- ಒಟ್ಟು 2 ಸೇತುವೆ ನಿರ್ಮಾಣಕ್ಕೆ ₹9 ಕೋಟಿ: ಶಾಸಕ ಕೆ.ಎಸ್.ಬಸವಂತಪ್ಪ ಹೇಳಿಕೆ
ತಾಲೂಕಿನ ಕುರ್ಕಿ ಗ್ರಾಮದ ಬಳಿ ಕುಸಿದಿದ್ದ ಭದ್ರಾ ಕಾಲುವೆ ಸೇತುವೆ ನಿರ್ಮಾಣಕ್ಕೆ ಕರ್ನಾಟಕ ನೀರಾವರಿ ನಿಗಮ ₹4.5 ಕೋಟಿ ತುರ್ತಾಗಿ ಬಿಡುಗಡೆ ಮಾಡಿದೆ ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಕುರ್ಕಿ ಗ್ರಾಮದ ಬಳಿ ಮಂಗಳವಾರ ಕಾಲುವೆ ಸೇತುವೆ ಕುಸಿದಿದ್ದು, ಜಮೀನಿಗೆ ರೈತರು ಹೋಗಿಬರಲು, ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಅಲ್ಲದೇ, ಸೇತುವೆ ಕುಸಿದ ಪರಿಣಾಮ ಹರಿಹರ-ಹರಪನಹಳ್ಳಿ ತಾಲೂಕಿಗೆ ನೀರಿನ ಸಂಪರ್ಕ ಕಲ್ಪಿಸುವ ಜಂಕ್ಷನ್ ಗೇಟ್ ಇಲ್ಲೇ ಇದೆ. ಇದರಿಂದಾಗಿ ಎರಡೂ ತಾಲೂಕಿಗೆ ಅತಿ ಹೆಚ್ಚು ನೀರು ಹರಿದು ಈ ಭಾಗದ ರೈತರಿಗೆ ನೀರಿನ ಕೊರತೆ ಎದುರಾಗುತ್ತಿದೆ. ಈ ಹಿನ್ನೆಲೆ ನೀರಾವರಿ ನಿಗಮದ ಎಂ.ಡಿ. ಗಮನಕ್ಕೆ ತರಲಾಗಿತ್ತು. ಈ ಹಿನ್ನೆಲೆ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕರು ಮಂಗಳವಾರ ಸಂಜೆಯೇ ಸೇತುವೆ ನಿರ್ಮಾಣಕ್ಕೆ ₹4.5 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಈಚೆಗೆ ಕಬ್ಬೂರು ಬಳಿ ಭದ್ರಾ ಕಾಲುವೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಹರಿದು ಹಳ್ಳದ ಬಳಿಯ ಸೇತುವೆ ಕಿತ್ತುಹೋಗಿತ್ತು. ಸೇತುವೆ ನಿರ್ಮಾಣಕ್ಕೆ ₹4.50 ಕೋಟಿ ಬಿಡುಗಡೆಯಾಗಿದೆ. ಒಟ್ಟು 2 ಸೇತುವೆ ನಿರ್ಮಾಣಕ್ಕೆ 9 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಬಸವಂತಪ್ಪ ಮಾಹಿತಿ ನೀಡಿದ್ದಾರೆ.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ದಾವಣಗೆರೆ ತಾಲೂಕಿನ ಕೋಡಿಹಳ್ಳಿ ಕ್ಯಾಂಪ್‌ನಲ್ಲಿ ಮಂಗಳವಾರ ರಾತ್ರಿ ಧಾರಾಕಾರ ಮಳೆಯಿಂದಾಗಿ, ಮನೆ ಬಿದ್ದು ಮೂವರು ತೀವ್ರ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
- - - -21ಕೆಡಿವಿಜಿ10, 11, 14: