ನಿವೃತ್ತ ಯೋಧ ಬಸಪ್ಪಗೆ ಹುಟ್ಟೂರಿನಲ್ಲಿ ಗೌರವ

KannadaprabhaNewsNetwork |  
Published : Aug 02, 2026, 02:30 AM IST
ಗೌರವ  | Kannada Prabha

ಸಾರಾಂಶ

ಮದೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಎಲ್ಲರೂ ಸೇರಿ ಗ್ರಾಮದ ರಘು ಬಸಪ್ಪ ಹಾಗೂ ಅವರ ಪತ್ನಿ ದೀನಾ ಅವರನ್ನು ಮೆರವಣಿಗೆಯಲ್ಲಿ ಸ್ವಾಗತಿಸಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಮದೆ ಗ್ರಾಮದಲ್ಲಿ ನಿವೃತ ಯೋಧನಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿ ಮಾದರಿಯಾದರು. ಮದನಾಡು ಗ್ರಾಮದ ನಿವಾಸಿ, ನಿವೃತ್ತ ಸೈನಿಕ ಬಸಪ್ಪ ಹಾಗೂ ನವಿಲಾಕ್ಷಿ ದಂಪತಿ ಪುತ್ರ ರಘು ಬಸಪ್ಪ 26 ವರ್ಷ ಸೈನ್ಯದಲ್ಲಿ ಸೇವೆಯನ್ನು ಗೈದು ನಿವೃತ್ತಿ ಹೊಂದಿ ತನ್ನ ಗ್ರಾಮಕ್ಕೆ ಆಗಮಿಸಿದ ಸಂದರ್ಭ ಕುಟುಂಬಸ್ಥರು, ಮಾಜಿ ಸೈನಿಕರು ಊರಿನವರು ಯೋಧನನ್ನು ಮದೆ ಹೈಸ್ಕೂಲಿನಿಂದ ಮದೆ ಪೇಟೆಯವರೆಗೆ ಮೆರವಣಿಗೆ ಮೂಲಕ ಬರಮಾಡಿಕೊಂಡ ಅವಿಸ್ಮರಣಿಯ ಕಾರ್ಯಕ್ರಮ ನಡೆಯಿತು.

ಮದೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಎಲ್ಲರೂ ಸೇರಿ ಗ್ರಾಮದ ರಘು ಬಸಪ್ಪ ಹಾಗೂ ಅವರ ಪತ್ನಿ ದೀನಾ ಅವರನ್ನು ಮೆರವಣಿಗೆಯಲ್ಲಿ ಸ್ವಾಗತಿಸಿ ಸಂಭ್ರಮಿಸಿದರು.

ಈ ಸಂದರ್ಭ ಮದೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧನಂಜಯ್ ಅಗೋಳಿಕಜೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ, ಗಣರಾಜ್, ನಿವೃತ್ತ ಸೇನಾನಿಗಳು, ಕುಟುಂಬಸ್ಥರು ಹಾಗೂ ಊರಿನವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗುರುಳಿದ ಆಲದ ಮರ: ವಾಹನ ಸವಾರರು ಪಾರು
ಜಿಲ್ಲೆಯಲ್ಲಿ ಅತ್ತಾವರ ಯಲ್ಲಪ್ಪ ಪ್ರತಿಮೆ ಸ್ಥಾಪನೆಗೆ ಪ್ರಯತ್ನ: ಅನಂತ್ ಮೈಸೂರು