ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿ ಬಳಗದ ವತಿಯಿಂದ ಏರ್ಪಡಿಸಿದ್ದ ಸ್ನೇಹ ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಎನ್ ಸಿ ಸಿ ವಿದ್ಯಾರ್ಥಿಯಾಗಿ ದೆಹಲಿಗೆ ಹೋದಾಗ, ಅಲ್ಲಿ ಯುವ ಮಹೋತ್ಸವದಲ್ಲಿ ಯೋಗಾಸನ ಸ್ವರ್ಧೆಯಲ್ಲಿ ಭಾಗವಹಿಸಿದ್ದೆ, ಪ್ರಥಮ ಸ್ಥಾನ ದೊರೆಯಿತು. ನಂತರ ಅಂತಾರಾ ಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾದೆ. ಅಲ್ಲಿಯೂ ಪ್ರಥಮ ಸ್ಥಾನ ದೊರಕಿತು. ಹೀಗೆ ನನ್ನ ಹವ್ಯಾಸ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟು ಇಂದು ಅಮೇರಿಕದ ವ್ಯಾಸ ಭಾರತಿ ತ್ರಿಯೋಗ ವಿಶ್ವವಿದ್ಯಾಲಯದ ಇನ್ನೂರ ಐವತ್ತಾರು ಶಾಖೆಗಳ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಯುವ ವಿದ್ಯಾರ್ಥಿಗಳಲ್ಲಿ ಪ್ರೇರಣೆ ತುಂಬಿದರು.
ಯೋಗದಿಂದ ದೊರಕುವ ಪ್ರಯೋಜನ ಹಾಗೂ ಪ್ರಾತ್ಯಕ್ಷೆಕೆ ಮೂಲಕ ಹಿರಿಯ ವಿದ್ಯಾರ್ಥಿಗಳ ಮನಗೆದ್ದು, ಆರೋಗ್ಯದ ಬಗ್ಗೆ ಕೆಲವು ಮಾಹಿತಿ ನೀಡಿದರು. ತಮಗೆ ಕಾಲೇಜಿನಲ್ಲಿ ಸಿಕ್ಕ ನೆರವು ಸ್ನೇಹಿತರ ಹುಡುಗಾಟದ ದಿನಗಳನ್ನು ನೆನಪಿಸಿಕೊಂಡು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.ಉದ್ಯಮಿ ಕಿಮ್ಮನೆ ಜಯರಾಂ ಮಾತನಾಡಿ, ಅಂದು ಮಾಡಿದ ಹುಡುಗಾಟಿಕೆ ಇಂದು ನೆನೆಪು ಮಾತ್ರ, ಆದರೂ ಖುಷಿ ಕೊಡುತ್ತದೆ. ಸ್ನೇಹಿತರು ಇಂದಿಗೂ ಜೊತೆಗಿದ್ದಾರೆ. ನನ್ನ ಊರಿಗೆ ವಿಶ್ವ ಮಟ್ಟದಲ್ಲಿ ಮನ್ನಣೆ ದೊರಕಬಹುದಾದ ಹಾಗೂ ಮತ್ತೊಬ್ಬರು ಸ್ವರ್ಧೆಗೆ ಬಾರದೆ ಇರುವ ಕೆಲಸ ಮಾಡಬೇಕೆಂದು ತಮ್ಮ ಪತ್ನಿಯೊಂದಿಗೆ ಚರ್ಚಿಸಿ ಗಾಲ್ಫಕ್ಲಬ್ ಪ್ರಾರಂಭಿಸಿದೆ. ಈಗ ಅದರ ಬಗ್ಗೆ ಪ್ರಶಂಸೆ ಸಿಕ್ಕಾಗ ಸಂತೃಪ್ತ ಭಾವ ಮೂಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಂಜುನಾಥ್ ಪ್ರಾರ್ಥಿಸಿ, ಪ್ರೊ. ಆಶಾಲತ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಅಧ್ಯಕ್ಷ ವಾಗೇಶ್ ಮಾತನಾಡಿದರು. ಮುಖ್ಯ ಅತಿಥಿಗಳನ್ನು ಕೇಶವಮೂರ್ತಿ ಪರಿಚಯಿಸಿದರು. ಘನಶ್ಯಾಮ್, ದಿಲೀಪ್ ನಾಡಿಗ್, ಸ್ಮೀತರೂಪೇಶ್, ದೇವಿಕುಮಾರ್ ನಡೆಸಿಕೊಟ್ಟರು. ರೋಟರಿ ಜಿ.ವಿಜಯಕುಮಾರ್ ಮತ್ತು ಸಮನ್ವಯಕಾಶಿ ನಿರೂಪಿಸಿದರು. ಪ್ರಾಂಶುಪಾಲೆ ಮಮತಾ, ಪ್ರಕಾಶ್ ಕುಮಾರ್ ಜೈನ್, ಸೈಯದ್ ಅಬೂತಾಹಿರ್, ಮಹೇಶ್, ನವೀನ್, ಸುನೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾಲೇಜು ಹುಡುಗಾಟಿಕೆ ದಿನಗಳನ್ನು, ಸ್ನೇಹಿತರನ್ನು ಮರೆಯುವಂತೆಯೇ ಇಲ್ಲ. ಆ ದಿನಗಳೇ ಇಂದು ಶಾಸಕರಾಗಲು ಕಾರಣ, ವಿಧಾನ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅಂದು ಭೋದಿಸಿದ ಪ್ರಾಧ್ಯಾಪಕರ ಸಲಹೆ ಸೂಚನೆಗಳು ಇಂದಿಗೂ ಸಹಕಾರಿಯಾಗಿದೆ.