ಸಮಾಜದ ಉದ್ಧಾರಕ್ಕೆ ರೋಟರಿ ಕೊಡುಗೆ ಅಪಾರ: ಅಶ್ವಥ್‌

KannadaprabhaNewsNetwork |  
Published : Aug 17, 2026, 02:15 AM IST
 ಅಶ್ವಥ ನಾರಾಯಣ | Kannada Prabha

ಸಾರಾಂಶ

ಈ ವೇಳೆ ಉತ್ತಂಬಳ್ಳಿ ಜನ ವಿಕಾಸ ರೋಟರಿ ಸಮುದಾಯಗಳ ಅಧ್ಯಕ್ಷರಾಗಿ ಶ್ವೇತಾ, ಮುಳ್ಳೂರು ರೋಟರಿ ಸಮುದಾಯ ಅಧ್ಯಕ್ಷರಾಗಿ ಎಂ.ಪಿ. ರೇಚಣ್ಣಸ್ವಾಮಿ, ಸತ್ತೇಗಾಲ ಕೋಟೆ ಗ್ರಾಮದ ರೋಟರಿ ಅಧ್ಯಕ್ಷರಾಗಿ ಆಗಿ ಎಸ್. ಪುಟ್ಟರಾಜು, ಸಿದ್ದಯ್ಯನಪುರ ರೋಟರಿಗೆ ಸಿದ್ದರಾಜಮ್ಮ, ಸತ್ತೇಗಾಲ ಹ್ಯಾಂಡ್ ಪೋಸ್ಟ್ ಅಧ್ಯಕ್ಷರಾಗಿ ನೇಮಕಗೊಂಡ ರವಿಶಂಕರ್‌ ಅವರಿಗೆ ಪದವಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ವಿಶ್ವದಲ್ಲೇ ಅತಿ ಹೆಚ್ಚಿನ ರೋಟರಿ ಸಮುದಾಯಗಳನ್ನು ಹೊಂದಿರುವ ಕೀರ್ತಿ ಕೊಳ್ಳೇಗಾಲ ರೋಟರಿಗೆ ಸಲ್ಲಲಿದ್ದು, ವಿಶ್ವದಲ್ಲಿಯೇ ದೊಡ್ಡ ಮಟ್ಟದ ಸೇವಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ ಎಂದು ಮೇಜರ್‌ ಡೋನರ್‌ ಜಿ.ಆರ್‌. ಅಶ್ವಥ ನಾರಾಯಣ ಹೇಳಿದರು.

ರೋಟರಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಪತ್ತೆಹಚ್ಚಿ ಅವುಗಳ ಪರಿಹಾರಕ್ಕೆ ರೋಟರಿ ಸಹಯೋಗದೊಡನೆ ಶ್ರಮಿಸಲು ರೋಟರಿ ಸಮುದಾಯ ಅಧ್ಯಕ್ಷರು ಮುಂದಾಗಬೇಕು. ಜಿಲ್ಲಾ ರೋಟರಿ ಸಮುದಾಯಗಳ ಅಧ್ಯಕ್ಷರಾಗಿದ್ದ ರೊ.ಬಿ.ಕೆ. ಪ್ರಕಾಶ್ ಈಗಾಗಲೇ ಕೊಳ್ಳೇಗಾಲ ರೋಟರಿ ಸಂಸ್ಥೆಯಿಂದ ೨೪ ರೋಟರಿ ಸಮುದಾಯಗಳನ್ನು ಪ್ರಾರಭಿಸಿದ್ದು, ಈ ವರ್ಷ ಇನ್ನೂ ಹೆಚ್ಚಿನ ಸಂಸ್ಥೆ ಗಳನ್ನು ಪ್ರಾರಂಭಿಸುವ ಗುರಿ ಇದೆ ಎಂದರು.

ಈ ವೇಳೆ ಉತ್ತಂಬಳ್ಳಿ ಜನ ವಿಕಾಸ ರೋಟರಿ ಸಮುದಾಯಗಳ ಅಧ್ಯಕ್ಷರಾಗಿ ಶ್ವೇತಾ, ಮುಳ್ಳೂರು ರೋಟರಿ ಸಮುದಾಯ ಅಧ್ಯಕ್ಷರಾಗಿ ಎಂ.ಪಿ. ರೇಚಣ್ಣಸ್ವಾಮಿ, ಸತ್ತೇಗಾಲ ಕೋಟೆ ಗ್ರಾಮದ ರೋಟರಿ ಅಧ್ಯಕ್ಷರಾಗಿ ಆಗಿ ಎಸ್. ಪುಟ್ಟರಾಜು, ಸಿದ್ದಯ್ಯನಪುರ ರೋಟರಿಗೆ ಸಿದ್ದರಾಜಮ್ಮ, ಸತ್ತೇಗಾಲ ಹ್ಯಾಂಡ್ ಪೋಸ್ಟ್ ಅಧ್ಯಕ್ಷರಾಗಿ ನೇಮಕಗೊಂಡ ರವಿಶಂಕರ್‌ ಅವರಿಗೆ ಪದವಿ ಪ್ರದಾನ ಮಾಡಲಾಯಿತು.

ರೋಟರಿ ವಲಯ 9ರ ಝೋನಲ್‌ ಲೆಫ್ಟಿನೆಂಟ್ ರೊ. ನಂದೀಶ್, ರೋಟರಿ ಸಮುದಾಯ ಜೋನಲ್ ಕೋರ್ಡಿನೇಟರ್‌ ಮಹದೇವ, ಮಾಜಿ ರೋಟರಿ ಅಸಿಸ್ಟೆಂಟ್ ಗವರ್ನರ್‌ ಬಸವರಾಜು, ಕಾರ್ಯದರ್ಶಿ ರಾಜಮಲ್ಲು, ಉಷಾ ವೆಂಕಟಾಚಲ, ಕೆ. ಪುಟ್ಟರಸಶೆಟ್ಟಿ, ಎಸ್. ಪ್ರವೀಣ್, ಶಿವಾನಂದ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಾವಳಿಯಲ್ಲಿ ಕ್ಷೀಣಿಸುತ್ತಿದೆ ಕಪ್ಪೆಗಳ ಸಂತತಿ!
ಲಭ್ಯತೆ ಆಧರಿಸಿ ತ.ನಾಡಿಗೆ ಕಾವೇರಿ ನೀರು: ಸಿಎಂ