ರೋಟರಿ ಸಿಲ್ಕ್ ಆಹಾರ ಮೇಳ, ವಸ್ತು ಪ್ರದರ್ಶನ ಯಶಸ್ವಿ

KannadaprabhaNewsNetwork |  
Published : Dec 17, 2024, 01:03 AM IST
ಎದೆ ತುಂಬಿ ಹಾಡುವೆನು ಖ್ಯಾತಿಯ  ಕು. ಶ್ರೇಯ ಪಿ.ಜೈನ್ ಅವರು | Kannada Prabha

ಸಾರಾಂಶ

ಕಾಡಂಚಿನ ಮೂಕನಪಾಳ್ಯ ಸರ್ಕಾರಿ ಶಾಲೆಯ ಅಭಿವೃದ್ದಿಗಾಗಿ ರೋಟರಿ ಸಿಲ್ಕ್ ಸಿಟಿ ಆಯೋಜನೆ ಮಾಡಿರುವ ಆಹಾರ ಮೇಳ ಮತ್ತು ವಸ್ತುಪ್ರದರ್ಶನ ಎರಡು ದಿನಗಳ ಬಹಳ ಯಶಸ್ವಿಯಾಗಿದ್ದು, ೧೦ ಸಾವಿರಕ್ಕು ಹೆಚ್ಚು ಜನರು ಮೇಳದಲ್ಲಿ ಭಾಗವಹಿಸಿ, ವಿವಿಧ ಖಾದ್ಯಗಳ ಆಹಾರವನ್ನು ಸವಿದು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕಾಡಂಚಿನ ಮೂಕನಪಾಳ್ಯ ಸರ್ಕಾರಿ ಶಾಲೆಯ ಅಭಿವೃದ್ದಿಗಾಗಿ ರೋಟರಿ ಸಿಲ್ಕ್ ಸಿಟಿ ಆಯೋಜನೆ ಮಾಡಿರುವ ಆಹಾರ ಮೇಳ ಮತ್ತು ವಸ್ತುಪ್ರದರ್ಶನ ಎರಡು ದಿನಗಳ ಬಹಳ ಯಶಸ್ವಿಯಾಗಿದ್ದು, ೧೦ ಸಾವಿರಕ್ಕು ಹೆಚ್ಚು ಜನರು ಮೇಳದಲ್ಲಿ ಭಾಗವಹಿಸಿ, ವಿವಿಧ ಖಾದ್ಯಗಳ ಆಹಾರವನ್ನು ಸವಿದು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ನಗರದಲ್ಲಿ ಶನಿವಾರ ಹಾಗೂ ಭಾನುವಾರ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀ ಸಿದ್ದಬಸವರಾಜಸ್ವಾಮಿಗಳ ಅನುಭವ ಮಂಟಪದಲ್ಲಿ ರೋಟರಿ ಸಿಲ್ಕ್‌ಸಿಟಿ ಪದಾಧಿಕಾರಿಗಳು ಎರಡು ದಿನಗಳ ಆಹಾರ ಮೇಳ ಮತ್ತು ವಸ್ತುಪ್ರದರ್ಶನವನ್ನು ಪ್ರಥಮ ಬಾರಿಗೆ ಚಾ.ನಗರದಲ್ಲಿ ಆಯೋಜನೆ ಮಾಡಿ, ಉತ್ತಮ ಪ್ರಕ್ರಿಯೆ ವ್ಯಕ್ತವಾಗುವ ಜತೆಗೆ ಸಾಯಂಕಾಲ ನಗರದ ಜನರು ಮನೆಯಿಂದ ಹೊರ ಬಂತು ಮೇಳವನ್ನು ನೋಡುವ ಸದಾವಕಾಶವನ್ನು ಕಲ್ಪಿಸಿಕೊಟ್ಟಿದ್ದರು.

