ಶ್ರೀ ಉರಿಗಣ್ಣೇಶ್ವರಿ ದೇವಾಲಯಗಳ ಜೀರ್ಣೋದ್ಧಾರ ಕಾರ್ಯಕ್ರಮ

KannadaprabhaNewsNetwork |  
Published : Feb 26, 2025, 01:07 AM IST
25ಕೆಎಂಎನ್ ಡಿ28,29 | Kannada Prabha

ಸಾರಾಂಶ

ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮಿಯ ಪೂಜಾ ಉತ್ಸವ ಕಾರ್ಯಕ್ರಮ ಜರುಗಿತು. ಹೆಸರಾಂತ ತಮಟೆ ಕಲಾವಿದ ಕುಂತೂರು ಕುಮಾರ್ ಮತ್ತು ತಂಡದವರಿಂದ ತಮಟೆ- ನಗಾರಿಗಳ ಕಲರವ ಭಕ್ತರನ್ನು ರಂಜಿಸಿತು.

ಕನ್ನಡಪ್ರಭ ವಾರ್ತೆ ಹಲಗೂರು

ಅಂತರವಳ್ಳಿಯಲ್ಲಿ ಶ್ರೀ ಉರಿಗಣ್ಣಮ್ಮ ದೇವಿಯ ದೇವಾಲಯಗಳ ಪುನರ್ ಜೀರ್ಣೋದ್ಧಾರ ಕಾರ್ಯಕ್ರಮ ಎರಡು ದಿನಗಳ ಕಾಲ ಸಡಗರ, ಸಂಭ್ರಮ ಮತ್ತು ಭಕ್ತಿ ಪೂರ್ವಕವಾಗಿ ನೆರವೇರಿತು.

ಸೋಮವಾರ ಗಣಪತಿ ಪೂಜೆ, ನಂದಿ ಪೂಜೆ, ನವಗ್ರಹ ಹೋಮ ಮತ್ತು ಅಭಿಷೇಕ ಪೂಜಾ ಕಾರ್ಯಕ್ರಮಗಳು, ನಂತರ ಮಹಾ ಮಂಗಳಾರತಿ ನಡೆಯಿತು. ದೀಪಾಲಂಕಾರ ಮತ್ತು ಹೂವಿನ ಅಲಂಕಾರ ನೋಡುಗರ ಕಣ್ಮನ ಸೆಳೆಯಿತು.

ಮಂಗಳವಾರ ಗ್ರಾಮದ ಹೊರವಲಯದ ಕೆರೆಯಲ್ಲಿ ಗಂಗೆ ಪೂಜೆ ಮಾಡಿ ದೇವರುಗಳನ್ನು ತರಲಾಯಿತು. ನಂತರ ದೇವಾಲಯಗಳ ಪ್ರವೇಶ, ಮಹಾ ಮಂಗಳಾರತಿ ನಡೆಯಿತು. ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಭಕ್ತಾದಿಗಳಿಗೂ ಅನ್ನ ಸಂತರ್ಪಣೆ ನಡೆಯಿತು.

ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮಿಯ ಪೂಜಾ ಉತ್ಸವ ಕಾರ್ಯಕ್ರಮ ಜರುಗಿತು. ಹೆಸರಾಂತ ತಮಟೆ ಕಲಾವಿದ ಕುಂತೂರು ಕುಮಾರ್ ಮತ್ತು ತಂಡದವರಿಂದ ತಮಟೆ- ನಗಾರಿಗಳ ಕಲರವ ಭಕ್ತರನ್ನು ರಂಜಿಸಿತು.

ಶ್ರೀ ಉರಿಗಣ್ಣೇಶ್ವರಿ ದೇವಿಯ ಒಕ್ಕಲಿನ ಗ್ರಾಮಗಳಾದ ಕನಕಪುರ ತಾಲೂಕಿನ ಹೆಗ್ಗನೂರು, ಹೆಗ್ಗನೂರು ದೊಡ್ಡಿ, ನಲ್ಲಹಳ್ಳಿ, ನಲ್ಲಹಳ್ಳಿ ದೊಡ್ಡಿ, ಏಳಗಳ್ಳಿ, ಶಿವನಹಳ್ಳಿ, ಹರಿಹರ ಭೂಹಳ್ಳಿ, ಉರಿಗಳ್ಳಿ, ಸಂತೇ ಕೋಡಿಹಳ್ಳಿ, ಪುಟ್ಟದಾಸನದೊಡ್ಡಿ, ಚುಂಚಿದೊಡ್ಡಿ, ಹುಲಿಬೆಲೆ, ಸೋಮನಹಳ್ಳಿ, ಹೊಸ ಕಬ್ಬಾಳು, ಹೊಸದುರ್ಗ, ಹಾರೋಹಳ್ಳಿ ಮತ್ತು ಮಂಡ್ಯ ಜಿಲ್ಲೆಯ ದಡಮಹಳ್ಳಿ, ಹುಸ್ಕೂರು, ಹುಲ್ಲೇಗಾಲ, ಹುಲ್ಲಹಳ್ಳಿ, ಯತ್ತಂಬಾಡಿ, ಬೆಳತೂರು, ತೊರೆಕಾಡನಹಳ್ಳಿ, ಎಸ್.ಐ ಹೊನ್ನಲಗೆರೆ, ಗುಳಗನಹಳ್ಳಿ ಗ್ರಾಮದ ಒಕ್ಕಲಿನ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.

ಗ್ರಾಮದ ಮುಖಂಡರಾದ ಕೆ.ಸಿದ್ದಯ್ಯ ಮಾತನಾಡಿ, ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ಎರಡು ಉರಿಗಣ್ಣೇಶ್ವರಿ ದೇವಾಲಯಗಳನ್ನು ಗ್ರಾಮಸ್ಥರು ಮತ್ತು ಭಕ್ತಾದಿಗಳ ಸಹಕಾರದೊಂದಿಗೆ ಜೀರ್ಣೋದ್ಧಾರ ಮಾಡಲಾಗಿದೆ. ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಯಶಸ್ವಿ ಆಗಿದೆ. ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸುವೆ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