ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ತಾಲೂಕಿನ ಇಂಗಳಗೇರಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ₹ 10 ಕೋಟಿ ವೆಚ್ಚದಲ್ಲಿ ಇಂಗಳಗೇರಿಯಿಂದ ಬಳವಾಟ ಹಾಗೂ ಇಂಗಳಗೇರಿಂದ ಗುಡ್ನಾಳ ಕ್ರಾಸ್‌ವರೆಗಿನ ಡಾಂಬರ್ ರಸ್ತೆ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈಗಾಗಲೇ ಮತಕ್ಷೇತ್ರದಲ್ಲಿ ಉಕ್ಕಲಿ, ದಿಂಡವಾರ, ಸಾಸನೂರ, ಬಳಗಾನೂರ, ಬಾವೂರ, ಮೂಕಿಹಾಳ, ನಾಲತವಾಡ ಮಾರ್ಗದ ಕೆಸಿಪ್ ಯೋಜನೆಯಡಿಯಲ್ಲಿ ಸುಮಾರು ₹ 770 ಕೋಟಿಯಲ್ಲಿ 177ನೇ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ಈ ಮೊದಲು ₹ 35 ಕೋಟಿ ವೆಚ್ಚದಲ್ಲಿ ನಾಲುತವಾಡದಿಂದ ತಂಗಡಗಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಜತೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ₹ 17.5 ಕೋಟಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಸೇರಿ ಶಾಲಾ ಕಟ್ಟಡಗಳ ದುರಸ್ತಿ, ಹೊಸ ಕಟ್ಟಡಗಳ ನಿರ್ಮಾಣ, ಕೆರೆ ತುಂಬುವ ಯೋಜನೆ, ನೀರಾವರಿ ಯೋಜನೆ ಅನೇಕ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಹಿಂದಿನ ಬಿಜೆಪಿ ಸರ್ಕಾರ ಚುನಾವಣೆ ಲೆಕ್ಕಾಚಾರದಲ್ಲಿ ಸುಮಾರು ₹ 1 ಲಕ್ಷ 20 ಸಾವಿರ ಮೊತ್ತದ ಅವೈಜ್ಞಾನಿಕವಾಗಿ ವಿವಿಧ ಕಾಮಗಾರಿಗಳನ್ನು ಗುತ್ತಿಗೆ ನೀಡಿ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದೆ ಉಳಿಸಿ ಹೋಗಿದ್ದಾರೆ. ಹಾಗಂತ ನಮ್ಮ ಸರ್ಕಾರ ಕೈಕಟ್ಟಿ ಕುಳಿತುಕೊಳ್ಳದೆ ಗುತ್ತಿಗೆದಾರರಿಗೆ ಹಂತಹಂತವಾಗಿ ಬಿಡುಗೆಡೆ ಮಾಡುತ್ತಿದೆ. ಇಂತಹ ಗಂಭೀರ ಸ್ಥಿತಿಯಲ್ಲೂ ಪಂಚ ಗ್ಯಾರಂಟಿಗಳನ್ನು ನೀಡುವ ಮೂಲಕ ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ. ಆದರೆ, ಪಂಚ ಗ್ರಾರಂಟಿಗಳನ್ನು ಕೆಲವರು ಟೀಕೆ ಮಾಡುತ್ತಾರೆ. ಯಾರು ಟೀಕೆ ಮಾಡುತ್ತಾರೆ. ಯಾರು ಆರ್ಥಿಕವಾಗಿ ಸಬಲರಿದ್ದಾರೋ ಅಂತವರು ಗ್ಯಾರಂಟಿ ಯೋಜನೆಯಿಂದ ಹೊರ ಬಂದು ಅಭಿವೃದ್ಧಿಗೆ ಕೈಜೋಡಿಸಲಿ ಎಂದರು.ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳನ್ನು ತರಲಿಲ್ಲ, ಬಡವರಿಗೆ ಮನೆ ಹಂಚಲಿಲ್ಲ, ಶಾಲಾ ಕಟ್ಟಡ ಮಾಡಲಿಲ್ಲ, ರೈತರಿಗೆ ಯೋಜನೆಗಳನ್ನು ಜಾರಿಗೊಳಿಸಲಿಲ್ಲ, ಯಾವ ಯೋಜನೆಗಳು ಅನುಷ್ಠಾನಗೊಳಿಸಲಿಲ್ಲ. ಆದರೆ, ಎಲ್ಲರ ಕಣ್ಣಿಗೆ ಕಾಣುವ ಹಾರೆ ಸಿಸಿ ರಸ್ತೆಗಳನ್ನು ಮಾಡಿದರೆ ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ಎಂದು ಹೇಳಲಾಗುತ್ತದೆಯೇ? ಎಂದು ಹರಿಹಾಯ್ದರು.
ಕೋಟ್
- ಸಿ.ಎಸ್.ನಾಡಗೌಡ, ಶಾಸಕರು, ಕೆಎಸ್‌ಡಿಎಲ್ ಅಧ್ಯಕ್ಷರು