ದರೋಡೆ ಪ್ರಕರಣ, ನಾಲ್ವರಿಗೆ 10 ವರ್ಷ ಕಠಿಣ ಶಿಕ್ಷೆ

KannadaprabhaNewsNetwork | Published : Oct 6, 2023 1:17 AM

ಸಾರಾಂಶ

ನಾಲ್ಕು ವರ್ಷಗಳ ಹಿಂದೆ ಮುಂಡಗೋಡ ಪಟ್ಟಣವನ್ನೇ ತಲ್ಲಣಗೊಳಿಸಿದ ಟಿಬೇಟಿಯನ್ ಕಾಲನಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳಾದ ವಸಂತ ಕರಿಯಪ್ಪ ಕೊರವರ, ಮಂಜು ಅರ್ಜುನ ನವಲೆ, ಕಿರಣ ಪ್ರಕಾಶ ಸೂಳಂಕಿ ಹಾಗೂ ಮಧುಸಿಂಗ್‌ ಗಂಗಾರಾಮ ಸಿಂಗ್‌ ರಜಪೂತ ಆರೋಪಿಗಳಿಗೆ ಕಲಂ.೩೯೫ ಐಪಿಸಿಯಂತೆ ೧೦ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹ ೧೦,೦೦೦ ದಂಡ ತಪ್ಪಿದ್ದಲ್ಲಿ ೧ ವರ್ಷ ಕಾರಾಗೃಹ ಶಿಕ್ಷೆ, ಕಲಂ.೩೯೭ ಐಪಿಸಿಯಂತೆ ೭ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಎಲ್ಲ ಆರೋಪಿತರಿಗೂ ತಲಾ ₹ ೫,೦೦೦ ದಂಡ, ತಪ್ಪಿದಲ್ಲಿ ೬ ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮುಂಡಗೋಡ

ನಾಲ್ಕು ವರ್ಷಗಳ ಹಿಂದೆ ಪಟ್ಟಣವನ್ನೇ ತಲ್ಲಣಗೊಳಿಸಿದ ಟಿಬೇಟಿಯನ್ ಕಾಲನಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.ವಸಂತ ಕರಿಯಪ್ಪ ಕೊರವರ, ಮಂಜು ಅರ್ಜುನ ನವಲೆ, ಕಿರಣ ಪ್ರಕಾಶ ಸೂಳಂಕಿ ಹಾಗೂ ಮಧುಸಿಂಗ್‌ ಗಂಗಾರಾಮ ಸಿಂಗ್‌ ರಜಪೂತ ಆರೋಪಿಗಳಿಗೆ ಕಲಂ.೩೯೫ ಐಪಿಸಿಯಂತೆ ೧೦ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹ ೧೦,೦೦೦ ದಂಡ ತಪ್ಪಿದ್ದಲ್ಲಿ ೧ ವರ್ಷ ಕಾರಾಗೃಹ ಶಿಕ್ಷೆ, ಕಲಂ.೩೯೭ ಐಪಿಸಿಯಂತೆ ೭ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಎಲ್ಲ ಆರೋಪಿತರಿಗೂ ತಲಾ ₹ ೫,೦೦೦ ದಂಡ, ತಪ್ಪಿದಲ್ಲಿ ೬ ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ೧೯-೧-೨೦೧೯ರಂದು ಟಿಬೇಟಿಯನ್ ಲಾಮಾ ಕ್ಯಾಂಪ್ ನಂ. ೧ರಲ್ಲಿ ಜಂಚುಪ್ ರಂಚನ್ ತೆಂಜಿನ್ ಎಂಬುವವರ ಮನೆಗೆ ನುಗ್ಗಿ ಮನೆಯಲ್ಲಿದ್ದವರ ಮೇಲೆ ಚಾಕು ಮುಂತಾದ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬೆದರಿಸಿ ₹ ೬ ಲಕ್ಷ ನಗದು, ಎರಡು ಐಫೋನ್, ಮೊಬೈಲ್‌, ಟ್ಯಾಬ್, ಸಿಸಿ ಕ್ಯಾಮೆರಾ ಪ್ರೊಜೆಕ್ಟರ್‌ ಹಾಗೂ ಮನೆಯಲ್ಲಿದ್ದ ೩ ಬಂಗಾರದ ಜೈನ್, ೨ ಬಂಗಾರದ ಬ್ರೇಸಲೇಟ್, ೪ ಬಂಗಾರದ ಉಂಗುರ, ೩ ಜತೆ ಕಿವಿ ಓಲೆ ಹಾಗೂ ಯಾವುದೇ ಸಾಕ್ಷ್ಯ ಸಿಗದಂತೆ ಮನೆಯ ಒಳಗೆ ಇದ್ದ ಸಿಸಿ ಕ್ಯಾಮೆರಾದ ಡಿಎಆರ್‌ ಕಿತ್ತುಕೊಂಡು ಜೀವ ಬೆದರಿಕೆ ಹಾಕಿದ್ದರು. ಈ ಕುರಿತು ಮುಂಡಗೋಡ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.ಅಂದಿನ ಮುಂಡಗೋಡ ಪೊಲೀಸ್ ಠಾಣೆ ಸಿಪಿಐ ಶಿವಾನಂದ ಚಲವಾದಿ ತನಿಖೆ ಕೈಗೊಂಡು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್‌ ರಾಜೇಶ್ ವಾದ ಮಂಡಿಸಿದ್ದರು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಶಿರಸಿಯ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ, ಪೀಠಾಸೀನ ಶಿರಸಿಯ ನ್ಯಾಯಾಧೀಶ ಕಿರಣ ಕಿಣಿ ಆರೋಪಿತರ ವಿರುದ್ಧ ಆರೋಪ ಸಾಬೀತಾಗಿದ್ದರಿಂದ ಶಿಕ್ಷೆ ವಿಧಿಸಿ ಆದೇಶ ಹೊಡಿಸಿದ್ದಾರೆ.

Share this article