ಹೈದ್ರಾಬಾದ್‌ನಲ್ಲಿ ದರೋಡೆ, ಗಡಿಯಲ್ಲಿ ಪೊಲೀಸ್ ಅಲರ್ಟ್‌!

KannadaprabhaNewsNetwork |  
Published : Aug 14, 2025, 01:00 AM IST
ಚಿತ್ರ 13ಬಿಡಿಆರ್59 | Kannada Prabha

ಸಾರಾಂಶ

ತೆಲಂಗಾಣ ರಾಜಧಾನಿ ಹೈದ್ರಾಬಾದ್‌ನ ಚಂದಾನಗರದ ಖಜಾನಾ ಜ್ವೇಲರಿ ಅಂಗಡಿಯಲ್ಲಿ ದರೋಡೆಕೊರರು ಗನ್ ಪಾಯಿಂಟ್ ನಲ್ಲಿ ಚಿನ್ನಾಭರಣ ಲೂಟಿ ಮಾಡಿದ ನಟೋರಿಯಸ್ ಗ್ಯಾಂಗ್ ನ ಪತ್ತೆಗಾಗಿ ಜಿಲ್ಲೆಯ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರಿಂದ ಹದ್ದಿನ ಕಣ್ಣಿನ ತಪಾಸಣೆ ಚುರುಕಾಗಿದೆ.

ಕನ್ನಡಪ್ರಭ ವಾರ್ತೆ ಔರಾದ್

ತೆಲಂಗಾಣ ರಾಜಧಾನಿ ಹೈದ್ರಾಬಾದ್‌ನ ಚಂದಾನಗರದ ಖಜಾನಾ ಜ್ವೇಲರಿ ಅಂಗಡಿಯಲ್ಲಿ ದರೋಡೆಕೊರರು ಗನ್ ಪಾಯಿಂಟ್ ನಲ್ಲಿ ಚಿನ್ನಾಭರಣ ಲೂಟಿ ಮಾಡಿದ ನಟೋರಿಯಸ್ ಗ್ಯಾಂಗ್ ನ ಪತ್ತೆಗಾಗಿ ಜಿಲ್ಲೆಯ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರಿಂದ ಹದ್ದಿನ ಕಣ್ಣಿನ ತಪಾಸಣೆ ಚುರುಕಾಗಿದೆ.

ತಾಲೂಕಿನ ಕಂಗಟಿ, ಜಂಬಂಗಿ, ವನಮಾರಪಳ್ಳಿ, ಕಮಲನಗರ ತಾಲೂಕಿನ ಮುರ್ಕಿ, ಕಮಲನಗರ ಬಾರ್ಡರ್ ಚೇಕ್ ಪೋಸ್ಟ್ ಗಳು ಸಕ್ರಿಯಗೊಳಿಸಿರುವ ಪೊಲೀಸರು ಒಂದೊಂದೇ ವಾಹನವನ್ನು ತಡೆದು ಸಮಗ್ರವಾಗಿ ತಪಾಸಣೆ ಮಾಡ್ತಿದ್ದಾರೆ. ಸಂಶಯಾಸ್ಪಯ ವಾಹನಗಳ ಬಗ್ಗೆ ಮಾಹಿತಿ ಕಲೆ ಹಾಕಿ ನೆರೆ ರಾಜ್ಯದಿಂದ ರಾಜ್ಯದ ಗಡಿ ಪ್ರವೇಶ ಮಾಡದಂತೆ ಮುನ್ನೆಚ್ಚರಿಕೆ ವಹಿಸಕೊಳ್ಳಲಾಗ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಹಾರಾಷ್ಟ್ರದಿಂದ ಮುರ್ಕಿ ಮಾರ್ಗವಾಗಿ ಕೆವಲ 30 ಕಿ‌.ಮೀ. ಉದ್ದದ ಗಡಿ ಪ್ರದೇಶ ದಾಟಿದರೆ ತೆಲಂಗಾಣದ ಕಂಗಟಿ ಬಾರ್ಡರ್ ದಾಟಿದಂತಾಗುತ್ತದೆ. ರಾಜ್ಯ ಹೆದ್ದಾರಿ 122ರನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ಪಡೆದ ಪೊಲೀಸರು, ವಡಗಾಂವ್- ಸಂತಪೂರ್-ಸಂಗಮ, ಬೀದರ್-ಔರಾದ್- ನಾಂದೇಡ್, ಹಾಗೂ ಬೀದರ್- ಕಮಲನಗರ- ಉದಗಿರ ಹೆದ್ದಾರಿಯನ್ನು ಹದ್ದಿನ ಕಣ್ಣಿನ ಪೊಲೀಸ್ ಸರ್ಪಗಾವಲಿನಲ್ಲಿ ಚೇಕ್ ಪೋಸ್ಟ್ ಹೈ-ವೇ ಪೆಟ್ರೋಲ್, ಸ್ಥಳೀಯ ಪೊಲೀಸ್ ರ ಗಸ್ತು ಕಾರ್ಯ ಹೆಚ್ಚು ಮಾಡಿರುವುದು ಕಂಡು ಬಂದಿದೆ.

