ಸಾರ್ವಜನಿಕರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ: ಶಾಸಕ ಕೃಷ್ಣಮೂರ್ತಿ

KannadaprabhaNewsNetwork |  
Published : Sep 13, 2026, 01:45 AM IST
ಸರ್ಕಾರ | Kannada Prabha

ಸಾರಾಂಶ

ಸಾರ್ವಜನಿಕರನ್ನು ಕಚೇರಿಗೆ ಅಲೆಸದೇ ಶೀಘ್ರವಾಗಿ ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು, ಇಂದಿನ ದೂರಿಗೆ ಅಗತ್ಯ ಕ್ರಮವಹಿಸಬೇಕು, ಅಧಿಕಾರಿಗಳು ಸರ್ಕಾರಿ ಜಾಗ ಉಳಿಸುವ ನಿಟ್ಟಿನಲ್ಲಿ ಹಾಗೂ ಸಾವ೯ಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಶೀಲಿಸಿ ಕ್ರಮವಿವಹಿಸಬೇಕು, ಆಮೂಲಕ ಸಕಾ೯ರದ ಈ ಆಂದೋಲನ ಯಶಸ್ವಿಗೆ ಸಹಕರಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಸಾರ್ವಜನಿಕರನ್ನು ಕಚೇರಿಗೆ ಅಲೆಸದೇ ಶೀಘ್ರವಾಗಿ ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು, ಇಂದಿನ ದೂರಿಗೆ ಅಗತ್ಯ ಕ್ರಮವಹಿಸಬೇಕು, ಅಧಿಕಾರಿಗಳು ಸರ್ಕಾರಿ ಜಾಗ ಉಳಿಸುವ ನಿಟ್ಟಿನಲ್ಲಿ ಹಾಗೂ ಸಾವ೯ಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಶೀಲಿಸಿ ಕ್ರಮವಿವಹಿಸಬೇಕು, ಆಮೂಲಕ ಸಕಾ೯ರದ ಈ ಆಂದೋಲನ ಯಶಸ್ವಿಗೆ ಸಹಕರಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಾರ್ವಜನಿಕರ ಸಮಸ್ಯೆ ಆಲಿಸಿ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು. ಇನ್ನೂ ಕೆಲ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮುಳ್ಳೂರು ಗ್ರಾಮದ ಮಂಗಳ ಮಾತನಾಡಿ, ನಮಗೆ ವಾಸಿಸಲು ನಿವೇಶನವಿಲ್ಲ. ಮನೆಯೂ ಇಲ್ಲ ಎಂದು ಶಾಸಕರ ಮುಂದೆ ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಎ.ಆರ್.ಕೃಷ್ಣಮೂರ್ತಿ, ರಾಜ್ಯದಲ್ಲಿ ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಂದಾಗಿದ್ದು ಮುಂದಿನ ದಿನಗಳಲ್ಲಿ ನಿವೇಶನ ಕೊಡಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಸಾಮಾಜಿಕ ಕಾರ್ಯಕರ್ತ ಪಾಳ್ಯ ರಂಗಸ್ವಾಮಿ ಮಾತನಾಡಿ, ಪಾಳ್ಯ ಗ್ರಾಮದ ಸರ್ವೆ ನಂಬರ್ 666/2ರಲ್ಲಿ ಆಶ್ರಯ ಬಡಾವಣೆಗೆ ಸರ್ಕಾರದಿಂದ ಸ್ಥಳ ನಿಗದಿಯಾಗಿದ್ದು, ನಿವೇಶನಗಳ ನಡುವೆ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೆ ಸೆಸ್ಕ್ ಇಲಾಖೆ ನಿರ್ಲಕ್ಷ್ಯಮಾಡಿದ್ದಾರೆಂದು ದೂರಿದ ಹಿನ್ನೆಲೆ .ಕೂಡಲೇ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.ಒಕ್ಕಲಿಗರ ಸಂಘದ ಅಧ್ಯಕ್ಷರು ಮಾತನಾಡಿ, ಕೊಳ್ಳೇಗಾಲ ಪಟ್ಟಣದಲ್ಲಿ ಇನ್ನೂರಕ್ಕೂ ಅಧಿಕ ಒಕ್ಕಲಿಗ ಕುಟುಂಬಗಳು ವಾಸಿಸುತ್ತಿದ್ದು, ಜನಾಂಗಕ್ಕೆ ಸ್ಮಶಾನಕ್ಕೆ ಜಾಗ ಕೊಡಿಸುವಂತೆ ಮನವಿ ಮಾಡಿದರು.ತಹಸಿಲ್ದಾರ್ ಬಸವರಾಜು ಪ್ರತಿಕ್ರಿಯಿಸಿ, ಬಸ್ತಿಪುರದಿಂದ ಕುಣಗಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ತಾತ್ಕಾಲಿಕವಾಗಿ ಸ್ಥಳ ನಿಗದಿಪಡಿಸಲಾಗಿದೆ. ಈ ಮಧ್ಯೆ ಅಲ್ಲಿನ ಬಡಾವಣೆಯ ನಿವಾಸಿಗಳಿಂದ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದ್ದು ಈ ಸಂಬಂಧ ಕ್ರಮವಹಿಸಲಾಗುವುದು ಎಂದರು.

