ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ
೬ರಿಂದ ೧೦ನೇ ತರಗತಿ ವರೆಗೆ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಓದುತ್ತಿದ್ದು, ಶನಿವಾರ ಪಂಚಮಿ ಹಬ್ಬದ ರಜೆಗೆಂದು ತೆರಳಲು ಸಜ್ಜಾದ ಮಕ್ಕಳಿಗೆ ಮಧ್ಯಾಹ್ನ ೩ ಗಂಟೆಯಾದರೂ ಊಟ ನೀಡದೇ ಇರುವುದನ್ನು ಮಕ್ಕಳ ಪಾಲಕರು ಕಂಡು ಆಕ್ರೋಶಗೊಂಡರು.
ವಸತಿ ಶಾಲೆಯ ಮುಂಭಾಗದಲ್ಲಿ ಮಕ್ಕಳ ಪಾಲಕರು ಪತ್ರಕರ್ತರ ಮುಂದೆ ವಸತಿ ನಿಲಯದ ಅವ್ಯವಸ್ಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಹಾಲಿಲ್ಲದ ಚಹಾ, ಎಣ್ಣೆಯಿಲ್ಲದ ದೋಸೆ ಇದು ವಸತಿ ಶಾಲೆಯ ಪ್ರಮುಖ ಖಾದ್ಯವಾಗಿದ್ದು, ಗುಣಮಟ್ಟದ ಊಟ, ಉಪಾಹಾರ ಸಿಗದೇ ಮಕ್ಕಳು ಪರದಾಡುತ್ತಿದ್ದಾರೆ ಎಂದರು.ಮೆನು ಚಾರ್ಟ್ ಪಾಲನೆ ಇಲ್ಲ:
೨೫೦ ಮಕ್ಕಳಿಗೆ ನಿಯಮಾನುಸಾರ ತರಕಾರಿ ಒದಗಿಸಿದರೆ ಗುಣಮಟ್ಟದ ಅಡುಗೆ ಮಾಡುವದಕ್ಕೆ ನಾವು ಸಿದ್ಧ. ಸಂಬಂಧಿಸಿದವರು ಕಡಿಮೆ ನೀಡುವುದರ ಪರಿಣಾಮ ಮಕ್ಕಳಿಗೆ ಕಳಪೆ ಆಹಾರ ಒದಗಿಸುವುದು ನಮಗೆ ಅನಿವಾರ್ಯವಾಗಿದೆ ಎನ್ನುತ್ತಾರೆ ಅಡುಗೆಯವರು.
ಇವತ್ತಿನ ಅಡುಗೆ ಬೇಡ:
ಸರ್ಕಾರದ ನಿಯಮದ ಪ್ರಕಾರ ಒಂದು ತಿಂಗಳಲ್ಲಿ ಕನಿಷ್ಠ ಮೂರು ಬಾರಿ ಚಿಕನ್ ಊಟ ನೀಡಬೇಕಿದೆ. ಹಲವು ದಿನಗಳಿಂದ ಮಕ್ಕಳು ಮೊಟ್ಟೆ ಸಹ ಕಂಡಿಲ್ಲ. ಮಕ್ಕಳ ಪೌಷ್ಟಿಕಾಂಶ ಸಮಸ್ಯೆ ಎದುರಿಸಬಾರದೆಂದು ಸರ್ಕಾರ ಸಾಕಷ್ಟು ದುಡ್ಡನ್ನು ಸುರಿಸಿದರೂ ಮಕ್ಕಳಿಗೆ ಮಾತ್ರ ಅದು ತಲುಪುತ್ತಿಲ್ಲ ಎನ್ನುವದು ಪಾಲಕರ ಆಕ್ರೋಶವಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಎಲ್ಲವು ಚೆನ್ನಾಗಿತ್ತು. ಇತ್ತೀಚೆಗೆ ಶಾಲೆಯ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಇದಕ್ಕೆ ಯಾರು ಕಾರಣ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದ್ದರೂ ಅದನ್ನು ಬಳಸಿಕೊಳ್ಳಲು ಸಂಪೂರ್ಣ ವಿಫಲರಾಗಿದ್ದಾರೆ. ಇದೇ ರೀತಿ ಮುಂದುವರೆದರೆ ನಮ್ಮ ಮಕ್ಕಳನ್ನು ವಸತಿ ಶಾಲೆಗೆ ಕಳುಹಿಸುವುದಿಲ್ಲ. ನಮ್ಮ ಮಕ್ಕಳು ನಮಗೆ ಭಾರವಾಗಿಲ್ಲ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬಿದ್ದರೆ ಯಾರು ಹೊಣೆಗಾರರು ಎಂದು ಹೆಸರು ಹೇಳದ ಮಕ್ಕಳ ತಂದೆ -ತಾಯಿ ಕಿಡಿಕಾರಿದರು.ವಸತಿ ಶಾಲೆಯಲ್ಲಿ ಸಣ್ಣ ಪುಟ್ಟ ಅವ್ಯವಸ್ಥೆ ಆಗಿರಬಹುದು. ನಾನು ಈ ಶಾಲೆಗೆ ವರ್ಗಾವಣೆಯಾಗಿ ಬಂದು ಕೇವಲ ೧೫ ದಿನಗಳು ಕಳೆದಿವೆ. ಶಾಲೆಗೆ ವಾರ್ಡನ್ ಇಲ್ಲದಿರುವದು ಇದಕ್ಕೆ ಮುಖ್ಯಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಅವ್ಯವಸ್ಥೆ ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ವಸತಿ ನಿಲಯದ ಮುಖ್ಯ ಶಿಕ್ಷಕಿ ಡಿ.ಸಿ. ನರೇಗಲ್ ತಿಳಿಸಿದ್ದಾರೆ.