ನಾಗಮೋಹನದಾಸ್ ವರದಿಯಿಂದ ಬಲಗೈ ಸಮುದಾಯಕ್ಕೆ ಅನ್ಯಾಯ: ಅನೀಲ ಬೆಲ್ದಾರ್

KannadaprabhaNewsNetwork |  
Published : Sep 30, 2025, 02:00 AM IST
ಚಿತ್ರ 29ಬಿಡಿಆರ್62ಎ | Kannada Prabha

ಸಾರಾಂಶ

ನ್ಯಾ. ನಾಗಮೋಹನದಾಸ್ ಅವರ ವರದಿಯಿಂದ ಬಲಗೈ ಸಮುದಾಯಕ್ಕೆ ತೀವ್ರ ಅನ್ಯಾಯವಾಗಿದೆ. ಹೀಗಾಗಿ ‘ಒಳಮೀಸಲಾತಿ ವರದಿಯ ಒಳಸಂಚು’ ಕುರಿತು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದಿಂದ ಅ.5ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ರಂಗಮಂದಿರದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ಅನೀಲಕುಮಾರ ಬೆಲ್ದಾರ್ ತಿಳಿಸಿದರು.

ಬೀದರ್: ನ್ಯಾ. ನಾಗಮೋಹನದಾಸ್ ಅವರ ವರದಿಯಿಂದ ಬಲಗೈ ಸಮುದಾಯಕ್ಕೆ ತೀವ್ರ ಅನ್ಯಾಯವಾಗಿದೆ. ಹೀಗಾಗಿ ‘ಒಳಮೀಸಲಾತಿ ವರದಿಯ ಒಳಸಂಚು’ ಕುರಿತು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದಿಂದ ಅ.5ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ರಂಗಮಂದಿರದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ಅನೀಲಕುಮಾರ ಬೆಲ್ದಾರ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಚಾರ ಸಂಕಿರಣಕ್ಕೆ ಒಕ್ಕೂಟದ ಅಧ್ಯಕ್ಷ ಜ್ಞಾನಪ್ರಕಾಶ ಸ್ವಾಮೀಜಿ, ಸಂಚಾಲಕ ಸಿದ್ಧಯ್ಯ ನಿ. ಐ.ಎ.ಎಸ್., ಸಂಚಾಲಕಿ ವಾಣಿ ಕೆ.ಶಿವರಾಂ ಹಾಗೂ ಸರ್ಕಾರಿ ಎಸ್.ಸಿ. ಎಸ್.ಟಿ. ನೌಕರರ ಸಂಘದ ರಾಜ್ಯಾಧ್ಯಕ್ಷ ಡಿ.ಚಂದ್ರಶೇಖರಯ್ಯ ಆಗಮಿಸಿ, ವಿಶೇಷವಾಗಿ ನಮಗೆ ಆಗಿರುವ ಅನ್ಯಾಯದ ಕುರಿತು ಸಮಗ್ರವಾಗಿ ತಿಳಿಸಿಕೊಡಲಿದ್ದಾರೆ.

ಒಳಮೀಸಲಾತಿಯ ಒಳಸಂಚುಗಳು ಹಾಗೂ ಮುಂದಿನ ನಮ್ಮ ಸಮುದಾಯದ ಭವಿಷ್ಯದ ಕುರಿತು ಬಲಗೈ ಸಮುದಾಯಗಳು ತೆಗೆದುಕೊಳ್ಳಬೇಕಾದ ತಿರ್ಮಾನಗಳ ಬಗ್ಗೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಬೆಲ್ದಾರ್ ತಿಳಿಸಿದರು.

ಒಕ್ಕೂಟದ ಮುಖಂಡರಾದ ರಮೇಶ ಡಾಕುಳಗಿ ಮಾತನಾಡಿ, ಆ.19ರಂದು ನಡೆದ ಸಚಿವ ಸಂಪುಟವು ನ್ಯಾ.ನಾಗಮೋಹನದಾಸ್ ವರದಿಯನ್ನು ಭಾಗಶಃ ಮಾರ್ಪಡಿಸಿ ಪ್ರವರ್ಗ ಎ,ಬಿ,ಸಿ ಎಂದು ನಾಲ್ಕು ಭಾಗಗಳಾಗಿ ಹಣ ಹಾಗೂ ರಾಜಕೀಯ ಒಳಸಂಚಿನಿಂದ ಉದ್ದೇಶಪೂರ್ವಕವಾಗಿಯೇ ವರ್ಗಿಕರಿಸಿ, ಹೆಚ್ಚು ಜನಸಂಖ್ಯೆವುಳ್ಳ ಬಲಗೈ ಸಮುದಾಯವನ್ನು 2ನೇ ಸ್ಥಾನದಲ್ಲಿ ಬರುವಂತೆ ನೋಡಿಕೊಳ್ಳಲಾಗಿದೆ ಎಂದರು.

ವಿಚಾರ ಸಂಕಿರಣದಲ್ಲಿ ಮುಂದಿನ ಹೋರಾಟದ ಕುರಿತು ಪೂಜ್ಯ ಜ್ಞಾನಪ್ರಕಾಶ ಸ್ವಾಮೀಜಿಯವರೇ ನಿರ್ಣಯ ಕೈಗೊಳ್ಳಲಿದ್ದಾರೆ. ಬಲಗೈ ಸಮುದಾಯದ ಪ್ರಗತಿಪರ ಚಿಂತಕರು, ವಿದ್ಯಾರ್ಥಿಗಳು, ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದರು.

ಒಕ್ಕೂಟದ ಮುಖಂಡರಾದ ಬಾಬುರಾವ ಪಾಸ್ವಾನ್, ಪ್ರಮುಖರಾದ ಶ್ರೀಪತರಾವ್‌ ದೀನೆ, ಶಿವಕುಮಾರ ನೀಲಿಕಟ್ಟಿ, ಪ್ರದೀಪ ನಾಟೇಕಾರ, ಅಶೋಕ ಮಾಳಗೆ, ಪ್ರಕಾಶ ಮಾಳಗೆ, ತುಕಾರಾಮ ಲಾಡಕರ್, ಸುಧಾಕರ ರಾಜಗಿರಾ, ರಮೇಶ ಪಾಸ್ವಾನ್, ರಮೇಶ ಮಂದಕನಳ್ಳಿ, ರಾಜಕುಮಾರ ಶೇರಿಕಾರ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