ಸವಿತಾ ಎಂಬುವರು ಸಾಮಾಜಿಕ ಬಹಿಷ್ಕಾರ ಹಾಕಿರುವ ಕುರಿತು ಸಭೆಯ ಗಮನಕ್ಕೆ ತಂದ ಹಿನ್ನೆಲೆ ಶಾಸಕರು ಅಧಿಕಾರಿಗಳಿಗೆ ತಕ್ಷಣ ಪರಿಹಾರಕ್ಕೆ ಸೂಚಿಸಿದರು

ಅಣಗಳ್ಳಿ ದಶರಥ್‌ರಿಂದ ಕೆರೆ ಅತಿಕ್ರಮಣ, ಸರ್ಕಾರಿ ಜಾಗ ಕಬಳಿಕೆ ಸಂಬಂಧ ಲಿಖಿತ ದೂರು:

ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಬಳಿ ಸರ್ಕಾರ ಎಂಬ ನಿಟ್ಟಿನಲ್ಲಿ ಅಯೋಜಿಸಲಾಗಿರುವ ಹೋಬಳಿ ಮೊಟ್ಟದಲ್ಲಿ ಸಾರ್ವಜನಿಕರಿಂದ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಅಣಗಳ್ಳಿ ದಶರಥ್ ಕೆರೆ ಅತಿಕ್ರಮಣ, ಸರ್ಕಾರಿ ಆಸ್ತಿ ಒತ್ತುವರಿಕುರಿತು ದಾಖಲೆ ಸಲ್ಲಿಸುವ ಮೂಲಕ ಸರ್ಕಾರಿ ಆಸ್ತಿ ಒತ್ತುವರಿ ಮಾಡಿಕೊಂಡವರ ವಿರುದ್ದ 9 ಲಿಖಿತ ದೂರು ದಾಖಲಿಸುವ ಮೂಲಕ ಗಮನ ಸೆಳೆದರು.

ಪ್ರಜಾಸೇವೆ ಸಭೆಯಲ್ಲಿ ಅಣಗಳ್ಳಿ ದಶರಥ್ ಜಿಲ್ಲೆ, ನಮ್ಮ ತಾಲೂಕಿನ ಕೆರೆಗಳನ್ನು ನಮ್ಮ ಜಿಲ್ಲೆಯಲ್ಲಿಯೇ ಉಳಿಸಿ ಈಗಾಗಲೇ ಕುಂತೂರು, ತೇರಂಬಳ್ಳಿ ಕೆರೆ ಸೇರಿದಂತೆ ಹಲವು ಕೆರೆಗಳನ್ನು ಮೈಸೂರು ಜಿಲ್ಲೆಯ ವಿಭಾಗೀಯ ಮಟ್ಟಕ್ಕೆ ಸೇರಿಸಲಾಗಿದೆ. ಇವುಗಳೆಲ್ಲವೂ ಇಲ್ಲಿ ಉಳಿಯವಂತಾಗಬೇಕು, ಐದು ಸಾವಿರದ ನೂರು ಎಕರೆ ಕೆರೆಗಳಿಗೆ ನೀರು ತುಂಬಿಸುವಲ್ಲಿ ಮುಂದಾಗಬೇಕು, ಅದೇ ರೀತಿಯಲ್ಲಿ ಆ ವ್ಯಾಪ್ತಿಯ ಕೆರೆಗಳನ್ನು ಅತಿಕ್ರಮ ತೆರವುಗೊಳಿಸಬೇಕು, ಕೊಳ್ಳೇಗಾಲ ಪಟ್ಟಣದ ಖಾಸಗಿ ಸಂಸ್ಥೆಯೊಂದು ಸರ್ವೆ ನಂಬರ್ 706ರಲ್ಲಿ 80ಸೆಂಟ್ ಸ್ಮಶಾನ ಎಂದಿರುವ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದು ತೆರವು ಮಾಡಬೇಕು ಎಂದು ಲಿಖಿತ ದೂರು ಸಲ್ಲಿಸಿದರು

ತಹಸೀಲ್ದಾರ್ ಬಸವರಾಜು, ತಾಪಂ ಇಒ ಕುಮಾರ್, ವೃತ್ತ ನಿರೀಕ್ಷಕ ರವೀಂದ್ರ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿ ನಂಬಿ ಬದುಕುತ್ತಿರುವ ರೈತರಿಗೆ ನ್ಯಾಯ ಒದಗಿಸಿ: ರಮೇಶ್‌ ಬಂಡಿಸಿದ್ದೇಗೌಡ
ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಸಮಸ್ಯೆ ಹೊತ್ತು ನನ್ನ ಬಳಿ ಬರುತ್ತಿದ್ದಾರೆ: ಎಚ್‌.ಟಿ.ಮಂಜು