ರೋಟರಿ ಸಂಸ್ಥೆ ಕೇವಲ ಒಂದು ಕ್ಲಬ್ ಅಲ್ಲ, ಅದೊಂದು ಕುಟುಂಬ

KannadaprabhaNewsNetwork | Published : Nov 5, 2024 12:41 AM

ಸಾರಾಂಶ

ಕೆ.ಆರ್.ಪೇಟೆ ಪಟ್ಟಣದಲ್ಲಿ ರೋಟರಿ ಕ್ಲಬ್ ಆಫ್ ಕೆ.ಆರ್.ಪೇಟೆ ಈ ಹಿಂದೆ ಆರಂಭಗೊಂಡಿತ್ತಾದರೂ ಕಾರಣಾಂತರಿಂದ ಅದು ಕಾರ್ಯ ಸ್ಥಗಿತಗೊಂಡಿತು. ಈಗ ರಾಜ್ಯ ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಸಾರಥ್ಯದಲ್ಲಿ ಪಟ್ಟಣದಲ್ಲಿ ರೋಟರಿ ಸಂಸ್ಥೆ ತನ್ನ ಸೇವಾ ಕಾರ್ಯ ಚಟುವಟಿಕೆಗಳಿಗೆ ಸಿದ್ಧಗೊಂಡಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದಲ್ಲಿ ನ.15ರಂದು ಕೆ.ಆರ್.ಪೇಟೆ ರೋಟರಿ ಕ್ಲಬ್‌ನ ನೂತನ ಶಾಖೆ ಆರಂಭವಾಗಲಿದೆ.

ಪಟ್ಟಣದ ಜಯನಗರ ಬಡಾವಣೆಯ ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಕಾರ್ಯಾಲಯದಲ್ಲಿ ನಡೆದ ರೋಟರಿ ಕ್ಲಬ್ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ನೂತನ ರೋಟರಿ ಕ್ಲಬ್ ಆರಂಭದ ಬಗ್ಗೆ ತೀರ್ಮಾನಿಸಲಾಯಿತು.ರೋಟರಿ ಕ್ಲಬ್ ಸೇವಾ ವಿಸ್ತರಣಾ ಘಟಕದ ಮುಖ್ಯಸ್ಥ ಬೆಂಗಳೂರಿನ ತಿರುಮುರುಗನ್ ಮಾತನಾಡಿ, ಪಟ್ಟಣದಲ್ಲಿ ರೋಟರಿ ಕ್ಲಬ್ ಆಫ್ ಕೆ.ಆರ್.ಪೇಟೆ ಈ ಹಿಂದೆ ಆರಂಭಗೊಂಡಿತ್ತಾದರೂ ಕಾರಣಾಂತರಿಂದ ಅದು ಕಾರ್ಯ ಸ್ಥಗಿತಗೊಂಡಿತು. ಈಗ ರಾಜ್ಯ ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಸಾರಥ್ಯದಲ್ಲಿ ಪಟ್ಟಣದಲ್ಲಿ ರೋಟರಿ ಸಂಸ್ಥೆ ತನ್ನ ಸೇವಾ ಕಾರ್ಯ ಚಟುವಟಿಕೆಗಳಿಗೆ ಸಿದ್ಧಗೊಂಡಿದೆ ಎಂದರು.

ರೋಟರಿ ಸಂಸ್ಥೆ ಕೇವಲ ಒಂದು ಕ್ಲಬ್ ಅಲ್ಲ. ಅದೊಂದು ಕುಟುಂಬ. ಕ್ಲಬ್‌ನ ಸದಸ್ಯರು ವಾರಕ್ಕೊಮ್ಮೆ ಸಭೆ ನಡೆಸಿ ತಮ್ಮ ಹವ್ಯಾಸ ಮತ್ತು ಅನುಭವ ವಿಸ್ತರಿಸಿಕೊಂಡು ಸಮಾಜ ಸೇವೆಗೆ ಅರ್ಪಿಸಿಕೊಂಡಿದ್ದಾರೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಆರೋಗ್ಯ ಶಿಬಿರ, ಕೃಷಿ, ಶಿಕ್ಷಕರಿಗೆ ತರಬೇತಿ ಹೀಗಿ ಎಲ್ಲಾ ರೀತಿಯ ಚಟುವಟಿಕೆಗಳಲ್ಲೂ ತೊಡಗಿದೆ ಎಂದರು.

ನೂತನ ಪದಾಧಿಕಾರಿಗಳು:

ಇದೇ ವೇಳೆ ರೋಟರಿ ಕ್ಲಬ್ ಆಫ್ ಕೆ.ಆರ್.ಪೇಟೆ ಘಟಕದ ನೂತನ ಅಧ್ಯಕ್ಷರಾಗಿ ಆರ್.ಟಿ.ಓ ಮಲ್ಲಿಕಾರ್ಜುನ್, ಕಾರ್ಯದರ್ಶಿಯಾಗಿ ರಂಗನಾಥ್, ಖಜಾಂಚಿಯಾಗಿ ಕೆ.ಎಂ.ಪ್ರಸನ್ನ ಕುಮಾರ್, ಕ್ಲಬ್ ಸೇವಾ ನಿರ್ದೇಕರಾಗಿ ಆರ್.ವಾಸು, ಜಯಕೀರ್ತಿ, ಕೆ.ಆರ್.ನೀಲಕಂಠ, ರಂಗಸ್ವಾಮಿ, ಕೆ.ಆರ್.ಯೋಗೇಶ್, ಜಿ.ಎಸ್.ಮಂಜು, ಎಂ.ಎಸ್.ಮಹೇಶ್ ಕುಮಾರ್, ಬಿ.ಎನ್.ಸುಕನ್ಯಾ, ಎಂ.ಕೆ.ಹರಿಚರಣತಿಲಕ್, ಅಲ್ಲಮಪ್ರಭು, ಜಿ.ಕೆ.ಮಹೇಶ್ ಅವರನ್ನು ಆಯ್ಕೆ ಮಾಡಲಾಯಿತು.

ಕೋಲಾರ ರೋಟರಿ ಕ್ಲಬ್ ಅಧ್ಯಕ್ಷ ರಾಮಕೃಷ್ಣ, ಬೆಂಗಳೂರು ರೋಟರಿ ಕ್ಲಬ್ ಅನುಷ್ಠಾನ ಸಮಿತಿ ನರ್ಮದಾ, ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್, ಅಕ್ಕಿಹೆಬ್ಬಾಳು ಆರ್.ವಾಸು, ಯಗಚಗುಪ್ಪೆ ಬಸವರಾಜು, ಬಳ್ಳೇಕೆರೆ ಮಂಜುನಾಥ್, ಅಕ್ಕಿಹೆಬ್ಬಾಳು ಮಹೇಶ್ ನಾಯಕ್, ನಾಟನಹಳ್ಳಿ ಸಾಗರ್, ಪುರುಷೋತ್ತಮ್, ಶಿಕ್ಷಕರಾದ ಭೈರಯ್ಯ, ರಂಗಸ್ವಾಮಿ, ಜಿ.ಎಸ್.ಮಂಜು, ಯೋಗಗುರು ಅಲ್ಲಮಪ್ರಭು, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ಸೇರಿದಂತೆ ಹಲವರು ಇದ್ದರು.

Share this article