ಮೇಳದಲ್ಲಿ ಸುಮಾರು ೫೦ಕ್ಕು ಹೆಚ್ಚು ಮಳಿಗೆಗಳು ಇದ್ದು, ೨೦ಕ್ಕು ಹೆಚ್ಚು ಆಹಾರ ಮೇಳದಲ್ಲಿ ವೈವಿದ್ಯಮವಾದ ಆಹಾರ ಪದಾರ್ಥಗಳು ಸೇವಿದರು. ಜೊತೆಗೆ ಮಳಿಗೆಗೆಯಲ್ಲಿ ತಕ್ಷಣ ತಯಾರಿಸುವ ಕೊಡುವ ವ್ಯವಸ್ಥೆ, ಶುಚಿತ್ವ ಮತ್ತು ಪ್ರಸಿದ್ಧ ಹೋಟೆಲ್ ಮಾಲೀಕರು ಭಾಗವಹಿಸಿದ್ದು, ಮೈಸೂರು ಸ್ಯಾಂಡಲ್ ಸೋಪು, ನಂದಿನಿ ಸಿಹಿ ಉತ್ಪನ್ನಗಳ ಮಳಿಗೆ ಸೇರಿದಂತೆ ಹೆಸರಾಂತ ಕಂಪನಿಗಳು ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದವು. ಸಂಜೆ ೪ ಗಂಟೆಯ ನಂತರ ಆಹಾರ ಮೇಳ, ವಸ್ತುಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾಗರಿಕರು ಕುಟುಂಬ ಸಮೇತ ಆಗಮಿಸಿದರು.

ಸಮರೋಪ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ನಗರದ ಚನ್ನಬಸವ ಸ್ವಾಮೀಜಿ, ಕಾಡಂಚಿನಲ್ಲಿರುವ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಲು ರೋಟರಿ ಸಿಲ್ಕ್‌ಸಿಟಿ ತಂಡದವರು ಆಯೋಜನೆ ಮಾಡಿದ್ದ ಕಾರ್ಯಕ್ರಮಕ್ಕೆ ಮಳೆಯು ಸಹ ಅವಕಾಶ ಮಾಡಿಕೊಟ್ಟಿತ್ತು. ಬಹಳ ಉತ್ಸಾಹ ಹಾಗೂ ಶಿಸ್ತಿನಿಂದ ರೋಟರಿ ಸಿಲ್ಕ್‌ಸಿಟಿ ತಂಡವರು ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಅವರಿಗೆ ಜಿಲ್ಲೆಯ ಜನತೆ ಪರವಾಗಿ ಅಭಿನಂದನೆ ಸಲ್ಲಿಸೋಣಎಂದರು.

ಎದೆ ತುಂಬಿ ಹಾಡುವೆನು ಖ್ಯಾತಿಯ ಶ್ರೇಯ ಪಿ.ಜೈನ್ ಅವರು ಭಾವಗೀತೆ ಹಾಗೂ ಭಕ್ತಿಗೀತೆಗಳನ್ನು ಹಾಡಿ ರಂಜಿಸಿದರೆ, ಮೈಸೂರಿನ ಗುರುಸ್ವಾಮಿ ಅವರು ಮ್ಯಾಜಿಕ್ ಶೋ ಮೂಲಕ ಪುಟಾಣಿಗಳನ್ನು ಸಂತೋಷ ಪಡಿಸಿದ್ದರು. ರೋಟರಿ ಸಿಲ್ಕ್‌ಸಿಟಿಯಿಂದ ಪ್ರಾಯೋಜಕರು, ಮಳಿಗೆ ಮಾಲೀಕರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.

ಪಡಗೂರು ಅಡವಿ ಮಠಾಧ್ಯಕ್ಷ ಉದ್ದಾನಸ್ವಾಮೀಜಿ, ಮೇಳದ ಕ್ಯಾಪನ್ ಡಿ.ಪಿ.ವಿಶ್ವಾಸ್, ಉಪ ಕ್ಯಾಪನ್ ಮುರುಗೇಂದ್ರಸ್ವಾಮಿ, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಮಾಣಿಕ್ಯ ಚಂದ್ರ ಸೀರ್ವಿ, ಕಾರ್ಯದರ್ಶಿ ಶಮಿತ್ ಕುಮಾರ್, ಮಾಜಿ ಅಧ್ಯಕ್ಷರಾದ ದೊಡ್ಡರಾಯಪೇಟೆ ಗಿರೀಶ್, ಅಕ್ಷಯ್‌ಕುಮಾರ್, ಚೈತನ್ಯ ಜಿ. ಹೆಗಡೆ, ರಾಜೇಶ್, ಮಣಿಕಂಠ, ರಾಜು, ಶ್ರೀನಿಧಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