ಇತ್ತಿಚೇಗೆ ನಡೆದ ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸರು ಅಪರಾಧ ಆಗುವುದಕ್ಕೂ ಮುನ್ನ ಅಲರ್ಟ್‌ ಆದಂತೆ ಕಾಣುತ್ತಿದ್ದು, ಅಲ್ಲಲ್ಲಿ ನಡೆದ ಕಳ್ಳತನ ಪ್ರಕರಣದ ಆಸ್ತಿಯನ್ನು ಸಾರ್ವಜನಿಕರಿಗೆ ಹಿಂದುರುಗಿಸಿರುವ ಪೊಲೀಸರು ಕಳ್ಳತನ ಹಾಗೂ ದರೋಡೆಯಂಥ ಅವಘಡ ನಡೆಯದಂತೆ ಎಚ್ಚರಿಕೆ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗ್ತಿದೆ. ಹೈದ್ರಾಬಾದ್‌ನಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿಗಳು ಬೀದರ್ ನತ್ತ ಬಂದಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ನಮ್ಮ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಗಳ ಸರಹದ್ದಿನ ಎಲ್ಲಾ ಗಡಿ ಚೇಕ್ ಪೊಸ್ಟ್ ಗಳನ್ನು ಚುರುಕುಗೊಳಿಸಿ ವಾಹನ ತಪಾಸಣೆ ಕಾರ್ಯ ಆರಂಭಿಸಿದಲ್ಲದೆ ವಿವಿಧ ಪೊಲೀಸ್ ಗಸ್ತು ಕೂಡ ಹೆಚ್ಚಿಸಲಾಗಿದೆ. ಸಾರ್ವಜನಿಕರೊಟ್ಟಿಗೆ ಮನೆ ಮನೆ ಪೊಲೀಸ್ ಅಭಿಯಾನ ಕೂಡ ಜಾರಿಯಲ್ಲಿದೆ ಎಂದು ಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಅವರು ''''''''''''''''ಕನ್ನಡಪ್ರಭ''''''''''''''''ಕ್ಕೆ ಮಾಹಿತಿ ನೀಡಿದ್ದಾರೆ.

ಶಿವಾನಂದ ಪವಾಡಶೆಟ್ಟಿ

ಡಿವೈಎಸ್‌ಪಿ, ಭಾಲ್ಕಿ

PREV

Recommended Stories

ಅಭಿಮಾನ್‌ ಸ್ಟುಡಿಯೋ ಬಳಿಯೇ ವಿಷ್ಣು ದರ್ಶನ ಕೇಂದ್ರ : ಕಿಚ್ಚ ಸುದೀಪ್‌ ಅವರಿಂದ ಜಾಗ ಖರೀದಿ
ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