯೋಗ ಭವನದಲ್ಲಿ ಮಂಗಳವಾರ ರಾತ್ರಿ ವೈದ್ಯರ ದಿನಾಚರಣೆ ಹಾಗೂ ಸಾಧಕ ವೈದ್ಯರಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವೈದ್ಯಕೀಯ ವೃತ್ತಿ ಜನರ ಸೇವೆ ಮಾಡಲು ಸಿಕ್ಕ ಅವಕಾಶ. ಶ್ರದ್ಧೆ ಮತ್ತು ಆಸಕ್ತಿಯಿಂದ ಸೇವೆ ನೀಡಿದರೆ ನಮ್ಮ ನಿವೃತ್ತ ಕಾಲದಲ್ಲಿ ಹಣ ತಾನಾಗಿಯೇ ಬರುತ್ತದೆ. ಹಾಗಾಗಿ ಹಣದ ಹಿಂದೆ ಯಾರು ಕೂಡ ಹೋಗದೆ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಸುಮಾರು ೨೫ ವರ್ಷಗಳ ಕಾಲ ಇಲ್ಲಿಯ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾಗಿರುವ ಡಾ.ಸಂಜೀವ ಗಲಗಲಿ ದಂಪತಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು. ವೈದ್ಯಾಧಿಕಾರಿ ಸಂಜೀವ ಗಲಗಲಿ ಸನ್ಮಾನ ಸ್ವೀಕರಿಸಿ ಒತ್ತಡ ನಿರ್ವಹಣೆ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡಿದರು.

ಡಾ.ಎಂ.ಸಿ.ಜಂಬಗಿ, ಡಾ.ಗಾಯತ್ರಿ ಹೆಗಡೆ, ಡಾ.ಭರತ ತಂತ್ರಿ ಮುಂತಾದವರು ಉಪಸ್ಥಿತರಿದ್ದರು. ಸಂಜೀವ ಗಲಗಲಿ ಪ್ರಾರ್ಥಿಸಿದರು. ಡಾ. ಭರತ ತಂತ್ರಿ ಸ್ವಾಗತಿಸಿದರು. ಡಾ. ಲಕ್ಷ್ಮೀ ಬಡಿಗೇರ ನಿರೂಪಿಸಿದರು. ನವೀನ ಬಡಿಗೇರ ಅತಿಥಿಗಳನ್ನು ಪರಿಚಯಿಸಿದರು. ಡಾ.ಪಿ. ಪಿ.ಛಬ್ಬಿ ವಂದಿಸಿದರು. ಡಾ. ಕಿರಣ ಹುಲಗೂರ ಹಾಗೂ ಸಂಗಡಿಗರಿಂದ ಕರೋಕೆ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಪತ್ರಕರ್ತ ಸಂತೋಷ ದೈವಜ್ಞ, ರಾಜಶೇಖರ ನಾಯ್ಕ ಹಾಗೂ ನಜೀರ್ ತಾಡಪತ್ರಿಯವರನ್ನು ಸನ್ಮಾನಿಸಲಾಯಿತು.

ಆಯುರ್ವೇದ ಆಸ್ಪತ್ರೆಯ ಯೋಗ ಭವನದಲ್ಲಿ ಮಂಗಳವಾರ ರಾತ್ರಿ ವೈದ್ಯರ ದಿನಾಚರಣೆ ಹಾಗೂ ಸಾಧಕ ವೈದ್ಯರಿಗೆ ಸನ್ಮಾನ ಸಮಾರಂಭ ನಡೆಯಿತು.

PREV