ರಕ್ತದಾನದಿಂದ ರೋಗಿಗಳಿಗೆ ಮರುಜೀವ-ಡಾ. ತಳವಾರ

KannadaprabhaNewsNetwork |  
Published : Sep 24, 2024, 01:52 AM IST
 ಪೊಟೋ ಪೈಲ್ ನೇಮ್ ೨೩ಎಸ್‌ಜಿವಿ೧ ಪಟ್ಟಣದ ವೀರಗಲ್ಲಿಯಲ್ಲಿ ಗಜಾನನೋತ್ಸವದ ಅಂಗವಾಗಿ ಶ್ರೀ ಸಿದ್ಧಿವಿನಾಯಕ ಯುವಕಮಂಡಳಿ, ಹಾವೇರಿಯ ವೈಧ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಶಿಗ್ಗಾಂವಿ ತಾಲೂಕಾ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರಕ್ಕೆ ಹಾವೇರಿ ವೈಧ್ಯಕೀಯ  ವಿಜ್ಞಾನ ಸಂಸ್ಥೆಯ ಡಾ, ಬಸವರಾಜ ತಳವಾರ ಚಾಲನೆ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಪ್ರತಿಯೊಬ್ಬ ರಕ್ತದಾನಿಯು ತನಗೆ ತಿಳಿಯದಂತೆ ವೈದ್ಯಕೀಯ ಲೋಕದಲ್ಲಿ ಹಲವಾರು ರೋಗಿಗಳಿಗೆ ಮರುಜೀವ ನೀಡುವ ಕೆಲಸವನ್ನು ಮಾಡುವುದರೊಂದಿಗೆ ತನ್ನ ದೈಹಿಕ ಆರೋಗ್ಯಕ್ಕಾಗಿಯೂ ಲಾಭ ಪಡೆದುಕೊಂಡಿರುತ್ತಾನೆ ಎಂದು ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಬಸವರಾಜ ತಳವಾರ ಹೇಳಿದರು.

ಶಿಗ್ಗಾಂವ: ಪ್ರತಿಯೊಬ್ಬ ರಕ್ತದಾನಿಯು ತನಗೆ ತಿಳಿಯದಂತೆ ವೈದ್ಯಕೀಯ ಲೋಕದಲ್ಲಿ ಹಲವಾರು ರೋಗಿಗಳಿಗೆ ಮರುಜೀವ ನೀಡುವ ಕೆಲಸವನ್ನು ಮಾಡುವುದರೊಂದಿಗೆ ತನ್ನ ದೈಹಿಕ ಆರೋಗ್ಯಕ್ಕಾಗಿಯೂ ಲಾಭ ಪಡೆದುಕೊಂಡಿರುತ್ತಾನೆ ಎಂದು ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಬಸವರಾಜ ತಳವಾರ ಹೇಳಿದರು.

ಪಟ್ಟಣದ ವೀರಗಲ್ಲಿಯಲ್ಲಿ ಗಜಾನನೋತ್ಸವದ ಅಂಗವಾಗಿ ಶ್ರೀ ಸಿದ್ಧಿವಿನಾಯಕ ಯುವಕಮಂಡಳಿ, ಹಾವೇರಿಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಶಿಗ್ಗಾಂವಿ ತಾಲೂಕು ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ದಾನ ಮಾಡಲಾದ ರಕ್ತವನ್ನು ರೋಗಿಗಳಿಗೆ ಚಿಕಿತ್ಸೆ ನೀಡಲು ಅಥವಾ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಬಳಸಲಾಗುತ್ತದೆ. ದಾನವಾಗಿ ಪಡೆದ ರಕ್ತದಿಂದ ಕೆಂಪು ರಕ್ತಕಣಗಳು, ಪ್ಲೇಟ್‌

ಲೇಟುಗಳು ಮತ್ತು ಪ್ಲಾಸ್ಮಾ ಪಡೆಯುವ ಮೂಲಕ ಅನೇಕ ವಿಧದ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಸಾಂಪ್ರದಾಯಿಕ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಬದ್ಧತೆಯಿಂದ ರಕ್ತದಾನ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಶಿಗ್ಗಾವಿ ವೀರಭದ್ರೇಶ್ವರ ನಗರದ ಶ್ರೀ ಸಿದ್ಧಿವಿನಾಯಕ ಯುವಕಮಂಡಳಿ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.

