ಮದೆನಾಡು ಬಳಿ ರಸ್ತೆಗುರುಳಿದ ಬಂಡೆ ಕಲ್ಲು!

KannadaprabhaNewsNetwork |  
Published : Aug 02, 2026, 02:30 AM IST
ಚಿತ್ರ :  1ಎಂಡಿಕೆ8 : ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಬಂಡೆಕಲ್ಲು.  | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿ 275 ಮಡಿಕೇರಿ-ಮಂಗಳೂರು ಮದೆನಾಡಿನಿಂದ ಸ್ವಲ್ಪ ಕೆಳ ಭಾಗದ ಕರ್ತೋಜಿಯ ಮೇಲ್ಭಾಗದ ರಸ್ತೆಯಲ್ಲಿ ಬೃಹತ್ ಬಂಡೆಯೊಂದು ರಸ್ತೆಗೆ ಬಿದ್ದು, ಆತಂಕ ಸೃಷ್ಟಿಸಿದೆ.

ಮಡಿಕೇರಿ: ರಾಷ್ಟ್ರೀಯ ಹೆದ್ದಾರಿ 275 ಮಡಿಕೇರಿ-ಮಂಗಳೂರು ಮದೆನಾಡಿನಿಂದ ಸ್ವಲ್ಪ ಕೆಳ ಭಾಗದ ಕರ್ತೋಜಿಯ ಮೇಲ್ಭಾಗದ ರಸ್ತೆಯಲ್ಲಿ ಬೃಹತ್ ಬಂಡೆಯೊಂದು ರಸ್ತೆಗೆ ಬಿದ್ದು, ಆತಂಕ ಸೃಷ್ಟಿಸಿದೆ.

ಸದ್ಯ ಒಂದು ಬಂಡೆ ರಸ್ತೆ ಮಧ್ಯಭಾಗದಲ್ಲಿದ್ದು, ಮತ್ತೊಂದು ಬಂಡೆ ರಸ್ತೆ ಬದಿಯಲ್ಲಿ ಬಿದ್ದಿದೆ. ಇದರಿಂದ ರಾತ್ರಿ ವೇಳೆ ವಾಹನ ಸವಾರರಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಾಹನ ಚಾಲಕರು ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವಂತೆ ಮನವಿ ಮಾಡಲಾಗಿದೆ.

ರಾತ್ರಿ ಸಂಚರಿಸುವವರು ಸಾಧ್ಯವಾದಷ್ಟು ನಿಧಾನವಾಗಿ ಹಾಗೂ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಬಿದ್ದಿರುವ ಬಂಡೆಗಳನ್ನು ತೆರವುಗೊಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗುರುಳಿದ ಆಲದ ಮರ: ವಾಹನ ಸವಾರರು ಪಾರು
ಜಿಲ್ಲೆಯಲ್ಲಿ ಅತ್ತಾವರ ಯಲ್ಲಪ್ಪ ಪ್ರತಿಮೆ ಸ್ಥಾಪನೆಗೆ ಪ್ರಯತ್ನ: ಅನಂತ್ ಮೈಸೂರು