ಶೈಕ್ಷಣಿಕ ಪ್ರಗತಿಯಲ್ಲಿ ಕೇವಲ ಇಲಾಖೆ, ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ. ಪಾಲಕರು ಹಾಗೂ ಸಮಾಜದ ಸಂಪೂರ್ಣ ಸಹಕಾರದ ಅಗತ್ಯವಿದೆ
ಕೊಪ್ಪಳ: ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಪಾತ್ರ ಮಹತ್ವದಾಗಿದೆ ಎಂದು ಬಹದ್ದೂರಬಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗಾನಂದ ಲೇಬಗೇರಿ ಹೇಳಿದರು.
ತಾಲೂಕಿನ ಬಹದ್ದೂರಬಂಡಿ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಪಾಲಕ-ಪೋಷಕರ ಹಾಗೂ ಶಿಕ್ಷಕರ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.ಶೈಕ್ಷಣಿಕ ಪ್ರಗತಿಯಲ್ಲಿ ಕೇವಲ ಇಲಾಖೆ, ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ. ಪಾಲಕರು ಹಾಗೂ ಸಮಾಜದ ಸಂಪೂರ್ಣ ಸಹಕಾರದ ಅಗತ್ಯವಿದೆ. ಶಿಕ್ಷಕರೂ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸರಕಾರ ನೀಡುವ ಸೌಲಭ್ಯಗಳನ್ನು ಮಕ್ಕಳು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆ ಹಾಗೂ ಸರಕಾರದ ಅನುದಾನದ ಜೊತೆಯಲ್ಲಿ ದಾನಿಗಳ ಸಹಕಾರವನ್ನು ಪಡೆದು ಶಾಲೆ ಅಭಿವೃದ್ದಿಯನ್ನು ಮಾಡಬಹುದು. ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಮನೆಯಲ್ಲಿ ಪಾಲಕರೂ ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಪ್ರತಿದಿನ ಅವಲೋಕಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಂಜುನಾಥ ಕುರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಮಹಮ್ಮದರಫಿ ಹಿರೇಮಸೂತಿ, ಸಿ.ಆರ್.ಪಿ. ಮುದ್ದು ಬಸವ, ಶಾಲಾ ಅಭಿವೃದ್ದಿ ಸಮಿತಿಯ ಸದಸ್ಯರಾದ ಮೈಲಪ್ಪ ಕಂಬದಮನಿ, ಬಾಬಾ ಕಿಲ್ಲೇದಾರ, ಬಸವರಾಜ ಮತ್ತೂರು, ಮಾಬೂಬಿ ಮುಲ್ಲಾ, ಸಲೀಂಮಾಬೇಗಂ, ಚಿನ್ನಮ್ಮ ಶೆಟ್ಟರ್, ಶಿವಪ್ಪ ಕಬ್ಬೇರ, ಮಲ್ಲೇಶ, ಸರಕಾರಿ ನೌಕರರ ಸಂಘದ ಸದಸ್ಯರಾದ ಭಾರತಿ ಹವಳೆ, ಶಿಕ್ಷಕರ ಸಂಘದ ಜಿಲ್ಲಾ ಸಹ ಕಾರ್ಯದರ್ಶಿ ಪೂರ್ಣಿಮಾ ತುಪ್ಪದ, ಶಿಕ್ಷಕರಾದ ಶರಣಪ್ಪ ಕೇಳಗಿನಗೌಡರು, ಜ್ಯೋತಿಲಕ್ಷ್ಮೀ, ಗಂಗಮ್ಮ ಕಪರಶೆಟ್ಟರ್, ಮೇರಾಜುನ್ನಿಸ್, ಮಾಧವಿ ಅಂಗಡಿ, ನಗ್ಮಾ, ರುಬೀನಾ, ಜಲಜಾಕ್ಷಿ, ವೀಣಾ ಮುಂತಾದವರು ಹಾಜರಿದ್ದರು.
ಶಿಕ್ಷಕಿ ಮಮತಾ ಬಿ.ಕೆ.ಎಂ. ನಿರೂಪಿಸಿದರು. ಶಿಕ್ಷಕಿ ಭಾರತಿ ಉಪಾಧ್ಯಾ ಪ್ರಾರ್ಥಿಸಿದರು. ಶಿಕ್ಷಕ ಹನುಮಂತಪ್ಪ ಕಬ್ಬೇರ ಸ್ವಾಗತಿಸಿದರು. ರಾಜಾ ಹುಸೇನ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.