ಪುರಸಭೆ ಸದಸ್ಯ ರಮೇಶ ವನಹಳ್ಳಿ ಮಾತನಾಡಿ, ಕೃತಕವಾಗಿ ರಕ್ತ ಉತ್ಪಾದನೆ ಸಾಧ್ಯವಿಲ್ಲವಾದುದ್ದರಿಂದ, ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ರಕ್ತವನ್ನು ದಾನ ಮಾಡುವ ಮೂಲಕ ಇನ್ನೊಂದು ಜೀವವನ್ನು ಉಳಿಸುವ ಮಹೋನ್ನತ ಕಾರ್ಯ ಮಾಡುವ ಮೂಲಕ ನಮ್ಮ ದೇಹದ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವ ಸೌಭಾಗ್ಯವನ್ನು ಆ ದೇವರು ನಮಗೆ ನೀಡಿರುವುದರಿಂದ ರಕ್ತದಾನ ಮಾಡುವ ಸದಾವಕಾಶವನ್ನು ನಾವು ಕಳೆದುಕೊಳ್ಳಬಾರದು ಎಂದರು.ಈ ಸಂದರ್ಭದಲ್ಲಿ ಶ್ರೀ ಸಿದ್ಧಿವಿನಾಯಕ ಯುವಕಮಂಡಳಿಯ ಸದಸ್ಯರು ಸೇರಿದಂತೆ ಅನೇಕರು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಸಿದ್ದಾರ್ಥ ಪಾಟೀಲ, ಉಪಾಧ್ಯಕ್ಷ ಶಾಂತಾಬಾಯಿ ಸುಬೇದಾರ, ಶಿವಾನಂದ ಬಾಗೂರ, ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಪ್ತ ಸಮಾಲೋಚಕ ಸುಧಾಕರ ದೈವಜ್ಞ, ತಂತ್ರಜ್ಞ ಅಧಿಕಾರಿ ಬಸವರಾಜ ಕಮತದ, ಸೌಭಾಗ್ಯಾ ದೊಡ್ಡಮನಿ, ಸಂಗಪ್ಪಾ ಹರವಿ, ಸುರೇಶ ಯಲಿಗಾರ, ಈರಪ್ಪಾ ನವಲಗುಂದ, ಶಿವಪ್ಪಾ ಗಂಜಿಗಟ್ಟಿ, ನವೀನ ಹರವಿ, ರೇವಣಸಿದ್ದಪ್ಪಾ ಗೊಟಗೋಡಿ, ಶಿವರುದ್ರಪ್ಪಾ ಬನ್ನಿಕೊಪ್ಪಾ, ಮಾದೇವಪ್ಪಾ ಬಡ್ಡಿ, ಸಿದ್ದರಾಮಪ್ಪಾ ಬಡ್ಡಿ, ಸೋಮಣ್ಣಾ ನವಲಗುಂದ, ಸಹದೇವಪ್ಪಾ ಹೊನ್ನಣ್ಣನವರ, ನಿಂಗಪ್ಪಾ ಮಲ್ಲೂರ, ಮುರಗೆಪ್ಪಾ ಯಲಿಗಾರ, ಸಿದ್ದಿ ವಿನಾಯಕ ಮಂಡಳಿ ಸದಸ್ಯರು, ಯುವಕರು ಇದ್ದರು.ಸದರ ಕಾರ್ಯಕ್ರಮವನ್ನು ಶ್ರೀ ಸಿದ್ಧಿವಿನಾಯಕ ಯುವಕಮಂಡಳಿ ವತಿಯಿಂದ ವೀರಗಲ್ಲಿಯ ವೀರಭದ್ರೇಶ್ವರ ಓಣಿಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!